ನಡೆ

Culture

ನುಡಿದರೆ ಮುತ್ತಿನ ಹಾರ

ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಹಾಗಾದರೆ ನುಡಿ ಅಂದರೇನು? ಮಾತಿನ ಮಹತ್ವ ಏನು? ನಮ್ಮ ನುಡಿ ಹೇಗಿರಬೇಕು? ವಚನ ಸುಭಾಷಿತ ಸ್ಮೃತಿಗಳು ಏನನ್ನುತ್ತವೆ?

ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ! ಮತ್ತು ಕನ್ನಡದ ಏಳು ಅಪಸ್ವರಗಳು

[ ಕನ್ನಡವೆಂಬುದು ಮಂತ್ರ ಕಣಾ!
ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ. - ಸಂ.]

ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

[ ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ- ಸಂ.]

ಸ್ತ್ರೀ ಸಂವೇದನೆ ಮತ್ತು ಸ್ತ್ರೀತ್ವ ವಾದ

ಸ್ತ್ರೀಯನ್ನು ದೇವತೆ ಎಂದೂ, "ಮಾತೃ ದೇವೋ ಭವ" ಎಂದೂ ಕರೆದ ಸನಾತನ ಧರ್ಮ ಅದೇ ಉಸುರಿನಲ್ಲಿ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದೂ ಗಂಡ ತೀರಿದ ಹೆಣ್ಣು ಮುಂಡೆ ಎಂದೂ ಘೋಷಿಸುತ್ತದೆ. ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಈಗ ವಿದ್ಯಾವಂತರಾಗಿದ್ದಾರೆ, ಸರಿ ಸುಮಾರಾಗಿ ಕೆಲಸ ಮಾಡುತ್ತಿದ್ದಾರೆ, ಆರ್ಥಿಕವಾಗಿ ಸುಧಾರಿಸಿದ್ದಾರೆ. ಆದರೂ, ಕೌಟುಂಬಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಅಸಮಾನಳು, ದೌರ್ಜನ್ಯಪೀಡಿತಳು.‌ ಹೊಣೆ ಹೆಚ್ಚಾಗಿದೆ; ಅದಕ್ಕೆ ತಕ್ಕಂತೆ ನೆಮ್ಮದಿ ಸಿಗುತ್ತಿಲ್ಲ. ಸ್ತ್ರೀ-ಪುರುಷರ ಅ-ಸಮೀಕರಣಗಳಲ್ಲಿ ತೃತೀಯ ಲಿಂಗವೂ ಸೇರಿ ಸಮಸ್ಯೆಯನ್ನು ತೊಡಕುಗೊಳಿಸಿದೆ. ಇದಕ್ಕೆ ಉತ್ತರ ಎನ್ನುವಂತೆ ಸ್ತ್ರೀತ್ವವಾದ ಮುಂದೆ ಬಂದಿದೆ. ಏನಿದು? ಇಲ್ಲಿ ಶ್ರೀನಿವಾಸ ಭಟ್ಟರು ಹೇಳುವ, ಸ್ತ್ರೀತ್ವ ಮತ್ತು ಸ್ತ್ರೀ ಸಂವೇದನೆಗಳ ಸಮ್ಮಿಶ್ರಣವೆ ಸುಖ ಶಾಂತಿ ಸಮೃದ್ಧಿಗಳಿಗೆ ಸಮರ್ಪಕ ರಸಾಯನವೆ? ಸಮೀಕರಣ ಸಾಧ್ಯವೆ? ಸಮತ್ವ ಸಾಧುವೆ? - ಸಂ

ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!

ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು.

ಅನ್ಯಾಯಕಾರಿ ಬ್ರಹ್ಮನ ಆಖ್ಯಾನ

ಮಳವಳ್ಳಿ ಮ್ಹಾದೇವಸ್ವಾಮಿಯವರ, ಸುಮಾರು ಮೂರು ದಶಕಗಳ ಹಿಂದೆಯೆ ರೆಕಾರ್ಡ ಮಾಡಿದ, ಮಹಾಭಾರತ ಆಧಾರಿತ, ಕಂಸಾಳೆ ಶೈಲಿಯ ಜಾನಪದ ಹಾಡೊಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ. ಈ ಹಾಡಿನ ಹಿನ್ನೆಲೆ ಏನು? ಅದರಲ್ಲಿನ “ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ” ಎನ್ನುವ ಒಂದೇ ಒಂದು ಸಾಲಿನಿಂದ ಇಂದಿನ ಯುವಕರ ಮನ ತಟ್ಟಲು ಏನು ಕಾರಣ? ಬದಲಾದ ಭಾರತದ ಸಾಮಾಜಿಕ ಪರಿಸ್ಥಿತಿಯೆ? ಸುಧಾರಿಸಿದ ಆರ್ಥಿಕ ಸ್ಥಿತಿಯೆ? ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಸ್ವಂತಿಕೆಯನ್ನು ಗಳಿಸಿದ್ದೆ? ಕ್ಷೀಣವಾದ ಪುರುಷಪ್ರಾಧಾನ್ಯತೆಯೆ? ಬದಲಿಸಲು ಕಠಿನವಾದ ಮನೋಸ್ಥಿತಿಯೆ? ಸಮಾಜದ ಒಳ್ಳೆಯ ಬೆಳವಣಿಗೆಗಳ ಜೊತೆಗೆ ಅನಿರೀಕ್ಷಿತ ದುಷ್ಪರಿಣಾಮಗಳೂ ಉಂಟೆ? ಈ ಪುರಾಣ-ವೈರಾಣದಲ್ಲಿ ಹೈರಾಣಾದವರು ಯಾರು? ಇವೆಲ್ಲವನ್ನೂ ತಮ್ಮ ಹರಿತ ಲೇಖನಿಯಿಂದ ಇಲ್ಲಿ ವಿಶ್ಲೇಷಿಸಿದ್ದಾರೆ ಸಂಜಯ ಹಾವನೂರ.

ಬೆಳಕು ತೋರಿದ ಬದುಕು : ಹೆಲನ್ ಕೆಲರ್

ಹೆಲನ್ ಕೆಲನ್‍ರಂಥವರು ಹುಟ್ಟುವುದು ಸಾಯುವುದಕ್ಕಲ್ಲ – ಅಪ್ರತಿಮ ಸೇವೆ- ಸಾಧನೆಗಳಿಂದ ಅಮರರಾಗುವುದಕ್ಕಾಗಿ!
ಅವಳ ವೈವಿಧ್ಯಮಯ, ಸಾಹಸಪೂರ್ಣ, ವಾತ್ಸಲ್ಯಪೂರಿತ, ಜ್ಞಾನಕೌತೂಹಲಭರಿತ ಜೀವನ ಮತ್ತು ಸಾಧನೆಗಳನ್ನೂ, ಅವಳು ಮಾಡಿದ ಲೋಕಾಧಿಕ ಉಪಕಾರವನ್ನೂ ಸ್ಮರಿಸಲು ನೆರವಾಗುವಂತೆ, “ಬೆಳಕು ತೋರಿದ ಬದುಕು” ಎಂಬ ಸಂಕ್ಷಿಪ್ತ ವೃತ್ತಾಂತವೊಂದು ಇಲ್ಲಿದೆ.

ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ, ಒಂದು ಸಂದೇಶ

[ಮೊನ್ನೆ ತಾನೆ ಕನ್ನಡ ಕಲಿಯ ಬಿತ್ತರಿಕೆ ಬಿಕಾಸ ೧೧-೨೦೨೩-೦೧ರಲ್ಲಿ ನಿಮಗೆ ಪರಿಚಯಿಸಿದ ಸಾಕೇತ ಸಿದ್ದಾಂತಕ್ಕೆ ಸ್ಪಂದಿಸಿ ಒಂದು ಸಂದೇಶವನ್ನು, ಲಲಿತ ಪ್ರಬಂಧವನ್ನು ಅನ್ನಿ, ಕಳಿಸಿದ್ದಾರೆ ರೂಪ ಮಂಜುನಾಥ. ಕರ್ನಾಟಕ ಸಾಂಸ್ಕೃತಿಕ ಸಂಘದ ಸುವರ್ಣ ಮಹೋತ್ಸವ‌ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ, ಕವನ ಓದಿದ ಮಕ್ಕಳ ಬಗ್ಗೆ, ಅವರನ್ನು ಬೆಳೆಸಿದ ತಾಯಿ ತಂದೆಯರ ಬಗ್ಗೆ, ಅರಳು ಮಲ್ಲಿಗೆ ಮತ್ತು ಗೋಕುಲ ಮಕ್ಕಳು ಎನ್ನುವ ಪುಟ್ಟ ಕನ್ನಡ ಸಾಂಸ್ಕೃತಿಕ ಸಮುದಾಯಗಳ ಬಗ್ಗೆ, ಹಾಗೂ ಸಾಕೇತ ಸಿದ್ಧಾಂತರ ಕವನಗಳನ್ನು ಪ್ರಕಟಿಸಿದ ಕನ್ನಡ ಕೂಟದ ಸ್ಮರಣ ಸಂಚಿಕೆಯ ಬಗ್ಗೆ, ತಮ್ಮ ಅನಿಸಿಕೆಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ]

ರೂಪ ಮಂಜುನಾಥ

ಕನ್ಸಡಕ್ಕೊಂದು ಸಾಕೇತ ಸಿದ್ಧಾಂತ

ಕನ್ನಡಕ್ಕೊಂದು

ಸಾಕೇತ ಸಿದ್ಧಾಂತ

ಏನಿದು ಸಾಕೇತ ಸಿದ್ಧಾಂತ?‌
ಕನ್ನಡ ಕೇವಲ ಒಂದು ವ್ಯಾವಹಾರಿಕ ಮಾಧ್ಯಮವೋ?‌ ಆಥವ ಅದಕ್ಕಿಂತ ಮಿಗಿಲಾದ ಮೌಲ್ಯ ಏನಾದರೂ ಅದರಲ್ಲಿ ಇದೆಯೆ?ಕನ್ನಡ ಕಲಿಯಲು ಅತ್ಯಂತ ಪರಿಣಾಮಕಾರಿ ವಿಧಾನ ಯಾವುದು?