ಕಂನುಡಿ

Subhashita

ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ - ಕಾಳಿದಾಸನ ಕಾವ್ಯದೃಷ್ಟಿ

ಪುರಾಣ ಅಂದರೆ ಹಿಂದಿನದು, ಹಳೆಯದು. ಅದೆಲ್ಲ ಒಳ್ಳೆಯದು. ಹೊಸದೆಲ್ಲವೂ ಕೆಟ್ಟದ್ದು. ಹಿಂದಿನದನ್ನು ಪ್ರಶ್ನಾತೀತವಾಗಿ ಪಾಲಿಸಬಹುದು. ಆದರೆ ಹೊಸದನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಈ ಸಾಮಾನ್ಯ ನಿಲುವು ಎಷ್ಟು ಸರಿ? ಕಾಳಿದಾಸ ಹೇಳಿದ್ದೇನು? ಕವಿ ಕಾಣದ್ದನ್ನು ಕಂಡವರಾರು? ಗಾದೆ ಮಾತು ಹೇಳಿದ್ದೇನು?

ತೋಳಬಂದಿ ಮತ್ತು ಸೌಂದರ್ಯಸಾಧನೆ

ಮನುಷ್ಯ‌, ಹೆಂಗಸಾಗಲಿ ಗಂಡಸಾಗಲಿ, ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಾನೆ.  ಇವುಗಳಲ್ಲಿ ಯಾವುದು ನಿಜವಾದ ಸೌಂದರ್ಯವರ್ಧಕ? ಯಾವುದು ಶಾಶ್ವತ? ಇದಕ್ಕೆ ೭ನೆ ಶತಮಾನದ, ವಿದ್ವಾಂಸನಾದ ಭರ್ತೃಹರಿಯ ಉತ್ತರ ಏನು?

ಶಂಖಣ್ಣನ ಹಣೆಬರಹ

ಚೆನ್ನುಡಿ

ಶಂಖಣ್ಣನ ಹಣೆಬರಹ

ಯಾವ ಮನೆತನದಲ್ಲಿ ಹುಟ್ಟಿದರೇನು? ಏನು ಕಲಿತರೇನು? ಏನು ಮಾಡಿದರೇನು?
ಮುಂದೆ ಏನಾಗುವುದು? ಎಲ್ಲವೂ ಹಣೆಬರಹ ಎಂದುಕೊಳ್ಳುವುದು ಸಾಮಾನ್ಯ. ವಿಶೇಷವಾಗಿ, ನಿರೀಕ್ಷಿಸಿದ್ದು ಆಗದಿದ್ದಾಗ, ಕೆಲವರಿಗೆ ಸಿರಿ, ಸಂಪತ್ತು, ಸೌಲಭ್ಯ, ಖ್ಯಾತಿ, ಹೀಗೆಲ್ಲ, ಪಾತ್ರರಿದ್ದರೂ ಸಿಗದಿದ್ದಾಗ, ಅಥವ ಅಪಾತ್ರರಿದ್ದರೂ ಅನಾಯಾಸವಾಗಿ ಸಿಕ್ಕಾಗ ಅಂದುಕೊಳ್ಳುವುದು ಹಣೆಬರಹ, ದೈವ, ಭಾಗ್ಯ, ಲಕ್ಕು, ಅಂತ! ಇದು ನಿಜವೋ, ಕೇವಲ ಸಮಾಧಾನಕ್ಕೋಸ್ಕರ ಹೇಳಿಕೊಳ್ಳುವ ಮಾತೋ? ಅಂತೂ ಒಂದಾನೊಂದು ಸಂದರ್ಭದಲ್ಲಿ ನಿಮಗೂ ಹೀಗೆ ಅನಿಸಿರಬಹುದು. ಎಲ್ಲವನ್ನೂ ಆದಂತೆ ಒಪ್ಪಿಕೊಂಡು ಕೂಡುವ ಜಾಯಮಾನ ಚಾಣಕ್ಯನದು ಅಲ್ಲ ಆದರೂ ಅವನು ಹೇಳಿದ್ದು ಹೀಗೆ:

ಚಾತಕ - ಕವಿಸಮಯ

ಚೆನ್ನುಡಿ

ಚಾತಕ - ಕವಿಸಮಯ

ಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.

ಮಹಾಲಕ್ಷ್ಮಿಯ ಮೇಲೊಂದು ಮಹಾ ಅಪವಾದ

ಮಹಾಲಕ್ಷ್ಮಿ ಆದಿ ದೇವತೆ; ಮಾತೆ. ಇವಳನ್ನು ಪೂಜಿಸುವುದು ಸಹಜ ಅಷ್ಟ ಐಶ್ವರ್ಯ ಕ್ಕಾಗಿ ಬೇಡಿಕೊಳ್ಳುವುದು ಸಾಮಾನ್ಯ. ದುಡ್ಡಿದ್ರೆ ಎಲ್ಲಾ ಐಶ್ವರ್ಯಗಳನ್ನು ಗಳಿಸಬಹುದು! ನೇಮ್ ಫೇಮ್ ಸಕ್ಸಸ್ ಬಿರುದು ಬಾವಲಿ ತಾವಾಗಿಯೇ ಒಲಿದು ಬರುತ್ತವೆ!
ಹೀಗಿದ್ದಾಗ, ಏನಪ್ಪಾ ಇವಳ ಮೇಲೆ ಮಹಾ ಅಪವಾದ?  ಲಕ್ಷ್ಮಿಯನ್ನು ದೂರುವ ಧೈರ್ಯ ಯಾರಿಗಿದೆ? ಯಾರು ಈ ದುರ್ಮತಿ?