ಭಜ ಗೋವಿಂದಂ - ಕಂತು ೧
ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಭಜ ಗೋವಿಂದಂ
(ಮೋಹಮುದ್ಗರ)
ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ
ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
(ಮೋಹಮುದ್ಗರ)
ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ
"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಇದರ ಸರಳ ಕನ್ನಡ ಅನುವಾದ ಇಲ್ಲಿದೆ, ಪದ್ಯರೂಪದಲ್ಲಿ.
ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲಿಂದ ಬಂದವು? ಒಳ್ಳೆಯವರು ಕೆಟ್ಟವರು ಹುಟ್ಟಿದ್ದಾದರೂ ಹೇಗೆ? ಒಂದೇ ಮನೆತನದಲ್ಲಿ ಅಣ್ಣತಮ್ಮಂದಿರಲ್ಲೆ ಒಳ್ಳೆಯವರೂ ಕೆಟ್ಟವರೂ ಇರುತ್ತಾರೆ. ಸಂಸ್ಕಾರ ಸಂಸ್ಕೃತಿ ಕೂಡ ಒಂದೇ. ಆದರೂ, ಯಾಕೆ ಹೀಗೆ ಎಂದು ಈ ಚೆನ್ನುಡಿ ವಿವರಿಸಬಲ್ಲುದೆ?
ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಲ್ಲವು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ?
ಭಾಷಾತಜ್ಞ ಮತ್ತು ಶಿಕ್ಷಕರಾದ ಕೆ.ಟಿ. ಗಟ್ಟಿ ಅವರ ಅನುಭವದ ಈ ಮಾತುಗಳು ಕನ್ನಡ ಕಲಿಗಳಿಗೆ ಇಂದೂ ಮಾರ್ಗದರ್ಶಿ ಆಗಿವೆ.
ಗಾಂಧಿ ಮಹಾತ್ಮನೆ? ಗಾಂಧಿ ಮಾಡಿದ್ದೆಲ್ಲ ಸರಿಯೆ? ನಾವು ಎಡವಿದೆವೆ? ಲಾಭ ಆದದ್ದು ಅಗುತ್ತಿರುವುದು ಯಾರಿಗೆ?
ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಹಾಗಾದರೆ ನುಡಿ ಅಂದರೇನು? ಮಾತಿನ ಮಹತ್ವ ಏನು? ನಮ್ಮ ನುಡಿ ಹೇಗಿರಬೇಕು? ವಚನ ಸುಭಾಷಿತ ಸ್ಮೃತಿಗಳು ಏನನ್ನುತ್ತವೆ?
[ ಕನ್ನಡವೆಂಬುದು ಮಂತ್ರ ಕಣಾ!
ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ. - ಸಂ.]
[ ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ- ಸಂ.]
ಸ್ತ್ರೀಯನ್ನು ದೇವತೆ ಎಂದೂ, "ಮಾತೃ ದೇವೋ ಭವ" ಎಂದೂ ಕರೆದ ಸನಾತನ ಧರ್ಮ ಅದೇ ಉಸುರಿನಲ್ಲಿ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದೂ ಗಂಡ ತೀರಿದ ಹೆಣ್ಣು ಮುಂಡೆ ಎಂದೂ ಘೋಷಿಸುತ್ತದೆ. ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಈಗ ವಿದ್ಯಾವಂತರಾಗಿದ್ದಾರೆ, ಸರಿ ಸುಮಾರಾಗಿ ಕೆಲಸ ಮಾಡುತ್ತಿದ್ದಾರೆ, ಆರ್ಥಿಕವಾಗಿ ಸುಧಾರಿಸಿದ್ದಾರೆ. ಆದರೂ, ಕೌಟುಂಬಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಅಸಮಾನಳು, ದೌರ್ಜನ್ಯಪೀಡಿತಳು. ಹೊಣೆ ಹೆಚ್ಚಾಗಿದೆ; ಅದಕ್ಕೆ ತಕ್ಕಂತೆ ನೆಮ್ಮದಿ ಸಿಗುತ್ತಿಲ್ಲ. ಸ್ತ್ರೀ-ಪುರುಷರ ಅ-ಸಮೀಕರಣಗಳಲ್ಲಿ ತೃತೀಯ ಲಿಂಗವೂ ಸೇರಿ ಸಮಸ್ಯೆಯನ್ನು ತೊಡಕುಗೊಳಿಸಿದೆ. ಇದಕ್ಕೆ ಉತ್ತರ ಎನ್ನುವಂತೆ ಸ್ತ್ರೀತ್ವವಾದ ಮುಂದೆ ಬಂದಿದೆ. ಏನಿದು? ಇಲ್ಲಿ ಶ್ರೀನಿವಾಸ ಭಟ್ಟರು ಹೇಳುವ, ಸ್ತ್ರೀತ್ವ ಮತ್ತು ಸ್ತ್ರೀ ಸಂವೇದನೆಗಳ ಸಮ್ಮಿಶ್ರಣವೆ ಸುಖ ಶಾಂತಿ ಸಮೃದ್ಧಿಗಳಿಗೆ ಸಮರ್ಪಕ ರಸಾಯನವೆ? ಸಮೀಕರಣ ಸಾಧ್ಯವೆ? ಸಮತ್ವ ಸಾಧುವೆ? - ಸಂ