ಕಂನುಡಿ
ಆಕಾಶಾತ್ ಪತಿತಂ - ಬಾನಿಂದ ಬಿದ್ದ
ಶಿವ, ವಿಷ್ಣು, ಗಣೇಶ, ಪಾರ್ವತಿ, ಲಕ್ಷ್ಮಿ ಹೀಗೆ ನೂರೆಂಟು ದೇವರುಗಳು ಇದ್ದಾರಲ್ಲ, ಯಾರನ್ನು ಪೂಜಿಸಲಿ?
ಕಂನುಡಿ
ಬಾನಿಂದ ಬಿದ್ದ ನೀರೆಲ್ಲ
ಹರಿಯುವಂತೆ ಕಡಲಿನ ಕಡೆಗೆ,
ಯಾ ದೇವಗೂ ಇತ್ತ ನಮನ
ಮಾದೇವನಡಿಗಳಿಗೆ ಮುಡಿಪು.
ಸಂಸ್ಕೃತ ಮೂಲ *
ಆಕಾಶಾತ್ ಪತಿತಂ ತೋಯಂ
ಯಥಾ ಗಚ್ಛತಿ ಸಾಗರಂ,
ಸರ್ವ ದೇವ ನಮಸ್ಕಾರಃ
ಕೇಶವಂ ಪ್ರತಿಗಚ್ಛತಿ.
ಆಕಾಶದಿಂದ ಬೀಳುವ ಎಲ್ಲ ಮಳೆ ನೀರು, ಕೊನೆಯಲ್ಲಿ ಸಮುದ್ರವನ್ನು ಸೇರುತ್ತದೆ. ಹಾಗೆಯೆ, ಯಾವ ದೇವರಿಗೆ ಮಾಡಿದ ಪೂಜೆ ಕೂಡ, ಕೊನೆಯಲ್ಲಿ, ಆ ಪರಮಾತ್ಮನಿಗೆ (ವಿಷ್ಣುವಿಗೆ) ಸಲ್ಲುತ್ತದೆ.
ಅಂದರೆ, ದೇವ ಒಬ್ಬ ನಾಮ ಹಲವು. ದೇವ ಒಬ್ಬ ರೂಪ ಹಲವು. ದೇವರನ್ನು ಯಾವುದೇ ಹೆಸರಿನಲ್ಲಿ, ಕೇಶವ ಆಗಲೀ, ಈಶ್ವರ ಆಗಲೀ - ಭಜಿಸಬಹುದು; ಯಾವುದೇ ರೂಪದಲ್ಲಿ - ಶಂಖ ಚಕ್ರ ಗದಾ ಪದ್ಮಗಳನ್ನು ಹಿಡಿದ ಚತುರ್ಭುಜನಾಗಲಿ, ಸಾಲಿಗ್ರಾಮವೆ ಆಗಲಿ; ಡಮರು ತ್ರಿಶೂಲಗಳನ್ನು ಹಿಡಿದ ಭಸ್ಮ ಬಳಿದುಕೊಂಡ, ಜಟಾಜೂಟ, ಗಂಗಾಧರ ಚಂದ್ರಚೂಡನಾಗಲಿ, ಅಥವಾ ಲಿಂಗ ರೂಪವೆ ಆಗಲಿ - ಭಜಿಸಬಹುದು.
ಏಕಂ ಸತ್, ವಿಪ್ರಾ ಬಹುಧಾ ವದಂತಿ (ಋಗ್ವೇದ, ಮಂಡಲ ೧, ಸೂಕ್ತ ೧೬೪, ಮಂತ್ರ ೪೬.) ಅಂದರೆ ಸತ್ಯ ಒಂದೇ, ತಿಳಿದವರು ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ಸನಾತನ ಧರ್ಮದ ಸ್ಪಷ್ಟ ಘೋಷಣೆ. ಸೂರ್ಯನನ್ನು ಪೂಜಿಸುವ ಸೌರ, ದೇವಿಯನ್ನು ಅರಾಧಿಸುವ ಶಾಕ್ತ, ಶಿವನನ್ನು ಭಜಿಸುವ ಶೈವ, ವಿಷ್ಣುವನ್ನು ಅರ್ಚಿಸುವ ವೈಷ್ಣವ, ಗಣಪತಿಯನ್ನು ಗೌರವಿಸುವ ಗಾಣಪತ್ಯ ಇತ್ಯಾದಿ ಸಂಪ್ರದಾಯಗಳ ಮೂಲ ಇದೇ. ಎಲ್ಲವುಗಳ ಉದ್ದೇಶ ಒಂದು, ವಿಧಾನಗಳು ಹಲವು. ಹುಟ್ಟು-ಬದುಕು-ಸಾವುಗಳ ಚಕ್ರದಿಂದ ಬಿಡುಗಡೆಯೆ ಉದ್ದೇಶ; ಅದನ್ನು ಸಾಧಿಸುವ ವಿಧಾನಗಳು ಹಲವು. ನಿರ್ಗುಣ ನಿರಾಕಾರ ಪರಮ ಸತ್ಯವನ್ನು ಸೇರಲು ಸಹಕಾರಿಯಾಗುವ ಸಗುಣ ಸಾಕಾರ ದೇವತೆಗಳು ಹಲವು.
ಹೀಗೆ, ವೇದಾಂತದ ತಿಳಿವನ್ನು ಒಳಗೊಂಡ, ವೈವಿಧ್ಯತೆಯನ್ನು ಗೌರವಿಸುವ, ಸೂಕ್ತ ಉಪಮೆಯ ಈ ಸರಳ ಧಾರ್ಮಿಕ ಡೆಮೊಕ್ರಾಟಿಕ್ ತತ್ವದ ಶ್ಲೋಕ ಭಾರತೀಯತೆಯ ಪ್ರತೀಕ ಅಲ್ಲವೆ?.
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ.
* ಆಕರಗಳು:
೧. ಸೂಕ್ತಿಸುಧಾ, ಸಂ| ಆರ್.ಎಸ್. ಪಾಲಿವಾಲ
೨. ಸುಭಾಷಿತಪದ್ಯರತ್ನಾಕರ, ಮುನಿರಾಜ ವಿಶಾಲವಿಜಯ
೩. ಮಹಾಸುಭಾಷಿತ ಸಂಗ್ರಹ, ಸಂಪುಟ ೪, ಲುಡ್ವಿಕ್ ಸ್ಟರ್ನ್‌ಬಾಕ್
Links to the episode:
https://youtu.be/6yqReO2jtQA
https://creators.spotify.com/pod/show/kannadakali/episodes/-----Akashat…
There are 33 crores gods like Shiva, Vishnu, Ganesha, Parvati, Lakshm; who should I worship?
Kannudi
Akashat patitam : Baninda Bidda
Bāninda Bidda (Kannada)
bāninda bidda nīrella
hariyuvante kaḍalina kaḍege,
yā dēvagū itta namana
mādēvanaḍigaḷige muḍipu.
(As the water that falls from the sky flows towards the ocean,so do salutations all gods reach the feet of Mahadeva.)
Sanskrit original*
ākāśāt patitaṁ tōyaṁ
yathā gacchati sāgaraṁ,
sarva dēva namaskāraḥ
kēśavaṁ pratigacchati.
All the rain water that falls from the sky eventually reaches the Ocean. Similarly, the prayers to any god, ultimately, reaches the Supreme Being (Vishnu).
That is, God is One, God has many names. God is One, God has many forms. God can be worshipped by any name, whether it is Keshav or Ishwara; It can be worshipped in any form - be it a four-armed, holding a conch, a mace, a lotus, a saligram; a trident and damaru holding chandrachuda, jatajuta, Gangadhar, or a linga.
Ēkaṁ Sat, Viprā Bahudhā vadanti (r̥gvēda, maṇḍala 1, sūkta 164, mantra 46.) That is, the truth is one though the wise call it by many names. This is a clear declaration of Sanatana Dharma. This is the origin of the traditions of the Sun worshiping, the Shakti worshipping, the Shiva worshipping, the Vishnu worshipping, or the Ganapathi worshipping, etc. The purpose of all is one, the methods are many. The purpose is liberation from the cycle of birth-life-death; the methods of achieving it are many. There are many Saguna-Sakara deities who help one to attain the qualification-less,formless Supreme Truth.
This simple verse, religious and democratic in principle, which includes the knowledge of Vedanta, respects diversity, and suitable metaphor, Isn't this a symbol of Indianness?
Yours,
Viśvēśvara Dīkṣita
* Sources:
1. Suktisudha, Compiled by R.S. Paliwal
2. Subhashitapadyaratnakara, Muniraja Vishalavijaya
3. Mahasubhashita Sangraha, vol.4, Ludwik Sternbach
https://youtu.be/RPRW9XCwe8c
https://podcasters.spotify.com/pod/show/kannadakali/episodes/The-Good--…
ತಾಗುಲಿ: kannudi, democratic religion, sky, rain, one god
ಏನಂತೀರಿ?