ಶಂಕರ

Shankara

ಭಜ ಗೋವಿಂದಂ - ಕಂತು ೧

ಆದಿ ಶಂಕರ ಮತ್ತು ಶಿಷ್ಯರು ರಚಿಸಿದ

ಭಜ ಗೋವಿಂದಂ

(ಮೋಹಮುದ್ಗರ)

ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ

 

ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು

ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ

ಭಜ ಗೋವಿಂದಂ - ಕನ್ನಡ ಪದ್ಯಾನುವಾದ

"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಇದರ ಸರಳ ಕನ್ನಡ ಅನುವಾದ ಇಲ್ಲಿದೆ, ಪದ್ಯರೂಪದಲ್ಲಿ.

ಬೆನಕ ನಮನ

ಗಣೇಶ, ಡೊಂಕು ಕೊಂಬಿನ, ಡೊಳ್ಳು ಹೊಟ್ಟೆಯ, ದೊಡ್ಡ ಮೈಯ, ಒಂದೆ ಕೋರೆಯ, ಇಲಿ ವಾಹನದ, ಬೆನಕ, ಎಲ್ಲರಿಗೂ ಆಯಸ್ಸು ಆರೋಗ್ಯಗಳನ್ನು ನೀಡು; ಸದ್ಬುದ್ಧಿಯನ್ನು  ಕೊಡು; ಅವರ ಪ್ರಯತ್ನಗಳಿಗೆ ಬರುವ ಎಡರುಗಳನ್ನು ಅಳಿಸು;  
ಯಶಸ್ಸು ಅವರದಾಗಲಿ. ಎಲ್ಲ ಜನ ಜೀವಿ, ಜೀವ ಜಂತು, ಜೀವಾತ್ಮರುಗಳಿಗೆ ಶಾಂತಿ ಸುಖ ದೊರಕಲಿ. ಎಲ್ಲರಿಗೂ  ಒಳ್ಳೆಯದಾಗಲಿ;  
ಮಾನವ್ಯ ಬೆಳೆಯಲಿ; ಮಾನವೀಯತೆ ಬೆಳಗಲಿ!

ಈಗ ಶ್ರೀ ಶಂಕರ ಭಗವತ್ಪಾದರ ಮಾತಿನಲ್ಲಿ[*] ಬೆನಕನಿಗೆ ನಮಿಸೋಣ