ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಲಿ

ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಲಿ 

ಕನ್ನಡ ಕಲಿಯ ಸವಿನಯ ಮನವಿ

ನಮ್ಮ ಕರ್ನಾಟಕದ ಲಾಂಛನ ಅರ್ಥಪೂರ್ಣವೂ ಸುಂದರವೂ ಆದ ಒಂದು ಕಲಾಕೃತಿ. ಇದರಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಹಿಂದಿನ ಮೈಸೂರು ರಾಜ್ಯಗಳ ಲಾಂಛನಗಳ ಅಂಶಗಳು ಒಂದಾಗಿವೆ. ಧರ್ಮ ಚಕ್ರ ಮತ್ತು ನಾಲ್ಕು ಸಿಂಹಗಳ ಭಾರತ ದೇಶದ ಲಾಂಛನವೂ ಸೇರಿದೆ. ಹೀಗೆ ಕರ್ನಾಟಕದ ರಾಜವೈಭವ, ಪರಂಪರೆ, ಭಾರತೀಯತೆ, ಮತ್ತು ವಿಶ್ವ ಸತ್ಯವನ್ನು ಬೀರುವ ಈ ಲಾಂಛನ ನಮ್ಮೆಲ್ಲರ ಹೆಮ್ಮೆಯ ಸಂಕೇತ.

Seal of Karnatakaಕರ್ನಾಟಕದ ಲಾಂಛನದಲ್ಲಿ ಒಮ್ಮೆಲೆ ಎದ್ದು ಕಾಣುವ ಗಮನೀಯ ಕೊರತೆ ಎಂದರೆ, ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ, ಶಾಸ್ತ್ರೀಯ ಭಾಷೆಯಾದ ಕನ್ನಡದ ಭಾಷೆ ಮತ್ತು ಲಿಪಿ ಎರಡೂ ಇಲ್ಲದಿರುವುದು. ಪರಿಶೀಲಿಸಿದರೆ, ಭಾರತದ ಪ್ರತಿಯೊಂದು ಇತರ ರಾಜ್ಯವೂ, ತನ್ನದೇ ವಿಶಿಷ್ಟ ಲಿಪಿ ಇದ್ದಾಗ - ಓಡಿಸಿ, ಬಂಗಾಳಿ, ಗುಜರಾತಿ, ಪಂಜಾಬಿ, ತಮಿಳು, ತೆಲುಗು, ಮಲಯಾಳ ಇತ್ಯಾದಿ - ಅದನ್ನೇ ತನ್ನ ಲಾಂಛನದಲ್ಲಿ ಉಪಯೋಗಿಸಿದೆ. ಕೆಲವು ರಾಜ್ಯಗಳು ತಮ್ಮ ಲಿಪಿಯನ್ನು ಮಾತ್ರ ಬಳಸಿಕೊಂಡಿವೆ.

ಈ ಕೊರತೆಯನ್ನು ನೀಗಿಸಲು, ಸದ್ಯದ ಲಾಂಛನವನ್ನು ಸೂಕ್ತವಾಗಿ ಬದಲಿಸಬೇಕು. ಲಾಂಛನದಲ್ಲಿ ಭಾಷೆ, ಲಿಪಿ, ಮೂಲ, ವಾಚ್ಯಾರ್ಥ, ಸೂಚ್ಯಾರ್ಥ ಎಲ್ಲವೂ ಕನ್ನಡ ಆಗಿರಬೇಕು, ಕನ್ನಡ ನಾಡು ನುಡಿ ಸಂಸ್ಕೃತಿಗಳಿಗೆ ಸಂಬಂಧಿಸಿರಬೇಕು. ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಬೇಕು ಎನ್ನುವುದೇ ಕನ್ನಡ ಕಲಿಯ ಒತ್ತಾಸೆ.

ಕನಿಷ್ಠ ಮಟ್ಟದಲ್ಲಿ, ದೇವನಾಗರಿ ಲಿಪಿಯಲ್ಲಿರುವ ಸಂಸ್ಕೃತ ಭಾಷೆಯ "ಸತ್ಯಮೇವ ಜಯತೇ " ವಾಕ್ಯವನ್ನು, ಆದ್ಯತೆಯ ಕ್ರಮದಲ್ಲಿ, ಹೀಗೆ ಬದಲಿಸಬಹುದು:

೧. ಪರ್ಯಾಯ ವಾಕ್ಯ :
       ಅ) ಕನ್ನಡವೇ ಸತ್ಯ 
       ಆ) ಕನ್ನಡವೇ ಸತ್ಯ ಕನ್ನಡವೇ ನಿತ್ಯ 
       ಇ) ಸತ್ಯವೇ ನಮ್ಮ ತಾಯಿ ತಂದೆ (ಗೋವಿನ ಹಾಡು) ಇತ್ಯಾದಿ; 

೨) ಭಾಷಾಂತರ ವಾಕ್ಯ:
      ಅ) ಸತ್ಯವೇ ಗೆಲ್ಲುವುದು, 
      ಆ) ಸತ್ಯಕ್ಕೇ ಗೆಲುವು ಇತ್ಯಾದಿ;

೩) ಲಿಪ್ಯಂತರಣ        : ಸತ್ಯಮೇವ ಜಯತೆ (ಕನ್ನಡ ಲಿಪಿಯಲ್ಲಿ).

ಇದು ಕೇವಲ ಸಿಂಬಾಲಿಕ ಬದಲಾವಣೆ ಅಲ್ಲ. ಕನ್ನಡ ಲಿಪಿ ಕನ್ನಡ ಸಂಸ್ಕೃತಿಯ ಅವಿಭಾಜ್ಯ ಅಂಗ. ನಮ್ಮ ಲಾಂಛನಕ್ಕೆ ಎಲ್ಲ ಅಂಗಗಳು ಇರಬೇಕು.  ರಾಜ್ಯ ಲಾಂಛನವನ್ನು ಓದಲು ಆಗದಿರುವ  ಕನ್ನಡ ವಿದ್ಯಾರ್ಥಿಗಳ ಕಲಿಕೆ ಅಪೂರ್ಣ ಎನಿಸಬಾರದು​.

ಇಂತಹ ಬದಲಾವಣೆಗೆ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಕಾವಲು ಸಮಿತಿ, ವಿಶ್ವದಾದ್ಯಂತ ಹರಡಿರುವ ಕನ್ನಡ ಕೂಟಗಳು, ಮತ್ತಿತರ ಕನ್ನಡ ಸಂಘ ಸಂಸ್ಥೆಗಳ ಬೆಂಬಲ ಇದೆ ಎಂದು ಕನ್ನಡ ಕಲಿಗೆ ಭರವಸೆ ಇದೆ. ಕರ್ನಾಟಕ ಸರಕಾರ ಸೂಕ್ತ ಬದಲಾವಣೆಯೊಂದಿಗೆ ಹೊಸ ಲಾಂಛನವನ್ನು ಶೀಘ್ರವಾಗಿ ಜಾರಿಗೆ ತರಲಿ, ಕನ್ನಡಿಗರ ಹೆಮ್ಮೆಇಮ್ಮಡಿಯಾಗಲಿ.

ವಿಶ್ವೇಶ್ವರ ದೀಕ್ಷಿತ 
ಅಧ್ಯಕ, ಕನ್ನಡ ಕಲಿ 
ಸಂಪರ್ಕ: [email protected]  [email protected]
 

-------- English Text ---------------

May Karnataka Emblem become Kannada Emblem

A Petition by Kannada Kali

The emblem of Karnataka (https://en.wikipedia.org/wiki/Emblem_of_Karnataka) is a meaningful as well as a beautiful artwork. It embodies the royal symbols of Vijayanagara Empire and the erstwhile Mysore State. It includes the state of emblem of India with dharma chakra and 4 lions. The emblem of Karnataka evoking the spirit Kannada royal traditions, Indianness, and universal truth is the proud symbol of Kannadigas.

Imperfection, however, is glaring in the emblem. Missing are language and script of Kannada, a classical language that has 2000 years of history. If you examine, every other state of India that has its own script - Odisha, Bengal, Panjab, Gujarat, Tamil Nadu, Andhra, Kerala - has used its script in its emblem, some exclusively.

To correct this imperfection, current emblem of Karnataka should be changed suitably. The language, script, origin, and meanings in the emblem should be Kannada and related to Kannada language, land, and culture. May the Karnataka emblem be a Kannada Emblem.

At a minimum, the Sanskrita sentence "Satyameva Jayate" in Devanagari script should be changed, in preferred order, as follows:

1. Alternatives    :
    a) kannadavE satya, 
    b) kannadavE satya kannadavE nitya, 
    c) satyavE namma tAyi tande (govina hADu)

2. Translation     :
    a) satyavE gelluvudu, 
    b) satyakkE geluvu etc.

3. Transliteration : satyamEva Jayate

This not just a symbolic change. Kannada Script is indivisible part of Kannada Culture. Our emblem needs be full.  Being unable to read the karnataka symbol,  Kannada students must not feel that thier learning is incomplete.

Kannada Kali is confident that the Government of Karnataka, Kannada and Culture Department, Kannada Sahitya Parishattu, Kannada Praadhikara, Kannada Kaavalu Samiti, Kannada Kootas around the world, and other Kannada organizations all support this needed change. May the Government Karnataka double the pride of Kannadigas by quick implementation of the change.

Vishweshwar Dixit
President, Kannada Kali
Contact: [email protected] [email protected] +1 714-322-9748

______________________

ತಾಗುಲಿ : Karnataka Emblem, Kannada Emblem, ಕನ್ನಡ ಭಾಷೆಯ ಪ್ರಾಮುಖ್ಯತೆ,  ಕನ್ನಡ ಕಾಯಕ ವರ್ಷ