ಕನ್ನಡ ಕಲಿ ದಿನ ೨೦೧೯
ಕನ್ನಡ ಕಲಿ ದಿನ ೨೦೧೯
ಮಾರ್ಚ್ ೧೩, ೨೦೧೯
ಜೈನ ಕೇಂದ್ರ, ದಕ್ಷಿಣ ಕ್ಯಲಿಫೋರ್ನಿಯ
ಕನ್ನಡ ಕಲಿ ದಿನ ೨೦೧೯
ಮಾರ್ಚ್ ೧೩, ೨೦೧೯
ಜೈನ ಕೇಂದ್ರ, ದಕ್ಷಿಣ ಕ್ಯಲಿಫೋರ್ನಿಯ
ಕನ್ನಡ ಕಲಿ ಒಂದು ಅವಿರತ ಅಪೂರ್ವ ಸಂಗತಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೈಬೆರಳಿನಲ್ಲಿ ಎಣಿಸುವಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯ್ತು. ಕೂಡಲೆ , ೮೦ಕ್ಕೂ ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಕನ್ನಡ ಕಲಿಯ ಐದು ಅಧ್ಯಾಯಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿಕೊಂಡವು. ಈಗ ನಾವು ೨೨೦+ ಸದೃಢರಾಗಿದ್ದೇವೆ ಮತ್ತು ಇನ್ನು ಬೆಳೆಯುತ್ತಿದ್ದೇವೆ. ಕಳೆದ ವರ್ಷವೆ ಹೊಸ ಕನ್ನಡ ಕಲಿ ಶಾಲೆಯೊಂದು ಟಾರೆನ್ಸ್ ನಲ್ಲಿ ಪ್ರಾರಂಭವಾಯ್ತು. ಈಗ ಅಲ್ಲಿ ೨೫ ವಿದ್ಯಾರ್ಥಿಗಳು ನಮ್ಮ ತಾಯ್ನುಡಿಯ ಕಲಿಕೆಯಲ್ಲಿ ನಿರತರಾಗಿದ್ದಾರೆ. ಈ ವರ್ಷ ಪೂರಣದ ಹರ್ಷ ಸಂದರ್ಭದ ನಿಮಿತ್ತ , ಉಷಾ ಮತ್ತು ಪ್ರಶಾಂತ ಬೆಂಗಳೂರು ಅವರ ನೇತೃತ್ವದ, ಟಾರೆನ್ಸ್ ವೃಂದಕ್ಕೆ ಹಾರ್ದಿಕ ಅಭಿನಂದನೆಗಳು.
ಕನ್ನಡ ಕಲಿ ದಿನ ೨೦೧೧
ಕಳೆದ ವರ್ಷ ತಾನೆ ತನ್ನ ಹತ್ತು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಬ್ರಮಿಸಿದ ಕನ್ನಡ ಕಲಿ, ಮತ್ತೆ ವಾಷಿಕೋತ್ಸವಕ್ಕೆ ಸಿದ್ಧವಾಗಿದೆ. ಕನ್ನಡ ಕಲಿ ಮಕ್ಕಳೆಲ್ಲ ಒಂದೆಡೆ ನೆರೆದು ಕನ್ನಡಕ್ಕೆ ವಸಂತದ ಆಗಮನವನ್ನು ಬೀರುತ್ತಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಎಲ್ಲ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಈ ವರ್ಷ ೧೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ!
ಕನ್ನಡ ಕಲಿಗಳು ಹತ್ತನೆಯ ವರ್ಷದ ಸಂಭ್ರಮದಲ್ಲಿದ್ದಾರೆ. ಮಾರ್ಚ್ ೨೦, ೨೦೧೦ ಒಂದು ವಿಶೇಷ ದಿನ; ಕನ್ನಡ ಕಲಿಗಳಿಗೆ ಸಡಗರದ ದಿನ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡಿಗರಿಗೆ ಹೆಮ್ಮೆಯ ದಿನ. ವಾರ್ಷಿಕ ಕನ್ನಡ ಕಲಿ ದಿನಾಚರಣೆಯೊಂದಿಗೆ ಹತ್ತನೆಯ ವರ್ಷದ ಹಬ್ಬ ಅರ್ವೈನ್ ನಗರದ ಸಂಪ್ರದಾಯ ವನದ ಸಮುದಾಯ ಭವನದಲ್ಲಿ ವಿಜೃಂಭಣೆಯೊಂದಿಗೆ ಜರುಗಿತು..
ಕನ್ನಡ ಕಲಿ ದಿನಾಚರಣೆ ಎಲ್ಲ ಕನ್ನಡ ಕಲಿ ಕ್ರಿಯಾಕೇಂದ್ರಗಳ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮತ್ತು ಕನ್ನಡ ಜ್ಞಾನ, ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ. ಶಿಕ್ಷಕರ ಮತ್ತು ಪಾಲಕರ ಸಮ್ಮಿಲನ; ಕನ್ನಡ ಕಲಿಸುವ ವಿಧಾನಗಳ ವಿಚಾರ ವಿನಿಮಯ; ಕನ್ನಡ ಮತ್ತು ಸಾಂಸ್ಕೃತಿಕ ಕಮ್ಮಟಗಳು, ಇತ್ಯಾದಿ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.
ಜಾಗತಿಕ ಹಳ್ಳಿ ಹಬ್ಬ ೨೦೦೯
ರೇಷ್ಮೆ - ಸಂಪ್ರದಾಯದಿಂದ ನವ್ಯತೆಗೆ
ಕನ್ನಡ ಕಲಿ, ಮಕ್ಕಳಿಗೆ ಕನ್ನಡದಲ್ಲಿ ಮಾತನಾಡಲು, ಓದಲು, ಮತ್ತು, ಬರೆಯಲು ಕಲಿಸುವುದನ್ನೆ ಮುಖ್ಯ ಉದ್ದೇಶವನ್ನಾಗಿಟ್ಟು ಕೊಂಡಿರುವ ಸಂಸ್ಥೆ. ಇಲ್ಲಿ, ಕರ್ನಾಟಕದ ಸಂಸ್ಕೃತಿಯ ಬಗ್ಗೆ ಕೂಡ ಕಲಿಸಲಾಗುವುದು. ಕನ್ನಡ ಕಲಿ ಸಂಸ್ಥೆಯು ತನ್ನ ಹಲವು ಶಾಖೆಗಳ ಮೂಲಕ ಈ ಭಾಗದಲ್ಲಿರುವ ಕನ್ನಡ ಬಂಧುಗಳಿಗೆ ಸೇವೆ ಮಾಡುತ್ತಿದೆ.
ಕನ್ನಡ ಕಲಿ ದಿನಾಚರಣೆ ವರ್ಷಕ್ಕೊಮ್ಮೆ ನಡೆಯುವ, ಎಲ್ಲಾ ಕನ್ನಡ ಕಲಿ ಶಾಖೆಗಳ ಮಕ್ಕಳ ಕನ್ನಡ ಜ್ಞಾನ, ಪ್ರತಿಭೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.
ಅರ್ವೈನ್ ಜಾಗತಿಕ ಹಳ್ಳಿ ಹಬ್ಬದಲ್ಲಿ ಭಾರತ ವೈಭವ
ಶನಿವಾರ ಅಕ್ಟೊಬರ ೪, ೨೦೦೮
ಬಿಲ್ ಬಾರ್ಬರ್ ಉದ್ಯಾನ, ಅರ್ವೈನ್, ಕ್ಯಲಿಫೊರ್ನಿಯ
೧೧:೩೦ಕ್ಕೆ ಅರ್ವೈನ್ ನಗರಸಭೆಯ ಮುಂದಿರುವ ಪಾರ್ಕಿನಲ್ಲಿ ಅರ್ವನಿನ ಜಾಗತಿಕ ಹಳ್ಳಿ ಹಬ್ಬ, ವಿವಿಧ ಸಂಸ್ಕೃತಿಗಳ ಸಂಗಮ http://www.cityofirvine.org/globalvillage.
ಕನ್ನಡ ಕಲಿ ದಿನ ೨೦೦೮
ಮತ್ತೊಮ್ಮೆ ಕನ್ನಡ ಕಲಿ ಮಕ್ಕಳೆಲ್ಲ ಒಂದೆ ಸೂರಿನಡಿ ನೆರೆದು ವಿಜೃಂಭಿಸಲಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಕನ್ನಡ ಕಲಿ, ವ್ಯಾಲಿಯ ಮುಂದಾಳುತನದಲ್ಲಿ ಜರುಗಲಿರುವ ಈ ಸಮ್ಮಿಲನ ಹೊಸ ಸ್ಫೂರ್ತಿಯನ್ನು ತುಂಬುವುದರಲ್ಲಿ ಸಂಶಯವಿಲ್ಲ.
ಅರ್ವೈನ್ ಜಾಗತಿಕ ಹಳ್ಳಿ ಹಬ್ಬ ೨೦೦೭
ಕನ್ನಡ ಕುಣಿತ
ಸಪ್ಟಂಬರ ೨೯, ೨೦೦೭
ಬಿಲ್ ಬಾರ್ಬರ್ ಉದ್ಯಾನ, ಅರ್ವೈನ್, ಕ್ಯಲಿಫೊರ್ನಿಯ