ಕನ್ನಡ ಕಲಿ ದಿನ ೨೦೧೧


ಕನ್ನಡ ಕಲಿ ದಿನ ೨೦೧೧

ಕಳೆದ ವರ್ಷ ತಾನೆ ತನ್ನ ಹತ್ತು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಬ್ರಮಿಸಿದ ಕನ್ನಡ ಕಲಿ, ಮತ್ತೆ ವಾಷಿಕೋತ್ಸವಕ್ಕೆ ಸಿದ್ಧವಾಗಿದೆ. ಕನ್ನಡ ಕಲಿ ಮಕ್ಕಳೆಲ್ಲ ಒಂದೆಡೆ ನೆರೆದು ಕನ್ನಡಕ್ಕೆ ವಸಂತದ ಆಗಮನವನ್ನು ಬೀರುತ್ತಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಎಲ್ಲ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಈ ವರ್ಷ ೧೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ!


*** ವಿಶ್ವೇಶ್ವರ ದೀಕ್ಷಿತ
ಆಹ್ವಾನ‌
ದಿನ: ಶನಿವಾರ ಮಾರ್ಚ ೨೬ ೨೦೧೧, ಮಧಾಹ್ನ ೧೨:೦೦ ರಿಂದ
ಸ್ಥಳ: ವ್ಯಾಲಿ ವ್ಯೂ ಮಿಡಲ್ ಸ್ಕೂಲ್,
    ೩೩೪೭ ತಾಪೊ ಸ್ಟ್ರೀಟ್,
    ಸಿಮಿ ವ್ಯಾಲಿ, ಕ್ಯ. ೯೩೦೬೩

ಕ್ಷಿಣ ಕ್ಯಲಿಫೋರ್ನಿಯದ ನಾಲ್ಕು ದಿಕ್ಕುಗಳಲ್ಲಿ ಹರಡಿಕೊಂಡಿರುವ ನಾಲ್ಕು ಕನ್ನಡ ಕಲಿ ಅಧ್ಯಾಯಗಳು ಸೇರಿ ೨೦೧೧ ರ ವಾರ್ಷಿಕೋತ್ಸವವಾಗಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಇಲ್ಲಿ, ನಿಯತವಾಗಿ ಕನ್ನಡ ಕಲಿ ತರಗತಿಗಳಲ್ಲಿ, ಕನ್ನಡ ನುಡಿ, ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಗಳನ್ನು ಅಭ್ಯಸಿಸುತ್ತಿರುವ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದೆಡೆ ಸೇರಿ ತಮ್ಮ ಸಾಧನೆಗಳೊಂದಿಗೆ ಜ್ಞಾನ ಪ್ರತಿಭೆಗಳನ್ನು ಪ್ರದರ್ಶಿಸಲು ಸುವರ್ಣಾವಕಾಶ; ಕನ್ನಡ ಕುಡಿಗಳನ್ನು ಬೆಳೆಸಿದ ತಂದೆ ತಾಯಿಗಳಿಗೆ ಇದೊಂದು ಹೆಮ್ಮೆಯ ಗಳಿಗೆ. ನಿಸ್ವಾರ್ಥದಿಂದ ವರ್ಷವಿಡೀ ದುಡಿದ ಕನ್ನಡ ಕಲಿಯ ಶಿಕ್ಷಕರಿಗೆ ಮತ್ತು ಸ್ವಯಂಸೇವಕರಿಗೆ ಕೃತಕೃತ್ಯತೆಯ ದಿನ. ಹತ್ತು ವರ್ಷಗಳಿಂದ ಕನ್ನಡ ತರಗತಿಗಳನ್ನು ನಡೆಸುತ್ತ ಈ ವರ್ಷ ೧೦೧ ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ. ಅಂತೂ ಎಲ್ಲ ಕನ್ನಡಿಗರಿಗೂ ಗೆಲುವಿನ ದಿನ.

ಈ ದಿನ, ಎಲ್ಲ ವಿದ್ಯಾರ್ಥಿಗಳು ಸ್ವರದುಂಬಿಯಿಂದ ಜಾಣ-ಪ್ರವೀಣ ಹಂತಗಳವರಗೂ ವಾರ್ಷಿಕ ಪರೀಕ್ಷೆಗಳನ್ನು, ಮೌಖಿಕ ಮತ್ತು ಲಿಖಿತ ರೂಪದಲ್ಲಿ, ತೆಗೆದುಕೊಳ್ಳುತ್ತಿದ್ದಾರೆ. ಕನ್ನಡ ಕಲಿ ಮತ್ತು ಹೈಸ್ಕೂಲುಗಳಿಂದ ಹೊರಬಿದ್ದು ತಮ್ಮ ಮುಂದಿನ ಅಭ್ಯಾಸಕ್ಕಾಗಿ ಆರು ವಿದ್ಯಾರ್ಥಿಗಳು ಕಾಲೇಜು ಸೇರುತ್ತಿದ್ದಾರೆ. ಇವರಿಗೆ ಪದವಿಪ್ರದಾನ ಸಮಾರಂಭವೂ ಇಲ್ಲಿದೆ. ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣಗಳನ್ನು ಇವರು ಕನ್ನಡದಲ್ಲೆ ನೀಡಬೇಕಾದುದು ವಿಶೇಷ.

ತಂದೆತಾಯಿಗಳನ್ನು ಅಭಿನಂದಿಸುತ್ತ, ಶಿಕ್ಷಕರಿಗೆ ನಮ್ಮ ಗೌರವ ತೋರಿಸುತ್ತ, ಎಲ್ಲ ಕನ್ನಡಿಗರಲ್ಲೂ ಅಭಿಮಾನ ಉಕ್ಕಿಸುವ ಈ ವಿದ್ಯಾರ್ಥಿಗಳಿಗ ಶುಭ ಕೋರುವ.

 

ವರದಿ
ಭಾಗವಹಿಸುತ್ತಿರುವ ಶಾಖೆಗಳು

ವ್ಯಾಲಿ:
  Coordinator: Ravish Ramalingappa
  Contact: Shivakumar Gowder
  Number of Students: 35

ಇರ್ವೈನ್:
  Coordinator: Geetha Nirand
  Contact: Vish Dixit, ೯೪೯-೩೯೦-೭೨೨೩
  Contact: Pratibha Bhagwat
   Number of Students: 46

ಸೆರಿಟೋಸ್:
  Coordinator: Shantharam Keshav
  Contact: Satish
  Number of Students: 16

ಆರ್ಕೇಡಿಯ:
   Contact: Gurudatta
   Number of Students: 4

ಕಾಯ್ದು ನೋಡಿ

ಚಿತ್ರಗಳು

   ಕಾಯ್ದು ನೋಡಿ

ತಾಗುಲಿ : kannada kali day 2011