ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಭಜ ಗೋವಿಂದಂ
(ಮೋಹಮುದ್ಗರ)
ಕನ್ನಡ ಪದ್ಯಾನುವಾದ - ವಿಶ್ವೇಶ್ವರ ದೀಕ್ಷಿತ
ಕಂತು ೧: ನುಡಿ ೧ – ೧೩,
ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲು
ಕಂತು ೨: ನುಡಿ ೧೪ – ೨೭ : ಚತುರ್ದಶ ಮಂಜರಿಕಾ
ಕಂತು ೩: ನುಡಿ ೨೮ – ೩೧ : ಉಪಸಂಹಾರ
ಮೋಹಮುದ್ಗರ ಭಜ ಗೋವಿಂದಂ ಮೂಲ: ಆದಿ ಶಂಕರ
|
ಮರುಳಿಗೆ ಮದ್ದು ನೆನೆ ಗೋವಿಂದನ ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ |
|
ಸುಖತಃ ಕ್ರಿಯತೇ ರಾಮಾಭೋಗಃ; ಪಶ್ಚಾದ್ದಂತ ಶರೀರೇ ರೋಗಃ. ಯದ್ಯಪಿ ಲೋಕೇ ಮರಣಂ ಶರಣಂ, ತದಪಿ ನ ಮುಂಚತಿ ಪಾಪಾಚರಣಂ. |
೨೮ |
ಸುಲಭದಿ ತೊಡಗುವ ಅತಿ ರತಿ ಭೋಗದಿ; ಮೈ ರೋಗದಿ ನರಳುವ ನಂತರದಿ. ಈ ಲೋಕದಿ, ಸಾವೇ ಕೊನೆ ಎನೆ ಸಹ ಕೆಡಕಿನ ನಡೆಯನು ಎಂದೂ ಬಿಡನು! |
‘ಅರ್ಥಮನರ್ಥಂ ಭಾವಯ ನಿತ್ಯಂ; ನಾಸ್ತಿ ತತಃ ಸುಖಲೇಶಃ ಸತ್ಯಂ. ಪುತ್ರಾದಪಿ ಧನಭಾಜಾಂ ಭೀತಿಃ; ಸರ್ವತ್ರೈಷಾ ವಿಹಿತಾ ರೀತಿಃ. |
೨೯ |
ಸಿರಿ ಶಾಂತಿಗೆ ಉರಿ ಎಂದರಿ ನಿತ್ಯವು. ಎಂದಿಗು ನಿಜ ಸುಖ ಅದರಿಂದಿಲ್ಲ. ಸಿರಿ ಇರೆ ಭಯ, ಸಂಶಯ ಮಗನಲ್ಲೂ! ಇಂತಿದೆ ಎಲ್ಲೆಡೆ ಸಿರಿತನದಾಟ. |
ಪ್ರಾಣಾಯಾಮಂ, ಪ್ರತ್ಯಾಹಾರಂ, ನಿತ್ಯಾನಿತ್ಯವಿವೇಕವಿಚಾರಂ, ಜಾಪ್ಯಸಮೇತ ಸಮಾಧಿವಿಧಾನಂ ಕುರ್ವವಧಾನಂ, ಮಹದವಧಾನಂ. |
೩೦ |
ಉಸಿರಾಟದ ಗತಿ ಕರಣಗಳ ಹಿಡಿತ, ಹುಸಿ ದಿಟಗಳ ಅಂತರದ ವಿಚಾರ, ಸಮಾಧಿಯನೇರುವ ಪರಿ, ಜಪಗಳನು ಗಮನಿಸಿ ಗೆಯ್, ಬಲು ಗಮನಿಸಿ ನೀನು. |
ಗುರುಚರಣಾಂಬುಜ ನಿರ್ಭರಭಕ್ತಃ, ಸಂಸಾರಾದಚಿರಾದ್ಭವ ಮುಕ್ತಃ, ಸೇಂದ್ರಿಯಮಾನಸ ನಿಯಮಾದೇವಂ ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಂ. |
೩೧ |
ಗುರುವಿನ ಅಡಿ ತಾವರೆಗಳ ಬಂಡುಣಿ, ಪಡೆಯುವಿ ಕಡು ಬಿಡುಗಡೆಯನು ಭರದಿ; ಬಿಗಿದಿಂದ್ರಿಯಗಳ ಹಿಡಿದಿಡು ಮನವನು, ತೋರುವ ನಿನ್ನೆದೆ ಒಳಗಿನ ಒಡೆಯ. |
ಬಿತ್ತರಿಕೆ, ಫೆಬ್ರುವರಿ ೨೫, ೨೦೨೫
ಆದಿ ಶಂಕರ ಮತ್ತು ಶಿಷ್ಯರು ರಚಿಸಿದ
ಮೋಹಮುದ್ಗರ
( ಅಥವಾ, ಭಜ ಗೋವಿಂದಂ)
ಕಂತು ೧: ನುಡಿ ೨೮ ರಿಂದ ೩೧
ಉಪಸಂಹಾರ
ನೆನೆ ಗೋವಿಂದನ
ಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತ
ಸಂಪರ್ಕ: ನಮೋವಿಶ್ ಯ್ಯಾಟ್ ಯಾಹೂ ಡಾಟ್ ಕಾಮ್ :
ನಾನು, ಸಪ್ನಾ ಗೂಗ್ಲೇ