ಯುಗಾದಿಯ ಚೇತನ : ಬೆಂದರೆ ಬೇಂದ್ರೆ
ಯುಗಾದಿಯ ಚೇತನ
ಬೆಂದರೆ ಬೇಂದ್ರೆ
"ಹೆಸರಿನಲ್ಲೇನಿದೆ?" ಎಂದು ವಾದಿಸುವವರಿಗೆ "ಗಾಂಧಿ" ಎಂಬ ಒಂದೇ ಒಂದು ಪದ ಹೇಳಿದರೆ ಸಾಕು, ಸುಮ್ಮನಾಗುತ್ತಾರೆ. ಅಷ್ಟು ಅದರ ಮಹತ್ವ. ಗಾಂಧಿ ಎಂದು ಹೆಸರಿಟ್ಟುಕೊಂಡು, ಆ ಹೆಸರಿನಲ್ಲಿ ಏನೆಲ್ಲವನ್ನು ಸಾಧಿಸಬಹದು - ವಿಶೇಷವಾಗಿ ಸ್ವಾತಂತ್ರ್ಯಾನಂತರದಲ್ಲಿ. ಇದು ಹೇಗಾಯಿತು? ಗಾಂಧಿ ನಾಮದ ಚರಿತ್ರೆ ಏನು? ಮತ್ತಿತರ ಕುತೂಹಲಕಾರಿ ಮಾಹಿತಿಗಳನ್ನು ಹೆಕ್ಕಿ ನಿಮ್ಮ ಮುಂದೆ ಇಟ್ಟಿದ್ದಾರೆ ಮೈಸೂರಿನ ಶ್ರೀ ಸೀತಾರಾಮ್
ದೇಶ ಅಭಿವೃದ್ಧಿ ಆದಂತೆ, ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆ ಶಿಥಿಲವಾಗಿ ಹಲವು ಸಂಪ್ರದಾಯಗಳು ಮೊಟಕುಗೊಂಡರೆ ಇನ್ನು ಕೆಲವು ಸಂಪೂರ‍್ಣ ಮಾಯವಾಗುವವು. ಇದು ಅನಿವಾರ್ಯವೆ? ಸಂಪ್ರದಾಯಗಳ ಉದ್ದೇಶಗಳನ್ನು ಅರಿತು ಮೂಲಭೂತ ಅಂಶಗಳನ್ನು ಉಳಿಸಿಕೊಂಡು, ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವೆ? ಈ ನಿಟ್ಟಿನಲ್ಲಿ, ಇಂಥ ಪರಿಸ್ಥಿತಿಗೆ ನಾವು ಬಂದು ಮುಟ್ಟಿರುವ ಕಾರಣಗಳನ್ನು ಕೆದಕಿ ನೋಡುವುದು ಅವಶ್ಯ.
ದಕ್ಷಿಣ ಕ್ಯಲಿಫೋರ್ನಿಯ ಕರ್ನಾಟಕ ಸಾಂಸ್ಕೃತಿಕ ಸಂಘದ ಕರ್ನಾಟಕ ಸುವರ್ಣ ರಾಜ್ಯೋತ್ಸವ ಸಂಭ್ರಮದಲ್ಲಿ ಮಾಡಿದ ಭಾಷಣ
*** ವಿಶ್ವೇಶ್ವರ ದೀಕ್ಷಿತ
ಭಾಷೆ ಅಂದರೇನು? ಮಾತಾಡುವುದೊ? ಬರೆಯುವುದೊ? ನುಡಿಯೊ? ಲಿಪಿಯೊ? ಪದ ವಾಕ್ಯಗಳೋ? ಅರ್ಥವೋ? ಇವಾವೂ ಅಲ್ಲದ ಅಮೂರ್ತ ಸಂವಹನವೋ?
ಇಬ್ಬರ ನಡುವೆ ಭಾಷೆ ಬೇಕು. ಗಣಿತ, ವಿಜ್ಞಾನ, ಕಲೆ – ಯಾವುದಕ್ಕೂ ಭಾಷೆ ಬೇಕು. ಆಲೋಚಿಸಲೂ ಭಾಷೆ ಬೇಕು! ಅಂತೂ ಇದು ಮನುಷ್ಯನ ಬದುಕಿಗೆ, ಬಾಳಿಗೆ, ಉನ್ನತಿಗೆ ಅವಶ್ಯವಾದದ್ದು. ಹಾಗಾದರೆ ಭಾಷೆಯನ್ನು ಕಲಿಯುವುದು ಹೇಗೆ? ಒಂದು ಭಾಷೆಯನ್ನು ಕಲಿಯಲು ಮಾಧ್ಯಮವಾಗಿ ಇನ್ನೊಂದು ಭಾಷೆ ಅಗತ್ಯವೆ? ಸೂಕ್ತವಾದ ಮಾಧ್ಯಮ ಭಾಷೆ ಯಾವುದು?
[ಈ ಬಿತ್ತರಿಕೆಯಲ್ಲಿ ಕನ್ನಡ ಮತ್ತು ವಿಜ್ಞಾನ, ವಿಜ್ಞಾನ ಬರವಣಿಗೆ, ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ ಈ ಅಂಶಗಳಣ್ನು ನಿಮ್ಮ ಗಮನಕ್ಕೆ ತಂದು, ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳನ್ನು ನೀಡಲು ಪ್ರಯತ್ನಿಸಿದ್ದೇನೆ. ಎಂದಿನಂತೆ, ನಿಮ್ಮ ಕಮೆಂಟು, ಪ್ರಶ್ನೆ, ನಿರ್ಭಿಡೆಯ ಟೀಕೆಗಳಿಗೆ ಸ್ವಾಗತ.]
ನರ್ತನ: ಮಾಲತಿ ಅಯ್ಯಂಗಾರ್
ಮತ್ತು ಕಲಾವಿದರು;
ಗಾಯನ: ಕಲಾನಿಧಿ ವಿದ್ವಾನ್
ಶ್ರೀ ಆರ್.ಕೆ. ಶ್ರೀಕಂಠನ್;
ಪೂರ್ಣ ವಾಚನ