ಕಲಿಯುಗದ ಕಲಿಯುಗನು
ಕಲಿಸುವಗೆ ತಿಳಿದಿಲ್ಲ, ಕಲಿಯಲೂ ಬಿಡುವಿಲ್ಲ,
ಕಲಿತರೂ ದಮಡಿ ಗಳಿಕೆಗೆ ಬಾರದಲ್ಲ!
ಕಲಿಯುವುದು ಬಲು ಕಠಿನ, ಕಲಿಯುವುದು ಬಹಳೆಂದು,
ಕಲಿಯದೆಯೆ ಕಡತದಲಿ ಕಲೆಹಾಕಿ ಎಲ್ಲ,
ಕಲಿಕೆಯನು ಬದಿಗಿರಿಸಿ, ಕಲಿತವರ ಕಡೆಗಣಿಸಿ,
ಅರೆಗಲಿಕೆ ಮರೆಗುಳಿಕೆ ತಲೆಯುಳಿಕೆ ಮಿಳಿಸಿ,
ನುಡಿನುಡಿಗು ಜಾಲವನು ತಡಕಿ, ಬಲೆಗೆ ಬಿದ್ದ ಗೂ-
ಗಲಿಯೆ ಕಲಿಯುಗದ ಕಲಿಯುಗನು!
ಏನಂತೀರಿ?