ಇವತ್ತ ನಾ ಕರ್ನಾಟಕದ ಬಗ್ಗೆ ಮಾತಾಡತೀನಿ

Chirag Nov 2007

         

ಇವತ್ತ ನಾ ಕರ್ನಾಟಕದ ಬಗ್ಗೆ ಮಾತಾಡತೀನಿ

ಕರ್ನಾಟಕ ಸುವರ್ಣ ರಾಜ್ಯೋತ್ಸವ ಭಾಷಣ
ಚಿರಾಗ ದೀಕ್ಷಿತ
೧೧ ವರ್ಷ, ಕನ್ನಡ ಕಲಿ ಅರ್ವೈನ್
೬ನೆ ತರಗತಿ,ವೆಸ್ಟ್ ವುಡ್ ಬೇಸಿಕ್ ಪ್ಲಸ್,  ಅರ್ವೈನ್, ಕ್ಯಲಿಫ಼ೋರ್ನಿಯ

ಇವತ್ತ ನಾ ಕರ್ನಾಟಕದ ಬಗ್ಗೆ ಮಾತಾಡತೀನಿ.

ಈ ವರ್ಷ ಕರ್ನಾಟಕಕ್ಕ ೫೦ ವರ್ಷ ಆಗೇದ.  ಕರ್ನಾಟಕ ೧೯೫೬ ನವಂಬರ್ ೧ ರಂದು ಹುಟ್ಟಿತು. ಆ ದಿನ ಪಿ. ಕಾಳಿಂಗ ರಾವ್,  [ಹುಯಿಲಗೊಳ ನಾರಾಯಣರಾವ ಬರೆದ,] ಈ ಹಾಡ ಹಾಡಿದರು: "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು."

ಕರ್ನಾಟಕ ರಾಜ್ಯ ಹುಟ್ಟಲಿಕ್ಕೆ ಏಕೀಕರಣ ಹೋರಾಟ ಆತು. 

೧೯೫೬ ಕಿಂತ ಮುಂಚೆ ಕನ್ನಡಿಗರು ಮದ್ರಾಸ್, ಮುಂಬೈ, ಮತ್ತು ಹೈದರಾಬಾದ ಪ್ರಾಂತಗಳಲ್ಲಿ ಹರದು ಹಂಚಿ ಹೋಗಿದ್ದರು. ಒಡದ ಕನ್ನಡಿ ಆಗಿತ್ತು. ಅದು ಒಂದು ಆಗಬೇಕು ಅನ್ನುವ ಕಲ್ಪನೆ ೧೯೦೩ರಲ್ಲಿ ಬಂತು.

ಆಲೂರು ವೆಂಕಟ ರಾಯರು ಒಂದು ಲೇಖನ ಬರೆದರು. ಈ ಕಲ್ಪನಾಕ್ಕ ಒಂದು ರೂಪ ಕೊಟ್ಟರು. ಹಗಲು ರಾತ್ರಿ ದುಡದರು. "ಕನ್ನಡ ಕುಲ ಪುರೋಹಿತ" ಅಂತ ಹೆಸರಾದರು.  ಆಲೂರರಿಗೆ ಬೆಂಬಲ ಕೊಟ್ಟವರು ಧಾರವಾಡದವರು. ಬಾಸೆಲ್ ಮಿಶನ್ ಗೆ ಬಂದ ಜ಼ಿಗ್ಲರ್, ಕಿಟ್ಟೆಲ್ ಅವರೂ ಇದಕ್ಕ ಬೆಂಬಲ ಕೊಟ್ಟರು.

ಈ ಹೋರಾಟದಾಗ ಕರ್ನಾಟಕ ವಿದ್ಯಾವರ್ಧಕ ಸಂಘ ಮಹತ್ವದ ಪಾತ್ರ ವಹಿಸಿತು. ಕರ್ನಾಟಕ ವಿದ್ಯಾವರ್ಧಕ ಸಂಘದ ಮೊದಲ ಉದ್ದೇಶ ನಿಮಗ ಗೊತ್ತೇನು? ಅದು - "ಎಲ್ಲರು ಕನ್ನಡ ಮಾತಾಡಬೇಕು" ಅಂತ. ಇದು ಈಗ ಇಲ್ಲಿ ನಮಗೂ ಬೇಕು.

ಇತಿಹಾಸ
ಮೂರನೆ ಶತಮಾನದಾಗ ಕರ್ನಾಟಕವನ್ನ ಮೌರ್ಯರು ಆಳಿದರು. ಮುಂದ, ಸಾವಿರ ವರ್ಷ ಗಂಗ ಕದಂಬ ಮತ್ತು ಚಾಲುಕ್ಯರು ಆಳಿದರು. ನಂತರ, ಹೊಯ್ಸಳ ವಿಜಯ ನಗರದ ರಾಜರು ಕರ್ನಾಟಕವನ್ನ ವಿಸ್ತರಿಸಿದರು. ಅವರು ಕಟ್ಟಿದ ಶಿಲ್ಪಕಲೆ ನೀವು ನೋಡೀರಿ - ಐಹೊಳೆ, ಪಟ್ಟದಕಲ್ಲು, ಮತ್ತು ಬೇಲೂರು ಹಳೆಬೀಡುಗಳಲ್ಲಿ.

ಭೌತಿಕ ಲಕ್ಷಣಗಳು
ಕರ್ನಾಟಕದಾಗ ಮೂರು ಭಾಗ ಅವ. ಇವು ಕೊಂಕಣ, ಪಸ್ಚಿಮ ಘಟ್ಟ, ಮತ್ತು ದಕ್ಷಿಣ ಬಯಲು ಸೀಮೆ. ಅಂದರೆ, ಕೋಸ್ಟಲ್ ರೀಜನ್, ವೆಸ್ಟರ್ನ್ ಘಾಟ್ಸ್, ದೆಕ್ಕನ್ ಪ್ಲಟೂ. ಇಡೀ ಭಾರತದಲ್ಲಿ ಕರ್ನಾಟಕ ಎಂಟನೆ ದೊಡ್ಡ ರಾಜ್ಯ.

ವಾಣಿಜ್ಯ
ಕರ್ನಾಟಕದಾಗ ಕಾಫ಼ಿ ಮತ್ತ ರೇಶ್ಮಿ ಬೆಳೀತಾರ. ನಿಮಗೆಲ್ಲ ಗೊತ್ತು - ಪ್ರಸಿದ್ಧ ಮೈಸೂರು ರೇಶ್ಮೆ ಸೀರೆಗಳು.  ಅಕ್ಕಿ, ರಾಗಿ, ಜೋಳ, ಗೋಡಂಬಿ, ಮತ್ತ ಅಡಿಕೆ ಬೆಳಿತಾರ.

ಟೆಕ್ನಾಲಜಿ
ಭಾರತದ ೩೮% ಸಾಫ಼್ಟವೇರ್ ಎಕ್ಸ್‌ಪೊರ್ಟ್ ಗಳು ಕರ್ನಾಟಕದಿಂದ ಬರ್ತಾವ.  ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ಼್ ಇಂಡಿಯ ಅಂತ ಹೆಸರು ಆಗೇದ. ಇಲ್ಲೆ ಒಂದಿಷ್ಟು ದೊಡ್ಡ ಕಂಪನಿ ಅವ. ಒಂದು ಇನ್ಫೊಸಿಸ್. ಇಲ್ಲಿನ ಕಂಪನಿಗಳು ಕರ್ನಾಟಕಕ್ಕ ಕೆಲಸ ಔಟ್-ಸೋರ್ಸ್ ಮಾಡಲಿಕ್ಕೆ ಹತ್ಯಾರ.

ಸಂಗೀತ
ಕರ್ನಾಟಕದಾಗ ಎರಡು ಥರದ ಸಂಗೀತ ಅವ. ಅವು - ಕರ್ನಾಟಕ ಮತ್ತು ಹಿಂದುಸ್ತಾನಿ. ಪುರಂದರ ದಾಸ ಕರ್ನಾಟಕ ಸಂಗೀತದ ಪಿತಾಮಹ. ಭೀಮಸೇನ ಜೋಶಿ ಪ್ರಸಿದ್ಧ ಹಿಂದುಸ್ತಾನಿ ಹಾಡುವವರು. ನಾನು ಹಿಂದುಸ್ತಾನಿ ಸಂಗೀತ ಕಲೀತೀನಿ. 

ಈ ನನ್ನ ಪುಟ್ಟ ಭಾಷಣದಾಗ, ಕರ್ನಾಟಕದ ಇತಿಹಾಸ, ಭೌತಿಕ ಲಕ್ಷಣಗಳು, ವಾಣಿಜ್ಯ, ಟೆಕ್ನಾಲಜಿ ಸಂಗೀತಗಳ ಬಗ್ಗೆ ಮಾತಾಡೀನಿ. ಇದನ್ನ ಕೇಳಿ  ನಿಮಗೆಲ್ಲ ಕರ್ನಾಟಕದ ಮ್ಯಾಲೆ ಪ್ರೀತಿ ಅಭಿಮಾನ ಹೆಚ್ಚಾಗೇದ ಅಂತ ತಿಳಕೋತೀನಿ.


ತಾಗುಲಿ: Chirag Dixit, karnataka cultural organization, rajyotsava