Publications

ಭಾಷೆ, ಲಿಪಿ, ಮತ್ತು ಕಲಿಕೆ – ಒಂದು ವಿಶ್ಲೇಷಣೆ

ಭಾಷೆ ಅಂದರೇನು? ಮಾತಾಡುವುದೊ? ಬರೆಯುವುದೊ? ನುಡಿಯೊ? ಲಿಪಿಯೊ? ಪದ ವಾಕ್ಯಗಳೋ? ಅರ್ಥವೋ? ಇವಾವೂ ಅಲ್ಲದ ಅಮೂರ್ತ ಸಂವಹನವೋ?
 
ಇಬ್ಬರ ನಡುವೆ ಭಾಷೆ ಬೇಕು. ಗಣಿತ, ವಿಜ್ಞಾನ, ಕಲೆ – ಯಾವುದಕ್ಕೂ ಭಾಷೆ ಬೇಕು. ಆಲೋಚಿಸಲೂ ಭಾಷೆ ಬೇಕು! ಅಂತೂ ಇದು ಮನುಷ್ಯನ ಬದುಕಿಗೆ, ಬಾಳಿಗೆ, ಉನ್ನತಿಗೆ ಅವಶ್ಯವಾದದ್ದು. ಹಾಗಾದರೆ ಭಾಷೆಯನ್ನು ಕಲಿಯುವುದು ಹೇಗೆ? ಒಂದು ಭಾಷೆಯನ್ನು ಕಲಿಯಲು ಮಾಧ್ಯಮವಾಗಿ ಇನ್ನೊಂದು ಭಾಷೆ ಅಗತ್ಯವೆ? ಸೂಕ್ತವಾದ ಮಾಧ್ಯಮ ಭಾಷೆ ಯಾವುದು? 

ಕನ್ನಡ ಮತ್ತು ವಿಜ್ಞಾನದ ಕಲಿಕೆ

[ಈ ಬಿತ್ತರಿಕೆಯಲ್ಲಿ ಕನ್ನಡ ಮತ್ತು ವಿಜ್ಞಾನ, ವಿಜ್ಞಾನ ಬರವಣಿಗೆ, ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ ಈ ಅಂಶಗಳಣ್ನು ನಿಮ್ಮ ಗಮನಕ್ಕೆ ತಂದು, ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳನ್ನು ನೀಡಲು ಪ್ರಯತ್ನಿಸಿದ್ದೇನೆ. ‌ ಎಂದಿನಂತೆ, ನಿಮ್ಮ ಕಮೆಂಟು, ಪ್ರಶ್ನೆ, ನಿರ್ಭಿಡೆಯ ಟೀಕೆಗಳಿಗೆ ಸ್ವಾಗತ.]

ಉಗಾದಿಯೂ ಯುಗಾದಿಯೆ?

ಯುಗಾದಿಯಿಂದ ಉಗಾದಿ ಬಂತೆ? ಉಗಾದಿಗೆ ಒಂದು ಸ್ವತಂತ್ರ ಹುಟ್ಟು ಇದೆಯೆ? ಭಾಷೆ ಬೆಳೆಯುವುದದಾದರೂ ಹೇಗೆ?
... ಸಾಯಂಕಾಲದ ಮಳೆ ಕಾಯ್ದ ರಸ್ತೆಯ ಮೇಲೆ ರಪರಪನೆ ಬಿದ್ದಾಗ, ಹೆಬೆ ಎದ್ದು, ದೂಳಿನ ಕಂಪನ್ನು ಮೂಗು ಹಿಗ್ಗಿಸುತ್ತ ಸವಿಯಲು  ಕಾಯದವರು ಯಾರಿದ್ದಾರೆ! ಆ ದಿನದ ಆಗಮನವನ್ನು ಸಾರುವುದೇ ಉಗಾದಿ!

ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಲಿ

ಕನ್ನಡ ಕಲಿಯ ಸವಿನಯ ಮನವಿ, A Petition by Kannada Kali
ಲಾಂಛನದಲ್ಲಿ ಭಾಷೆ, ಲಿಪಿ, ಮೂಲ, ವಾಚ್ಯಾರ್ಥ, ಸೂಚ್ಯಾರ್ಥ ಎಲ್ಲವೂ ಕನ್ನಡ ಆಗಿರಬೇಕು, ಕನ್ನಡ ನಾಡು ನುಡಿ ಸಂಸ್ಕೃತಿಗಳಿಗೆ ಸಂಬಂಧಿಸಿರಬೇಕು.  ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಬೇಕು ಎನ್ನುವುದೇ ಕನ್ನಡ ಕಲಿಯ ಒತ್ತಾಸೆ. 

ಮಹಾಲಕ್ಷ್ಮಿಯ ಮೇಲೊಂದು ಮಹಾ ಅಪವಾದ

ಮಹಾಲಕ್ಷ್ಮಿ ಆದಿ ದೇವತೆ; ಮಾತೆ. ಇವಳನ್ನು ಪೂಜಿಸುವುದು ಸಹಜ ಅಷ್ಟ ಐಶ್ವರ್ಯ ಕ್ಕಾಗಿ ಬೇಡಿಕೊಳ್ಳುವುದು ಸಾಮಾನ್ಯ. ದುಡ್ಡಿದ್ರೆ ಎಲ್ಲಾ ಐಶ್ವರ್ಯಗಳನ್ನು ಗಳಿಸಬಹುದು! ನೇಮ್ ಫೇಮ್ ಸಕ್ಸಸ್ ಬಿರುದು ಬಾವಲಿ ತಾವಾಗಿಯೇ ಒಲಿದು ಬರುತ್ತವೆ!
ಹೀಗಿದ್ದಾಗ, ಏನಪ್ಪಾ ಇವಳ ಮೇಲೆ ಮಹಾ ಅಪವಾದ?  ಲಕ್ಷ್ಮಿಯನ್ನು ದೂರುವ ಧೈರ್ಯ ಯಾರಿಗಿದೆ? ಯಾರು ಈ ದುರ್ಮತಿ?

ವಿದೇಶಿ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಬಗೆ : ಆನ್‍ಲೈನ್ - ಆನ್‍ಸೈಟ್

ಕರೋನ ಮಾರಿ ಬಡಿದಂದಿನಿಂದ ನಮ್ಮ ಮನೆಯಲ್ಲಿ ನಾವೇ ಬಂಧಿಗಳಾದೆವು. ಆದರೆ ನಮ್ಮ ಕನ್ನಡ ಪ್ರೇಮ ಕುಂದಲಿಲ್ಲ. ಕನ್ನಡ ಕಲಿಕೆ ನಿಲ್ಲಲಿಲ್ಲ. ಈಗ, ಕನ್ನಡ ಕಲಿಯಲು ನಾಲ್ಕು ಗೋಡೆಗಳ ನಡುವೆಯೆ ಕಲಿಯ ಬೇಕೆ ಅನ್ನುವ ಪ್ರಶ್ನೆಗೆ ಉತ್ತರಿಸಬೇಕಾಗಿದೆ.