Novರಾತ್ರಿ ಸರಣಿ: ದಿನ ೨, ಮಿಥ್ಯೆ ೨ : ಕನ್ನಡ ಲಿಪಿ

Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
     - ಡಿ.ಎಸ್.‌ ಕರ್ಕಿ

ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು

Novರಾತ್ರಿ ಸರಣಿ : ದಿನ ೨, ಮಿಥ್ಯೆ೨ - ಕನ್ನಡ ಲಿಪಿ

❌೨. ಕನ್ನಡ ಲಿಪಿ ದೇವನಾಗರಿ ಲಿಪಿಯಿಂದ ಹುಟ್ಟಿದೆ❌

ತಪ್ಪು. ಕನ್ನಡ ಮತ್ತು ದೇವನಾಗರಿ ಸಹಿತ ಬಹುತೇಕ ಎಲ್ಲ ಭಾರತೀಯ ಲಿಪಿಗಳಿಗೂ ಮೂಲ ಬ್ರಾಹ್ಮೀ ಲಿಪಿ. ಅಶೋಕನ ಶಿಲಾ ಶಾಸನಗಳು (ಕ್ರಿಪೂ ೨ನೆ ಶತಮಾನ) ಬ್ರಾಹ್ಮೀ ಲಿಪಿಯಲ್ಲಿ ಇವೆ. ಕದಂಬರ ಕಾಲದಲ್ಲಿ (ಕ್ರಿ.ಶ. ೩೪೫-೫೪೦)ಬ್ರಾಹ್ಮೀ ಲಿಪಿ ಮಾರ್ಪಾಟಾಗಿದ್ದು ಕನ್ನಡದ ಮೊದಲ ಲಿಪಿ ಎಂದು ಗುರುತಿಸಲಾಗಿದೆ. ಇಂದಿನ ಕನ್ನಡ ಲಿಪಿ ಕದಂಬ ಲಿಪಿಯಿಂದ ನೇರವಾಗಿ ವಿಕಾಸಗೊಂಡಿದೆ. ಗುಪ್ತರ ಕಾಲದಲ್ಲಿ (೪-೬ನೆ ಶತಮಾನ) ಬ್ರಾಹ್ಮೀಯಿಂದ ನಾಗರೀ, ಶಾರದಾ ಮತ್ತಿತರ ಲಿಪಿಗಳು ಹುಟ್ಚಿದವು. ನಂತರ, ನಾಗರಿಯಿಂದ ದೇವನಾಗರಿ, ಬಂಗಾಲಿ, ತಿಬೇಟಿ ಮಂತಾದ ಲಿಪಿಗಳು ಹುಟ್ಚಿದವು. ಅಂದರೆ ಕನ್ನಡ ಲಿಪಿ ದೇವನಾಗರಿಗಿಂತ ಮುಂಚೆಯೇ ಮತ್ತು ಸ್ವತಂತ್ರವಾಗಿ ಹುಟ್ಚಿದ್ದು.

ಕನ್ನಡದ ಅರಾಷ್ಟ್ರೀಯತೆಯ ಮಿಥ್ಯೆ ೩ನ್ನು ನಾಳೆ ಅರಿತುಕೊಳ್ಳೋಣ
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೨, ಅಕ್ಟೋಬರ ೨೪, ೨೦೨೩

ದಿನ ೧, ಮಿಥ್ಯೆ ೧ : ಕನ್ನಡದ ಹುಟ್ಟು  🡄  🡆 ದಿನ ೩, ಮಿಥ್ಯೆ ೩ : ಕನ್ನಡದ ಅರಾಷ್ಟ್ರೀಯತೆ