Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
- ಡಿ.ಎಸ್. ಕರ್ಕಿ
ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು
Novರಾತ್ರಿ ಸರಣಿ : ದಿನ ೩, ಮಿಥ್ಯೆ೩ - ಕನ್ನಡದ ಅರಾಷ್ಟ್ರೀಯತೆ
❌೩. ಕನ್ನಡ ರಾಷ್ಟ್ರೀಯ ಭಾಷೆ ಅಲ್ಲ❌
ತಪ್ಪು. ಭಾರತದ ರಾಷ್ಟ್ರ ಭಾಷೆ( National Language of India)ಅನ್ನುವುದೇ ಇಲ್ಲ. ರಾಷ್ಟ್ರ ಭಾಷೆ ಎಂದು ಯಾವ ಭಾಷೆಯನ್ನೂ ಗುರುತಿಸಿಲ್ಲ. ಸಂವಿಧಾನದ ಅನುಚ್ಛೇದ ೧೨೦ರಲ್ಲಿ ಕನ್ನಡ ಮತ್ತು ಹಿಂದಿ ಸಹಿತ ೨೨ ಭಾಷೆಗಳನ್ನು ಭಾರತದ ಅಧಿಕೃತ ಭಾಷೆಗಳು ಎಂದು ನಮೂದಿಸಲಾಗಿದೆ. ಇವು ಯಾವೂ ರಾಷ್ಟ್ರ ಭಾಷೆಗಳು(national language)ಗಳು ಅಲ್ಲ; ಎಲ್ಲವೂ ರಾಷ್ಟ್ರೀಯ ಭಾಷೆಗಳು, ಅಂದರೆ ರಾಷ್ಟ್ರಕ್ಕೆ ಸಂಬಂಧಿಸಿದ ಭಾಷೆಗಳು. ಸಂವಿಧಾನದಲ್ಲಿ ನಮೂದಿಸದ ಇನ್ನೂ ಸಾವಿರಾರು ಭಾರತೀಯ ಭಾಷೆಗಳು ಇವೆ. ಜನಮನದಲ್ಲಿ, ನಡೆನುಡಿಗಳಲ್ಲಿ ನೆಲೆಗೊಂಡಿರುವ ಈ ಭಾಷೆಗಳನ್ನು ಭಾರತದ ರಾಷ್ಟ್ರೀಯ ಭಾಷೆಗಳು ಅಲ್ಲ ಅನ್ನಬಹುದೇ?
ಕನ್ನಡದ ಪ್ರಾಂತೀಯತೆಯ ಮಿಥ್ಯೆ ೪ನ್ನು ನಾಳೆ ಅರಿತುಕೊಳ್ಳೋಣ
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೩, ಅಕ್ಟೋಬರ ೨೫, ೨೦೨೩
ದಿನ ೨, ಮಿಥ್ಯೆ ೨ : ಕನ್ನಡಲಿಪಿ 🡄 🡆 ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ