Publications

ಮನ್ವಂತರದ ಮನುಜೆ: ಮೇರಿ ಕ್ಯೂರಿ

ನೊಬೆಲ್ ಬಿರುದಿಗೇ ಒಂದು ವಿಶಿಷ್ಟ, ವಿಶ್ವವ್ಯಾಪಿ ಪ್ರತಿಷ್ಠೆಯನ್ನು ತಂದು ಕೊಟ್ಟು, ಇತಿಹಾಸದಲ್ಲಿ ಅಮರಳಾಗಿ ನಿಂತ ಮೇರಿ ಕ್ಯೂರಿಯ ಜೀವನ್ಮಹಿಮೆಯು, ವಿಜ್ಞಾನಿಗಳಷ್ಟೇ ಅಲ್ಲ, ಸರ್ವರೂ, ಸರ್ವದಾ ಮೆಲುಕು ಹಾಕಬೇಕಾದಂಥ ಮಹಾರ್ಥಕ ಚರಿತೆ; “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಓದ್ದೀ?” ಎಂದರೆ “ಮೇರಿ ಕ್ಯೂರಿ ಕತೆ ಓದಿದೆ!” ಎಂಬ ಹರ್ಷೋದ್ಗಾರವನ್ನು ಹೊರಪಡಿಸುವ, ಹುರಿಯುಕ್ಕಿಸುವಂಥ ವಿಷಯ.

ಕಲಕಿದ ನೀರು

ಕಲಕಿದ ನೀರು 

ವಿಶ್ವೇಶ್ವರ ದೀಕ್ಷಿತ

೧೯೮೬ರಲ್ಲಿ ಬರೆದ ಈ ಕವನ ಅಮೆರಿಕನ್ನಡ ಸಂಚಿಕೆ ೧೫ರಲ್ಲಿ ಪ್ರಕಟವಾಗಿತ್ತು.

ಇಂದಿನ ಕೊರೋನ ಮಾರಿ, ಹಣದ ಉಬ್ಬರ ಅಬ್ಬರ, ಹಸಿವೆಯ ಕೊರೆತ,  ಮಾರುಕಟ್ಟೆಯ ಕುಸಿತ, ವಾಣಿಜ್ಯ ವಸಾಹತುಗಳು, ಕಲಹ ಯುದ್ಧಗಳು ಮತ್ತು  (ಬದುಕಿ ಉಳಿದರೆ) ಅವುಗಳ ಭೀತಿಯಲ್ಲಿ  ಬಾಳು, ಈ ಕವನವನ್ನು ನೆನಪಿಗೆ ತಂದವು, ಮತ್ತೆ. ಕಾಲ ಕಳೆದರೂ, ಮುಂದುವರೆದಂತೆಯೂ, ಪರಿಸ್ಥಿತಿ ಹೊಸತು ಆದರೂ ಭಯ ಭೀತಿಗಳೇ ಮನುಷ್ಯನ ಭವ ಭೂತಿ, ಇರವಿನ ಅರಿವು ಎನ್ನುವ ಸಂಶಯ ಬಾರದೆ ಇರದು.

ನಾನಾರು

ನಾನಾರು

ಆದಿ ಶಂಕರ ವಿರಚಿತ ಆತ್ಮಷಟ್ಕ (ನಿರ್ವಾಣ ಷಟ್ಕ)

ಕನ್ನಡಕ್ಕೆ  : ವಿಶ್ವೇಶ್ವರ ದೀಕ್ಷಿತ

 

ಭಾಷೆ, ಲಿಪಿ, ಮತ್ತು ಕಲಿಕೆ – ಒಂದು ವಿಶ್ಲೇಷಣೆ

ಭಾಷೆ ಅಂದರೇನು? ಮಾತಾಡುವುದೊ? ಬರೆಯುವುದೊ? ನುಡಿಯೊ? ಲಿಪಿಯೊ? ಪದ ವಾಕ್ಯಗಳೋ? ಅರ್ಥವೋ? ಇವಾವೂ ಅಲ್ಲದ ಅಮೂರ್ತ ಸಂವಹನವೋ?
 
ಇಬ್ಬರ ನಡುವೆ ಭಾಷೆ ಬೇಕು. ಗಣಿತ, ವಿಜ್ಞಾನ, ಕಲೆ – ಯಾವುದಕ್ಕೂ ಭಾಷೆ ಬೇಕು. ಆಲೋಚಿಸಲೂ ಭಾಷೆ ಬೇಕು! ಅಂತೂ ಇದು ಮನುಷ್ಯನ ಬದುಕಿಗೆ, ಬಾಳಿಗೆ, ಉನ್ನತಿಗೆ ಅವಶ್ಯವಾದದ್ದು. ಹಾಗಾದರೆ ಭಾಷೆಯನ್ನು ಕಲಿಯುವುದು ಹೇಗೆ? ಒಂದು ಭಾಷೆಯನ್ನು ಕಲಿಯಲು ಮಾಧ್ಯಮವಾಗಿ ಇನ್ನೊಂದು ಭಾಷೆ ಅಗತ್ಯವೆ? ಸೂಕ್ತವಾದ ಮಾಧ್ಯಮ ಭಾಷೆ ಯಾವುದು? 

ಕನ್ನಡ ಮತ್ತು ವಿಜ್ಞಾನದ ಕಲಿಕೆ

[ಈ ಬಿತ್ತರಿಕೆಯಲ್ಲಿ ಕನ್ನಡ ಮತ್ತು ವಿಜ್ಞಾನ, ವಿಜ್ಞಾನ ಬರವಣಿಗೆ, ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ ಈ ಅಂಶಗಳಣ್ನು ನಿಮ್ಮ ಗಮನಕ್ಕೆ ತಂದು, ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳನ್ನು ನೀಡಲು ಪ್ರಯತ್ನಿಸಿದ್ದೇನೆ. ‌ ಎಂದಿನಂತೆ, ನಿಮ್ಮ ಕಮೆಂಟು, ಪ್ರಶ್ನೆ, ನಿರ್ಭಿಡೆಯ ಟೀಕೆಗಳಿಗೆ ಸ್ವಾಗತ.]