ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?
ಇಂದು ಮಹಿಳಾ ದಿನಾಚರಣೆ. ಹಿಂದಿನಿಂದಲೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಾಕಷ್ಟು ನೋವು ಅನುಭವಿಸಿರುವಳು. ಇಂದಿಗೂ ಸಹಾ ಹಳ್ಳಿಗಳಲ್ಲಿ ಮಹಿಳೆಗೆ ಸಂಪೂರ್ಣವಾದ ಸ್ವಾತಂತ್ಯ ಸಿಕ್ಕಿರುವುದಿಲ್ಲ. ನಗರಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವೆವು. ಮಹಿಳೆಯ ಸಮಸ್ಯೆಯನ್ನು ಅರ್ಥಮಾಡಿಕೊಂಡು ಅವಳೊಂದಿಗೆ ಸಂವೇದನಾ ಶೀಲರಾಗಿ ವರ್ತಿಸುವದನ್ನು ಪುರುಷ ಸಮಾಜ ರೂಢಿಸಿಕೊಳ್ಳುವ ಅಗತ್ಯವಿದೆ.