ಬಾವುಟ
ಕನ್ನಡದಲ್ಲಿ ಬಾವುಟ ಅಂದರೆ ಧ್ವಜ, ಸಂಕೇತ, ಗುರುತು ಅನ್ನುವುದು ಸಾಮಾನ್ಯ ಅರ್ಥ. ಸರಿಯೋ ತಪ್ಪೋ, ನನಗೆ ತಿಳಿದಂತೆ, ಅದು ಹೀಗೆ ಅಂತ ಅನಿಸುತ್ತದೆ
ಕನ್ನಡದಲ್ಲಿ ಬಾವುಟ ಅಂದರೆ ಧ್ವಜ, ಸಂಕೇತ, ಗುರುತು ಅನ್ನುವುದು ಸಾಮಾನ್ಯ ಅರ್ಥ. ಸರಿಯೋ ತಪ್ಪೋ, ನನಗೆ ತಿಳಿದಂತೆ, ಅದು ಹೀಗೆ ಅಂತ ಅನಿಸುತ್ತದೆ
ಹೊರನಾಡಿನಲ್ಲಿರುವ ಕನ್ನಡ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತ, ಕನ್ನಡ ಸಂಸ್ಕೃತಿಯ ಪರಿಸರವನ್ನು ಕಲ್ಪಿಸುವ ಉದ್ದೇಶದಿಂದ ವರ್ಷ ೨೦೦೦ ದಲ್ಲಿ ಕ್ಯಾಲಿಫೋರ್ನಿಯದ ಅವೈನ್ ನಗರದಲ್ಲಿ ಕನ್ನಡ ಕಲಿ ಸಂಸ್ಥೆ ಮತ್ತು ಶಾಲೆಗಳು ಪ್ರಾರಂಭವಾದವು. ನಂತರ, ಇದರಿಂದ ಪ್ರೇರಿತವಾಗಿ ಅಮೇರಿಕದ ತುಂಬ ಮತ್ತು ಇತರೆಡೆ 'ಕನ್ನಡ ಕಲಿ' ಶಾಲೆ ಮತ್ತು ಕಾರ್ಯಕ್ರಮಗಳು ಹುಟ್ಟಿಕೊಂಡವು. ಇದು ನಿಮಗೆ ಗೊತ್ತಿರುವ ವಿಷಯ.
ಸ್ವತಂತ್ರವಾಗಿ, ಇಂತಹದೆ ಕಳಕಳಿಯಿಂದ, ಮುಂಬಯಿ ನಗರದಲ್ಲಿ, 'ಚಿಣ್ಣರ ಬಿಂಬ' ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡ ಮತ್ತು ಕನ್ನಡ ಸಂಸ್ಕೃತಿಗಾಗಿ ಮೌನವಾಗಿ ದುಡಿಯುತ್ತ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಪ್ರಕಾಶ ಭಂಡಾರಿ. ಇವರ ಕಾರ್ಯ ವೈಖರಿ ಮತ್ತು ಸಾಧನೆಗಳು ಹೊರನಾಡಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ನಮ್ಮೆಲ್ಲರಿಗೂ ಆದರ್ಶಪ್ರಾಯ. ಕನ್ನಡ ಕಲಿಗಳೆ, ಇವರನ್ನು ನಾವು ಅಭಿನಂದಿಸುವುದಷ್ಟೇ ಅಲ್ಲ, ಅನುಕರಿಸುವುದೂ ಅಗತ್ಯ.
ಬದುಕು ಮತ್ತು ಬಾಳು, ಈ ಪದಗಳು ಸಮಾನಾರ್ಥಕವೇ? ಇಲ್ಲವಾದರೆ ಏನು ವ್ಯತ್ಯಾಸ? ಜೀವಿಸುವುದು ಹೇಗೆ? ದೀರ್ಘ ಆಯುಷ್ಯದ ಗುಟ್ಟು ಏನು? ಬನ್ನಿ ಕೆದಕಿ ನೋಡೋಣ.
ರಾಜ್ಯೋತ್ಸವ, ದೀಪಾವಳಿ, ದಸರೆ ಎಲ್ಲರಿಗೂ ಗೊತ್ತು. ನಾಡ ಹಬ್ಬ ಎಲ್ಲಿಂದ ಬಂತು?
"ವಾಗ್ದೇವಿಯ ಭಂಡಾರದ ಮುದ್ರೆಯನೊಡೆದಂ" ಎಂದು ಮಹಾಕವಿ ರನ್ನ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ರನ್ನ ಅಷ್ಟೇ ಅಲ್ಲ, ಕವಿರಾಜಮಾರ್ಗದ ಶ್ರೀವಿಜಯನಿಂದ ಕುಮಾರವ್ಯಾಸನ ವರೆಗೂ ಎಲ್ಲ ಕವಿಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇದೇ ಪರಂಪರೆ ನವೋದಯ, ನವ್ಯ ಸಾಹಿತ್ಯದಲ್ಲೂ ನಡೆದು ಈಗಲೂ ಮುಂದುವರೆಯುತ್ತಲಿದೆ.
ಕೆಟಲ್ ಪದದ ಸ್ಪೆಲಿಂಗ್ ಬಾರದು; ಪಕ್ಕದ ಹುಡುಗನಿಂದ ಕಾಪಿ ಹೊಡೆಯುವಂತೆ ಶಿಕ್ಷಕರು ಸನ್ನೆ ಮಾಡುತ್ತಾರೆ; ಆದರೆ ಮೋಹನದಾಸ್ ತನಗೆ ಬಂದಂತೆ ತಪ್ಪಾಗಿ ಬರೆಯುತ್ತಾನೆ. ಈ ಪ್ರಾಮಾಣಿಕ ಮೂರ್ತಿಯ ಮೇಲೆ ಶಿಕ್ಷಕರಿಗೆ ಎಲ್ಲಿಲ್ಲದ ಸಿಟ್ಟು. ಆವರಿಗೇನು ಗೊತ್ತು ಕರಮಚಂದರ ಮಗ ಈ ಮೋಹನದಾಸ ಮುಂದೆ ಮಹಾತ್ಮ ಗಾಂಧಿ ಆಗುತ್ತಾನೆ ಎಂದು!
ಸ್ಕೂಲು, ಕಾಲೇಜುಗಳಲ್ಲಿ ಕರೋನ ಆವಾಂತರದಿಂದಾಗಿ ಉಪಾಧ್ಯಾಯರುಗಳು ಪಾಠಪ್ರವಚನಗಳನ್ನು ಫ಼ೋನ್ ಮೂಲಕ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಮೇಡಂ ಫ಼ೋನ್‌ನಲ್ಲಿ ದೆಹಲೀ ಮೆ ಕುತುಬ್‌ಮಿನಾರ್ ಹೈ ಎಂದು ಹೇಳಿದಳಂತೆ. ಹುಡುಗ ಬರೆದನಂತೆ ...
[ಹೀಗೆ ಜೀವನದಲ್ಲಿನ ಪ್ರಸಂಗಗಳನ್ನು, ಎಡವಟ್ಟುಗಳನ್ನು ನೆನಪಿಸಿಕೊಂಡರೆ ಕೃಷ್ಣಮೂರ್ತಿಗಳಿಗೆ ಕಾಣುವುದು ಎಳೆನೀರಿನಂಥ ತಿಳಿ ಹಾಸ್ಯ! ಅಷ್ಟೇ ತೃಪ್ತಿ! ]
ಮಹಾಲಕ್ಷ್ಮಿ ಆದಿ ದೇವತೆ; ಮಾತೆ. ಇವಳನ್ನು ಪೂಜಿಸುವುದು ಸಹಜ ಅಷ್ಟ ಐಶ್ವರ್ಯ ಕ್ಕಾಗಿ ಬೇಡಿಕೊಳ್ಳುವುದು ಸಾಮಾನ್ಯ. ದುಡ್ಡಿದ್ರೆ ಎಲ್ಲಾ ಐಶ್ವರ್ಯಗಳನ್ನು ಗಳಿಸಬಹುದು! ನೇಮ್ ಫೇಮ್ ಸಕ್ಸಸ್ ಬಿರುದು ಬಾವಲಿ ತಾವಾಗಿಯೇ ಒಲಿದು ಬರುತ್ತವೆ!
ಹೀಗಿದ್ದಾಗ, ಏನಪ್ಪಾ ಇವಳ ಮೇಲೆ ಮಹಾ ಅಪವಾದ? ಲಕ್ಷ್ಮಿಯನ್ನು ದೂರುವ ಧೈರ್ಯ ಯಾರಿಗಿದೆ? ಯಾರು ಈ ದುರ್ಮತಿ?