*** ಪುಷ್ಪ ಕೃಷ್ಣ, ಮೆಂಫಿಸ್, ಟೆನಸಿ
ಮಹಿಮಾ ಓಡೋಡಿ ಬರುತ್ತಾಳೆ, ಸ್ಕೂಲ್ ಬಸ್ ನಿಂದ ಇಳಿದು. "ಅಮ್ಮ ಅಮ್ಮ...ಓ ಅಮ್ಮ...ಎಲ್ಲಮ್ಮ ನೀನು?" ಸ್ಕೂಲ್ ಬ್ಯಾಗ್ ಬಿಸಾಕಿ ಓಡಿ ಬಂದು ಅಮ್ಮನ್ನ ತಬ್ಬಿಕೊಂಡುಮುತ್ತು ಕೊಡಲು ಶುರು ಮಾಡಿ ಬಿಡ್ತಾಳೆ. ಇವತ್ತು ಏನಪ್ಪಾ ಇಷ್ಟು ಪ್ರೀತಿ ಅಂದ್ರೆ, "ಅಮ್ಮ ನನ್ ಫ್ರೆಂಡ್ಸ್ ಎಲ್ಲ ಬರ್ತಾರಾ ನನ್ ಬರ್ತ್‌ಡೇ ಗೆ?" ಅಂತ ಒಂದೇ ಸಮ ಮುದ್ದುಗರೆಯೋಕೆ ಶುರು ಮಾಡ್ತಾಳೆ.
ಅಮ್ಮಂಗೆ ಏನ್ ಹೇಳ್ಬೇಕು ಅನ್ನುವುದೇ ತೋಚುತ್ತ ಇಲ್ಲ. ಸುಮ್ಮನೆ ಮಗಳನ್ನ ಇನ್ನೂ ಜೋರಾಗಿ ತಬ್ಬಿಕೊಂಡು ಮುದ್ದು ಮಾಡೋದು ನೋಡಿ, ಮಹಿಮಾಗೆ ಫುಲ್ ಅಚ್ಚರಿ. ಎಂದು ಇಲ್ಲದ್ದು ಯಾಕೆ ಅಮ್ಮ ಮಾತಾಡ್ತಾ ಇಲ್ಲ ಅಂತ!
ಅಮ್ಮ ಪಾಪುಗೆ ಊಟ ಮಾಡಿಸಿ, ಹಣೆಗೊಂದು ಮುತ್ತು ಕೊಟ್ಟು ಮಲಗಿಸಿ, ಆಚೆಬಂದು, "ದೇವ್ರೇ ನಾನ್ ಮಾಡ್ತಾ ಇರೋದು ಸರಿನ? ಪಾಪ ಮಗು ಎಷ್ಟು ಅಸೆ ಕನಸು ಕಟ್ಟಿಕೊಂಡಿದೆ. ಆದರೇನು ಮಾಡೋದು, ಈ ಕರೋನ ಬೆಂಬಿಡದ ಭೂತದ ಹಾಗೆ ಕಾಡ್ತಾ ಇದೆಯಲ್ಲ."
ಛೆ, ಬೆಳಗಿನಿಂದ ಒಂದೇ ಸಮ ಫೋನ್ ಕಾಲ್ಸ್. "ರೀ ಪೂಜಾ ನೀವು ನಿಜ್ವಾಗ್ಲೂ ಬರ್ತ್‌ಡೇ ಮಾಡ್ತಾ ಇದ್ದೀರಾ?" ಅಂತ ಒಬ್ರು. "ರೀ ಸಾರೀ ರೀ...ನಾವ್ ಬರಲ್ಲ" ಅಂತ ಇನ್ನೊಬ್ರು. "ರೀ ರಿಸ್ಕ್ ಅಲ್ವೇನ್ರಿ?" ಅಂತ ಒಬ್ರು. "ಪೂಜಾ, ಹೋಗ್ಲಿ ಮಾಡಿಬಿಡಿ. ಬರೋವ್ರು ಬರ್ತಾರೆ. ಇಲ್ಲಿ ಇನ್ನೂ corona ಬಂದಿಲ್ಲ ಅಲ್ವ!" ಅಂತ ಇನ್ನೊಬ್ರು.
ದೇವ್ರೇ, ಎಂಥ ಸಂಧಿಗ್ಧ ಪರಿಸ್ಥಿತಿ ತಂದಿಟ್ಟೆ. ಮಾಡಿದ್ರೆ ಭಯ. ಮಾಡದಿದ್ರೆ ಬೇಜಾರು. ಮೂರು ತಿಂಗಳ ತಯಾರಿ ಎಲ್ಲ ವೇಸ್ಟ್ ಅಲ್ವ ಅಂತ ಒಂದು ಸರ್ತಿ. ಇನ್ನೊಂದು ಸರ್ತಿ, ಪರವಾಗಿಲ್ಲ ಹೆಲ್ತ್ ಮುಖ್ಯ ಅಲ್ವ ಅಂತ. ಉತ್ತರವಿಲ್ಲದ ನೂರಾರು ಪ್ರಶ್ನೆಗಳು ತಲೆಯ ಸುತ್ತ ಸುತ್ತುತ್ತಲೇ ಇವೆ. ಆ ದಿನ ಮಗಳಿಗೆ ಪ್ರಾಮಿಸ್ ಮಾಡಿದ ಪೂಜಾ ಈಗಲೂ ಯೋಚಿಸುತ್ತಲೇ ಇದ್ದಾಳೆ. ಯಾವುದು ಸರಿ? ಯಾವುದು ತಪ್ಪು? ಕೆಲವೊಂದಕ್ಕೆ ಕಾಲವೇ ಉತ್ತರಿಸಬೇಕು ಎನ್ನುವುದು ಇದಕ್ಕೇನಾ?
"ಅಮ್ಮ, ನನ್ ಬರ್ತ್‌ಡೇ ಕ್ಯಾನ್ಸಲ್ ಮಾಡಲ್ಲ ಅಲ್ವ ಅಮ್ಮ?" ಎಂದು ಮಹಿಮಾ ನಿದ್ದೆಲೇ ಕನವರಿಸಿದಾಗ, "ಇಲ್ಲ ಚಿನ್ನ..ಯಾವಾಗಾದ್ರೂ ಮಾಡ್ತೀನಿ" ಅಂದ ಪೂಜಾಗೆ ಈ ಕರೋನ ಮಹಾ ಮಾರಿ ತಿಂಗಳಾನುಗಟ್ಟಲೆ ಇರುತ್ತೆ ಅಂತ ಏನು ಗೊತ್ತಿತ್ತು.
ಮಹಿಮಾ ಕಣ್ಣು ಬಿಟ್ಟು, "ಅಮ್ಮ, ಬ್ಯಾಡ ಡ್ರೀಮ್. ನನ್ ಬರ್ತ್‌ಡೇ ಕ್ಯಾನ್ಸಲ್ ಆಯಿತು", ಅಂತ ಅಂದಾಗ ಕಣ್ಣಿನಲ್ಲಿ ಜಿನುಗಿದ ಕಣ್ಣೀರನ್ನು ಮರೆ ಮಾಚುತ್ತ "ಇದು ನಿಜ ಪುಟ್ಟ" ಅಂತ ಹೇಳಲು ಧೈರ್ಯವಿಲ್ಲದೆ ಮನಸಲ್ಲೇ ಅಂದುಕೊಂಡಳು ಪೂಜಾ.
ದೇವರೇ, ಇದೆಲ್ಲ ಬೇಗ ಮುಗಿಸು ಅಂತ ದೇವರನ್ನು ಕೇಳಿ ಕೊಳೋದು ಬಿಟ್ಟು ಬೇರೇನೂ ತೋಚುತ್ತಿಲ್ಲ.. ಆದರೂ ಯಾವಾಗಲು ಅವಳಿಗೆ ತನ್ನ ನಿರ್ಧಾರದ ಮೇಲೆ ಒಂದುನಂಬಿಕೆ. ಮಾಡಿದ್ದೆ ಸರಿ ಏನೋ ಅಂತ. ರಾಜಣ್ಣ ಅಂಕಲ್ "ಸೆಲೆಬ್ರೇಶನ್ ಬಿಡಮ್ಮ, ಯಾವಾಗ ಬೇಕಾದ್ರು ಮಾಡಬೋದು. ಮಗು ಹುಷಾರಾಗಿದ್ರೆ ಅಲ್ವ?" ಅಂತ ಹೇಳಿದ ಮಾತು ನೆನಪಾದಾಗೆಲ್ಲ "ಹೌದಲ್ಲ!" ಅಂತ ಮನಸಿಗೆ ಸಮಾಧಾನ. ಜೊತೆಗೆ ರಮಾ ಹೇಳಿದಹಾಗೆ ಬೇರೆಯವರಿಗೆ ಆರೋಗ್ಯಕ್ಕೆ ತೊಂದರೆ ಕೊಟ್ಟರೆ, ಅಕಸ್ಮಾತ್ ಅಂದಾಗ, ಅದುನಿಜವೇ ಆಗಿ ಅವರಿಗೆ ಏನಾದರು ಆದರೆ ಜೀವನವೆಲ್ಲ ಕೊರಗಬೇಕಾ?
ಎಂಥ ಆತಂಕ. ಪೂಜಾಳ ಪ್ರಶ್ನೆಗೆ ಕಾಲವೇ ಉತ್ತರ ಕೊಡಬೇಕು ಅಷ್ಟೇ...
ತಾಗುಲಿ : Pushpa Krishna, corona story
Good content in the story,children are always anxious but being parent to handle situation is releaved well in the story.Most relevant in this critical 'Corona'situation.Keep writing good articles. Hearty congratulations
Great story. Just curious. Is Pooja your daughter? If yes, she will have a blast birthday party. No worries. As u said, you will have to wait until time comes.
Anamika.
Nice Regional Language Promotional activity got this link from my collegemates Group, I personally lack patience to type in Kannada Best wishes 4 those who Write in this
Tumba chennagi mudi bandide..hege munduvarisi!
Thx,
Asha
👌👌👌 beautifully narrated...
Todays reality ...
Very well written 👌👌
ಪುಟಾಣಿ ಮಗುವಿನ ಜನ್ಮದಿನದ ಕಥೆಯ ಮೂಲಕ ನಮ್ಮ ಸಮಾಜದ ಜನರಿಗೆ ಒಳ್ಳೆಯ ಸಂದೇಶ ಧನ್ಯವಾದಗಳು ಮೇಡಂ 👋👋👋💐💐💐
Good content in the story…