ಕನ್ನಡ ರಾಯಭಾರಿ - ಪ್ರಕಾಶ ಭಂಡಾರಿ

[ಹೊರನಾಡಿನಲ್ಲಿರುವ ಕನ್ನಡ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತ, ಕನ್ನಡ ಸಂಸ್ಕೃತಿಯ ಪರಿಸರವನ್ನು ಕಲ್ಪಿಸುವ ಉದ್ದೇಶದಿಂದ ವರ್ಷ ೨೦೦೦ ದಲ್ಲಿ ಕ್ಯಾಲಿಫೋರ್ನಿಯದ  ಅರ್ವೈನ್ ನಗರದಲ್ಲಿ ಕನ್ನಡ ಕಲಿ ಸಂಸ್ಥೆ ಮತ್ತು ಶಾಲೆಗಳು ಪ್ರಾರಂಭವಾದವು. ನಂತರ, ಇದರಿಂದ ಪ್ರೇರಿತವಾಗಿ ಅಮೇರಿಕದ ತುಂಬ ಮತ್ತು ಇತರೆಡೆ 'ಕನ್ನಡ ಕಲಿ' ಶಾಲೆ ಮತ್ತು ಕಾರ್ಯಕ್ರಮಗಳು ಹುಟ್ಟಿಕೊಂಡವು. ಇದು ನಿಮಗೆ ಗೊತ್ತಿರುವ ವಿಷಯ.
ಸ್ವತಂತ್ರವಾಗಿ, ಇಂತಹದೆ ಕಳಕಳಿಯಿಂದ, ಮುಂಬಯಿ ನಗರದಲ್ಲಿ, 'ಚಿಣ್ಣರ ಬಿಂಬ' ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡ ಮತ್ತು ಕನ್ನಡ ಸಂಸ್ಕೃತಿಗಾಗಿ ಮೌನವಾಗಿ ದುಡಿಯುತ್ತ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಪ್ರಕಾಶ ಭಂಡಾರಿ.  ಇವರ ಕಾರ್ಯ ವೈಖರಿ ಮತ್ತು ಸಾಧನೆಗಳು ಹೊರನಾಡಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ನಮ್ಮೆಲ್ಲರಿಗೂ ಆದರ್ಶಪ್ರಾಯ.   ಕನ್ನಡ ಕಲಿಗಳೆ, ಇವರನ್ನು ನಾವು ಅಭಿನಂದಿಸುವುದಷ್ಟೇ ಅಲ್ಲ, ಅನುಕರಿಸುವುದೂ ಅಗತ್ಯ.]

"ಹೊರನಾಡ ಕನ್ನಡಿಗರಾದ ಪ್ರಕಾಶ ಭಂಡಾರಿಯವರು ಮುಂಬಯಿಯಲ್ಲಿ ಕನ್ನಡವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯ ಯಾವುದೇ ವಿಶ್ವವಿದ್ಯಾಲಯ ಅಥವಾ ಅಕಾಡೆಮಿ ಮಾಡಿರುವುದಕ್ಕಿಂತಲೂ ದೊಡ್ಡದು. ಮುಂಬೈವಾಸಿಯಾದ ತುಳುಕನ್ನಡಿಗ ಪ್ರಕಾಶ ಭಂಡಾರಿ, ಉಚ್ಚ ಪೋಲೀಸ್ ಅಧಿಕಾರಿ, ಜೊತೆಗೆ ಅವರೊಬ್ಬ ಕನ್ನಡ ಸಂಸ್ಕೃತಿಯ ರಾಯಭಾರಿ. ನಿಜವಾಗಿಯೂ ಹೊರನಾಡ ಕನ್ನಡಿಗರು, ವಿದೇಶಗಳಲ್ಲಿ ವಾಸಿಸುವ ಅನಿವಾಸಿ ಕನ್ನಡಿಗರು ಅಷ್ಟೇ ಏಕೆ, ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದು ಇಂಗ್ಲಿಷ್ ಮೀಡಿಯಂ ಶಾಲೆ ಸೇರಿ ಕನ್ನಡ ಸರಿಯಾಗಿ ಓದಲು ಬರೆಯಲು ಬಾರದ, ಕನ್ನಡ ಸಾಹಿತ್ಯ, ಸಂಗೀತ ಕಲೆಯ ಬಗ್ಗೆ ತಿಳುವಳಿಕೆ ಇಲ್ಲದ ಕನ್ನಡ ಮಕ್ಕಳು ಮತ್ತು ಅವರ ಪಾಲಕರೂ ಕೂಡ, ಪ್ರಕಾಶ ಭಂಡಾರಿಯವರನ್ನು ಅಭಿನಂದಿಸಬೇಕು. ಅವರು ಮಾಡಿದ ಕಾರ್ಯ ಬೇರೆ ರಾಜ್ಯದ ಶಹರಗಳಲ್ಲಿ, ಕರ್ನಾಟಕದಲ್ಲಿ ಕೂಡ ನಡೆಯಬೇಕು. ಭಂಡಾರಿಯವರ ದಾರಿ ನಾವು ಅನುಸರಿಸಬೇಕು. ಕನ್ನಡ ಉಳಿಸಬೇಕು, ಬೆಳೆಸಬೇಕು, ಗೆಲ್ಲಿಸಬೇಕು. ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು’ ಎಂಬ ಕುವೆಂಪು ಮಂತ್ರವನ್ನು ಅನುಷ್ಠಾನಕ್ಕೆ ತಂದ ಅಪೂರ್ವ ಕನ್ನಡಿಗರು ಭಂಡಾರಿಯವರು. ..."

ಡಾ. 'ಜೀವಿ' ಕುಲಕರ್ಣಿ ಅವರ  ಪೂರ್ತಿ ಲೇಖನವನ್ನು ಈ ಕಡತದಲ್ಲಿ ಓದಿ:


ತಾಗುಲಿ : Chinnara Bimba, Prakash Bhandari, Dr. G.V. Kulkarni