ಲಕ್ಷ್ಮಿ ನರಸಿಂಹ ಸ್ತೋತ್ರ
ನರ್ತನ: ಮಾಲತಿ ಅಯ್ಯಂಗಾರ್
ಮತ್ತು ಕಲಾವಿದರು;
ಗಾಯನ: ಕಲಾನಿಧಿ ವಿದ್ವಾನ್
ಶ್ರೀ ಆರ್.ಕೆ. ಶ್ರೀಕಂಠನ್;
ಪೂರ್ಣ ವಾಚನ
ನರ್ತನ: ಮಾಲತಿ ಅಯ್ಯಂಗಾರ್
ಮತ್ತು ಕಲಾವಿದರು;
ಗಾಯನ: ಕಲಾನಿಧಿ ವಿದ್ವಾನ್
ಶ್ರೀ ಆರ್.ಕೆ. ಶ್ರೀಕಂಠನ್;
ಪೂರ್ಣ ವಾಚನ
ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ? ಕಿಟ್ಟೆಲ್ ಕೋಶದಲ್ಲಿ ೧೨ನೆ ಶತಮಾನದ ಶಬ್ದಮಣಿದರ್ಪಣ ಮತ್ತು ಬಸವಪುರಾಣಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಕವಿರಾಜ ಮಾರ್ಗ, ಪಂಪ, ಮತ್ತು ರನ್ನರಲ್ಲಿ ಈ ಪದಗಳ ಪ್ರಯೋಗ ನನಗೆ ಕಾಣಲಿಲ್ಲ. ಇದಕ್ಕೆ ಏನಾದರೂ ಸುಲಭ ವಿವರಣೆ ಇದ್ದರೆ ನನಗೆ ಹೊಳೆಯುತ್ತಿಲ್ಲ.
ಯುಗಾದಿಯಿಂದ ಉಗಾದಿ ಬಂತೆ? ಉಗಾದಿಗೆ ಒಂದು ಸ್ವತಂತ್ರ ಹುಟ್ಟು ಇದೆಯೆ? ಭಾಷೆ ಬೆಳೆಯುವುದದಾದರೂ ಹೇಗೆ?
... ಸಾಯಂಕಾಲದ ಮಳೆ ಕಾಯ್ದ ರಸ್ತೆಯ ಮೇಲೆ ರಪರಪನೆ ಬಿದ್ದಾಗ, ಹೆಬೆ ಎದ್ದು, ದೂಳಿನ ಕಂಪನ್ನು ಮೂಗು ಹಿಗ್ಗಿಸುತ್ತ ಸವಿಯಲು ಕಾಯದವರು ಯಾರಿದ್ದಾರೆ! ಆ ದಿನದ ಆಗಮನವನ್ನು ಸಾರುವುದೇ ಉಗಾದಿ!
ಸಂಸ್ಕೃತ ಚಮತ್ಕಾವ್ಯ ಪರಂಪರೆಯ ಒಂದು ಇಣುಕು ನೋಟ; ಮತ್ತು ನನ್ನ ಪವಿತ್ರ ಪ್ರೇಮ ಕವನ ಮತ್ತು ಆ ದುಸ್ಸಾಹಸದ ಹಿಂದಿನ ಕತೆ.
ನನ್ನ ಮಗನಿಗೆ ೫ ವರುಷವಾಗಿದ್ದಾಗ ಒಂದು ಆಟಿಕೆಗಾಗಿ ಬೇಡಿಕೆಯಿಟ್ಟ. ಅದನ್ನು ನಾವು ಕೊಡಿಸಿದೆವು. ಮಾರನೇ ದಿನವಷ್ಟೇ ಅದೇ ಸರಣಿಯಲ್ಲಿಯ ಇನ್ನೊಂದು ಬೊಂಬೆ ಬೇಕೆಂದು ಹಠ ಶುರುವಾಯಿತು. ವಿಷಯ ಮರೆಸುವ ನನ್ನ ಯಾವುದೇ ಮಾಮೂಲಿನ ತಂತ್ರಗಳು ನಿಷ್ಪ್ರಯೋಜಕವಾಗಿ ಸಣ್ಣ ಅಳುಕ ಮುಂದುವರೆಯಿತು.
ಎಲ್ಲ ಆಸೆಗಳನ್ನು ಪೂರೈಸಬೇಕೇ? ಪೂರೈಸಿದಂತೆ ಆಸೆಯ ಬಳ್ಳಿ ಬೆಳೆಯುತ್ತಲೇ ಹೋಗುತ್ತದೆಯೇ? ಯಾರಿಗೆ ದುಃಖ? ಯಾರಿಗೆ ಕೋಪ? ಯಾರಿಗೆ ಮರುಕ? ಮಗುವಿನ ಮನಸ್ಸನ್ನು ನೋಯಿಸದೆ, ವಾದ-ಪ್ರತಿವಾದಗಳಿಗೆ ಎಡೆ ಕೊಡದೆ, ಜೀವನದ ಪಾಠಗಳನ್ನು ಕಲಿಸುವುದು ಹೇಗೆ? "ಸುಳ್ಳು" ತಂದೆ-ತಾಯಿಗಳಿಗೆ ಸಮರ್ಥ ಅಸ್ತ್ರವಾದಿತೇ? ಇಂದಿನ "ಬಿಳಿ ಸುಳ್ಳು" ನಾಳೆ ಬೆಳೆದು ಮುಳ್ಳು ಆದೀತೆ? ಈ ಪ್ರಶ್ನೆಗಳ ಮೇಲೆ ಅನುಭವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಶೃತಿ ಅರವಿಂದ್.
ಗಾಂಧಿಯನ್ನು ಕೆಲವರು ದೇವತೆಯಂತೆ ಪೂಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ.
"ಎಲ್ಲರ ಜೀವನದಲ್ಲೂ ಕೆಲವು ಏರುಪೇರುಗಳಾಗುತ್ತವೆ. ನೀವೇನು ತಿಳಿಯದವರಲ್ಲ. ಕೊನೆತನಕ ಹೋರಾಡುತ್ತೇನೆ ಎನ್ನುವವ ಮಾತ್ರ ಸೈನಿಕ. ನಾನು ಗೆಲ್ಲತ್ತೇನೆ ಎನ್ನುವುದು ಬಿಟ್ಟು ಬೇರೇನನ್ನೂ ಚಿಂತಿಸದೆ ಇರುವುದಕ್ಕೆ ಆತನಿಗೆ ಮಾತ್ರ ಸಾಧ್ಯ. ನೀವು ಗೆಲ್ಲುತ್ತೀರಿ. "
ಹೋರಾಟವಾದರೂ ಯಾರೊಡನೆ? ಸೇನಾನಿ ಗುರು ಸಾರ್ ಗೆಲ್ಲುತ್ತಾರಾ? ಗೆದ್ದರಾ?
ಮಾನವೀಯ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ನವಿರಾಗಿ ಕತೆ ಹೆಣೆದಿದ್ದಾರೆ ಗೋಪೀನಾಥ ರಾವ್.ಮುಂದೆ ಓದಿ.