ಬರೆಹ

Articles

ಸ್ತ್ರೀ ಸಂವೇದನೆ ಮತ್ತು ಸ್ತ್ರೀತ್ವ ವಾದ

ಸ್ತ್ರೀಯನ್ನು ದೇವತೆ ಎಂದೂ, "ಮಾತೃ ದೇವೋ ಭವ" ಎಂದೂ ಕರೆದ ಸನಾತನ ಧರ್ಮ ಅದೇ ಉಸುರಿನಲ್ಲಿ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದೂ ಗಂಡ ತೀರಿದ ಹೆಣ್ಣು ಮುಂಡೆ ಎಂದೂ ಘೋಷಿಸುತ್ತದೆ. ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಈಗ ವಿದ್ಯಾವಂತರಾಗಿದ್ದಾರೆ, ಸರಿ ಸುಮಾರಾಗಿ ಕೆಲಸ ಮಾಡುತ್ತಿದ್ದಾರೆ, ಆರ್ಥಿಕವಾಗಿ ಸುಧಾರಿಸಿದ್ದಾರೆ. ಆದರೂ, ಕೌಟುಂಬಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಅಸಮಾನಳು, ದೌರ್ಜನ್ಯಪೀಡಿತಳು.‌ ಹೊಣೆ ಹೆಚ್ಚಾಗಿದೆ; ಅದಕ್ಕೆ ತಕ್ಕಂತೆ ನೆಮ್ಮದಿ ಸಿಗುತ್ತಿಲ್ಲ. ಸ್ತ್ರೀ-ಪುರುಷರ ಅ-ಸಮೀಕರಣಗಳಲ್ಲಿ ತೃತೀಯ ಲಿಂಗವೂ ಸೇರಿ ಸಮಸ್ಯೆಯನ್ನು ತೊಡಕುಗೊಳಿಸಿದೆ. ಇದಕ್ಕೆ ಉತ್ತರ ಎನ್ನುವಂತೆ ಸ್ತ್ರೀತ್ವವಾದ ಮುಂದೆ ಬಂದಿದೆ. ಏನಿದು? ಇಲ್ಲಿ ಶ್ರೀನಿವಾಸ ಭಟ್ಟರು ಹೇಳುವ, ಸ್ತ್ರೀತ್ವ ಮತ್ತು ಸ್ತ್ರೀ ಸಂವೇದನೆಗಳ ಸಮ್ಮಿಶ್ರಣವೆ ಸುಖ ಶಾಂತಿ ಸಮೃದ್ಧಿಗಳಿಗೆ ಸಮರ್ಪಕ ರಸಾಯನವೆ? ಸಮೀಕರಣ ಸಾಧ್ಯವೆ? ಸಮತ್ವ ಸಾಧುವೆ? - ಸಂ

ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!

ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು.

ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌

ಎಲ್ಲರಿಗೂ ಕೃಷ್ಣಮಾಸ ಶುಭ-ಶೋಭೆಗಳನ್ನು ತರಲಿ!

ಶ್ರೀ ಕೃಷ್ಣ ಪರಮಾತ್ಮ ನರನಿಗೆ ಗೀತೋಪದೇಶ ಮಾಡಿದ ತಿಂಗಳು. ಅಂದರೆ, ಗೀತಾ ಜಯಂತಿಯ ತಿಂಗಳು.  ಗೀತೆಯನ್ನು ಪಠಿಸುತ್ತ, ಮನನಿಸುತ್ತ, ಅರ್ಜುನನ ನಿಮಿತ್ತ  ಮನುಜರಿಗೆ ದೊರಕಿದ  ಕೃಷ್ಣ ಎನ್ನುವ ಜ್ಞಾನಾಮೃತವನ್ನು ಸವಿಯುತ್ತ ಕೃಷ್ಣಮಾಸವಿಡಿ ನಲಿಯೋಣ

ಗುರಿ ತಪ್ಪುತ್ತಿರುವ ಗುರುಗಳಿಂದ ಗುರುಕುಲಕ್ಕೇ ಅವಮಾನ

ಎಲ್ಲ ಶಿಕ಼ಕರೂ ಹೀಗಲ್ಲ ಅಂತ ಸಮಸ್ಯೆಯನ್ನೆ ತೊಡೆದು ಹಾಕುವುದು ಸರಿ ಅಲ್ಲ.  ಶೈಕ್ಷಣಿಕ ಕೊರತೆ, ಅವಕಾಶ ವಂಚನೆ, ಅನ್ಯಾಯ, ಅಥವ ಅನಾಹುತ ಒಂದೇ ಮಗುವಿಗೆ ಆದರೂ ಅದು ಸಮಾಜದ ಸೋಲು.

Novರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು

ಕನ್ನಡ ಮರೆತಿದೆ, ಕನ್ನಡ ನನಗೆ ಬಾರದು, ಕನ್ನಡ ಕಠಿನ ಎನ್ನುವ ಅನೇಕ ಶಂಕೆಗಳನ್ನು ತಲೆಯಲ್ಲಿ ತುಂಬಿಕೊಂಡು, ಮೊದಲ ಅಧ್ಯಾಯದಲ್ಲೆ, ಆ ಅರ್ಜುನನ ಹಾಗೆಯೆ ಕೈ ಚೆಲ್ಲಿ ಕುಳಿತುಕೊಂಡೆ.