ದುರಾದೃಷ್ಟದಿಂದ ನಿರ್ಗತಿಕರಾಗಿ, ಮನೆ ಇಲ್ಲದವರಾಗಿ ತೊಳಲುತ್ತಿರುವ ಕುಟುಂಬಗಳಿಗೆ ತಮ್ಮ ಕಾಲ ಮೇಲೆ ತಾವು ಮತ್ತೆ ನಿಲ್ಲುವಂತೆ ಎಲ್ಲರಿಗು ಗೊತ್ತಿರುವಂತೆ ತಾತ್ಕಾಲಿಕ ಸಹಾಯ ಮಾಡುವ ಸಂಸ್ಥೆ ಫ್ಯಾಮಿಲೀಸ್ ಫಾರ್‌ವಾರ್ಡ್ ( http://www.families-forward.org ): ಊಟದ ವ್ಯವಸ್ಥೆ, ವಸತಿ ಸೌಕರ್ಯ, ಕೆಲಸ ಹುಡುಕಲು ನೆರವು, ಮಾರ್ಗದರ್ಶನ ಇತ್ಯಾದಿ. ಇಂಥ ಪರಿಸ್ಥಿತಿಯಲ್ಲಿ ವಿಶೇಷವಾಗಿ ಹೊಡೆತ ಬೀಳುವುದು ಮಕ್ಕಳಿಗೆ. ಹೊಟ್ಟೆಗೆ ಊಟ, ಮೈಗೆ ಬಟ್ಟೆ, ಮಲಗಲು ಕಟ್ಟೆಗಾಗಿ ತಂದೆ ತಾಯಿಗಳು ಪರದಾಡತ್ತಿರುವಾಗ ಮಗುವಿನ ಸಾಲೆಯ ವಿಚಾರ ಯಾರಿಗೆ? ಯಾವ ಸೌಕರ್ಯಗಳೂ ಕಡಮೆಯಾಗದೆ ಮೊದಲ ದಿನದಿಂದ ಸಾಲೆ ತಪ್ಪಿಸದಂತೆ ನೋಡಿಕೊಳ್ಳುವುದು ಅತ್ಯಗತ್ಯ.
ಈ ಕಾರ್ಯದಲ್ಲಿ, ಶಾಲಾ ಬಾಲಕರಿಗೆ ಅಗತ್ಯವಾದ ಸಲಕರಣೆಗಳಿಂದ ತುಂಬಿದ ಬೆನ್‌ಚೀಲಗಳನ್ನು ಒದಗಿಸುತ್ತ, ಫ್ಯಾಮಿಲೀಸ್ ಫಾರ್‌ವಾರ್ಡ್ ದೊಂದಿಗೆ ಕನ್ನಡ ಕಲಿ ವರ್ಷಗಳಿಂದ ಕೈಜೋಡಿಸುತ್ತಿದೆ.
ಕನ್ನಡ ಕಲಿಗೆ ನಮನ : ೨೦೦೯
ಕೈ ಚಾಚು : ೨೦೦೮
ಶಾಲಾ ಬಾಲಕರಿಗೆ ತುಂಬಿದ ಬೆನ್ಚೀಲಗಳು : ೨೦೦೭
ತಾಗುಲಿ : geyme, Familes Forward