ನಿಮ್ಮ ಮಾತು

ಕನ್ನಡ ಕಲಿಯಲ್ಲಿ ಅಮೂಲ್ಯ/ಉಪಯುಕ್ತವಾದುದು ಏನು?

ನಿಮ್ಮ ಮಾತು
ವಿಶ್ವೇಶ್ವರ ದೀಕ್ಷಿತ
(ಕನ್ನಡ ಕಲಿ ದಶಮಾನೋತ್ಸವ ಸ್ಮರಣ ಸಂಚಿಕೆ , ಕನ್ನಡ ಕಲಿ ದಿನ ೨೦೧೦, ಅರ್ವೈನ್, ಕ್ಯಲಿಫೋರ್ನಿಯ)

ಪ್ರಶ್ನೆ: ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಮತ್ತು ಕನ್ನಡ ಕಲಿಯಲ್ಲಿ ನಿಮ್ಮ ಪಾತ್ರವನ್ನು ವಿವರಿಸಿ.
ನಮ್ರತಾ: ನಾನೆ ಕನ್ನಡ ಕಲಿತಿಲ್ಲದ್ದರಿಂದ ಕನ್ನಡ ಕಲಿಸುವುದು ನನಗೆ ಆಗದು. ಆದರೆ ಕನ್ನಡ ಕಲಿ ಉಳಿದೆಲ್ಲ ಕಾರ್ಯಕ್ರಮಗಳಲ್ಲು ಭಾಗವಹಿಸುತ್ತ ನೆರವಾಗುತ್ತೇನೆ. ಈಗ, ನಾಲ್ಕು ವರುಷಗಳಿಂದ ಹಾಡು ಸಂಗೀತಗಳ ಮೂಲಕ ನಿಯತವಾಗಿ ಕನ್ನಡ ಕಲಿಸುತ್ತಿದ್ದೇನೆ.

ಪ್ರಶ್ನೆ: ಕನ್ನಡ ಕಲಿಯಲ್ಲಿ ಏನನ್ನು ಸಾರ್ಥಕ/ಸಫಲ/ತೃಪ್ತಿಕರ ಎಂದು ಬಗೆಯುತ್ತೀರಿ?
ನಮ್ರತಾ: ಮಕ್ಕಳು ತರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ

ಪ್ರಶ್ನೆ: ಹೊಸ ಶಿಕ್ಷಕರಿಗೆ ಏನು ಸಲಹೆ ಕೊಡಬಯಸುತ್ತೀರಿ? ತಂದೆ-ತಾಯಿಗಳಿಗೆ?
ನಮ್ರತಾ: ಮಕ್ಕಳಿಗೆ ಕಲಿಯುತ್ತಿದ್ದೇವೆ ಎಂದು ಗೊತ್ತಾಗದಂತೆ ಕಲಿಸುವುದು ಮುಖ್ಯ, ವಿಶೇಷವಾಗಿ ಹಾಡು/ಸಂಗೀತದ ತರಗತಿಯಲ್ಲಿ.

ಪ್ರಶ್ನೆ: ಕಲಿಸುವಲ್ಲಿ ಯಾವುದನ್ನು ಅತ್ಯಂತ ಚಾಲೆಂಜಿಂಗ್ ಎಂದು ಗಣಿಸುತ್ತೀರಿ?
ನಮ್ರತಾ: ಕಲಿಸಲು, ಕಲಿಯಲು ತಕ್ಕುದಾದ ಹಾಡು ಹುಡುಕುವುದು.

ಪ್ರಶ್ನೆ: ನಿಮ್ಮ ಮಹತ್ವದ ಒಂದು ಸಾಧನೆ ಏನು?
ನಮ್ರತಾ: ಇಲ್ಲಿ ಬೆಳೆದ ಮಕ್ಕಳಿಂದ ಕನ್ನಡದ ಕಠಿನ ಪದಗಳನ್ನು ಸರಿಯಾಗಿ ಉಚ್ಚರಿಸುವಂತೆ ಮತ್ತು ಹಾಡುಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡುವುದು ಚಾಲೆಂಜಿಂಗ್ ಆಗಿವೆ.

ಪ್ರಶ್ನೆ: ಕನ್ನಡ ಕಲಿಯಲ್ಲಿ ಅಮೂಲ್ಯ/ಉಪಯುಕ್ತವಾದುದು ಏನು?
ಪ್ರಿಯಾ ಪ್ರವೀಣ್: ಕನ್ನಡ ಮಕ್ಕಳೊಂದಿಗೆ ಬೆರೆಯುವ ಅವಕಾಶ ಹಾಗು ಕನ್ನಡದ ಅಕ್ಷರಗಳ ಪರಿಚಯ.
ನಮ್ರತಾ: ಓದು, ಬರೆ, ಮತ್ತು ಮಾತಾಡುವುದನ್ನು ಕಲಿಯುವುದು.
ಈಶ್ವರಿ ರಾವ್: ತಡವರಿಸದೆ ಓದು, ಬರೆ, ಮತ್ತು ಮಾತಾಡುವುದು.

ಪ್ರಶ್ನೆ: ನಿಮ್ಮ ಮಗುವಿಗೆ ಕನ್ನಡ ಕಲಿಸುವಲ್ಲಿ ಚಾಲೆಂಜ್ ಗಳು ಏನು?
ಪ್ರಿಯಾ ಪ್ರವೀಣ್: ಕನ್ನಡ ಕಲಿಯುವ ಆಸಕ್ತಿ ಬೆಳೆಸಲು ಕಷ್ಟವಾಗುತ್ತಿದೆ.
ವಾಣಿ ಭಟ್: ಇಲ್ಲಿ ಮಕ್ಕಳಿಗೆ ಕನ್ನಡದ ವಾತಾವರಣ ಇಲ್ಲ. ನಾವು ಕೂಡ ಮನೆಯಲ್ಲಿ ಕನ್ನಡ ಮಾತಾಡುವುದನ್ನು ಮರೆಯುತ್ತೇವೆ!
ಈಶ್ವರಿ ರಾವ್: ಹೊರಗೆ, ಕನ್ನಡಿಗರೊಂದಿಗೂ, ಕನ್ನಡ ಮಾತಾಡುವ ವಾತಾವರಣ ಇಲ್ಲ.

ಪ್ರಶ್ನೆ: ಮನೆಯಲ್ಲಿ ಕನ್ನಡ ಮಾತಾಡುತ್ತೀರಾ? ಮಗುವಿಗೆ ಮಾತಾಡಲು ಉತ್ತೇಜಿಸುತ್ತೀರಾ, ಹೇಗೆ?
ವಾಣಿ ಭಟ್: ಮಗುವಿನೊಂದಿಗೆ ಕನ್ನಡದಲ್ಲೆ ಮಾತಾಡುತ್ತೇವೆ. ಕೆಲವೊಮ್ಮೆ ಕನ್ನಡದಲ್ಲಿ ಮಾತಾಡಲು ನೆನಪಿಸುತ್ತೇವೆ.
ಪ್ರಿಯಾ ಪ್ರವೀಣ್: ಹೌದು ಮನೆಯಲ್ಲಿ ಕನ್ನಡ ಕಡ್ಡಾಯ. ಕನ್ನಡ ಅಲ್ಲದೆ ಬೇರೆ ಮಾತಿಗೆ ಪ್ರತಿಕ್ರಿಯೆ ಸಿಗುವುದಿಲ್ಲ.

ಪ್ರಶ್ನೆ: ನಿಮ್ಮ ಮಗುವಿನ ಸಾಧನೆ/ಪ್ರಗತಿಯನ್ನು ಹೇಗೆ ಗುರುತಿಸುತ್ತಿರಿ/ಅಳೆಯುತ್ತೀರಿ?
ಪ್ರಿಯಾ ಪ್ರವೀಣ್: ಕನ್ನಡ ಓದಲು ಹಾಗು ಬರೆಯಲು ಕಲಿಯಬೇಕು.

ಪ್ರಶ್ನೆ: ಶಿಕ್ಷಕರಿಗೆ, ಸಂಯೋಜಕರಿಗೆ, ಇತರ ತಂದೆ-ತಾಯಿಗಳಿಗೆ ನಿಮ್ಮ ಸಲಹೆಗಳು ಏನು?
ಪ್ರಿಯಾ ಪ್ರವೀಣ್: ದಯವಿಟ್ಟು ಕನ್ನಡ ಕಲಿ ಸಮಯದಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೆ ಮಾತಾಡೋಣ‌. ಮನೆಯಲ್ಲಿ ಅಭ್ಯಾಸ ಮಾಡಿಸಲು 'ಮನೆ ಕೆಲಸ' ಕಳಿಸಿ
ನಮ್ರತಾ: ಮನೆಯಲ್ಲಿ ಕನ್ನಡ ಮಾತನಾಡಿ.

ಪ್ರಶ್ನೆ: ಕನ್ನಡ ಕಲಿಯನ್ನು ಇನ್ನೂ ಉತ್ತಮಗೊಳಿಸಲು ಬದಲಾವಣೆಗಳು ಮತ್ತು ನಿಮ್ಮ ಸಲಹೆಗಳು ಏನು?
ವಾಣಿ ಭಟ್: ಕನ್ನಡ ಕಲಿ ತರಗತಿಯ ಮುಂಚೆ, ತಂದೆ ತಾಯಿಯರು ಮಕ್ಕಳ ಜೊತೆ ಬೆರೆತು ಕನ್ನಡದಲ್ಲಿ ಮಾತಾಡಿದರೆ ಮಾತಿನ ಕಲಿಕೆ ಸುಲಭವಾಗಬಹುದು.
ಪ್ರಿಯಾ ಪ್ರವೀಣ್: ಕನ್ನಡ ಕಲಿಯನ್ನು ಪ್ರತಿವಾರ ಮಾಡಿ.


ನೀವೇನಂತೀರಿ?

ನಿಮ್ಮ ಉತ್ತರಗಳನ್ನು ಕೆಳಗೆ ಬರೆಯಿರಿ


ತಾಗುಲಿ : Your words, teaching Kannada, Namratha Nadig, Priya Praveen, Vani Bhat,Ishwari Rao