ಕನ್ನಡ ಕಲಿ ದಿನ 2006 ಶಿಕ್ಷಕರ ಸನ್ಮಾನ


ಶಿಕ್ಷಕರಿಗೆ ಗೌರವಾರ್ಪಣೆ
ಕನ್ನಡ ಕಲಿ ದಿನ 2006ರ ಸಂದರ್ಭದಲ್ಲಿ ಸನ್ಮಾನಿಸಲಾದ‌ ನಿಸ್ಪೃಹತೆಯಿಂದ ದುಡಿಯುತ್ತಿರುವ ಶಿಕ್ಷಕರು ಮತ್ತು ಸಹಯೋಜಕರು


ತಮ್ಮ ಪಥದಲ್ಲಿ ಬಂದ ಎಲ್ಲರ ಜಿವನವನ್ನು ರೂಪಿಸುವಂಥವರು ಶಿಕ್ಷಕರು. ಅವರು ಕಲಿಸಿದ ಪಾಠಗಳು ವಿದ್ಯಾರ್ಥಿಗಳ ಜಿವನದುದ್ದಕ್ಕೂ ದಾರಿದೀಪಗಳಾಗುತ್ತವೆ. ಶಿಕ್ಷಕರು ಕಲಿಕೆಗೆ ಬಂದೊದಗುವ ಅಡಚನೆಗಳನ್ನು ಅಳಿಸಿ ಹಾಕುವರು. ವಿದ್ಯಾರ್ಥಿಗಳ ಅಂತರಂಗವನ್ನು ತಟ್ಟುವರು. ಆದರೂ, ನ್ಯಾಯವಾಗಿ ಗಳಿಸಿದ ಮಾನ್ಯತೆ ಕೃತಜ್ಞತೆಗಳನ್ನು ಕಾಣರು. ಅವುಗಳಿಗಾಗಿ ಹಂಬಲಿಸದಿರುವ ಮಹಾನುಭಾವರು ಇವರು. ಅನೇಕ ಶಿಕ್ಷಕರು ತಮ್ಮ ಜವಾಬುದಾರಿ ಮತ್ತು ಕೆಲಸದ ಹೊರೆಯಿಂದ ಬಳಲಿದವರು. ಅವರಿಗೂ ತಮ್ಮದೆ ಕುಟುಂಬ, ಹಣಕಾಸಿನ ತೊಂದರೆಗಳು, ಜೀವನದ ಒತ್ತಡಗಳು ಎಲ್ಲರಂತೆ ಇವೆ. ಅವೆಲ್ಲವನ್ನು ಮೀರಿ ನಿಲ್ಲುವರು ಇವರು. ಶಿಕ್ಷಕರನ್ನು ಗೌರವಿಸುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳಲ್ಲಿನ ಇವರ ನಿಷ್ಠೆಯನ್ನು ನಾವು ಗೌರವಿಸುತ್ತೇವೆ ಎಂದು ತೋರಿಸಲು ಅವರನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು ಅವಶ್ಯ.

ಸಾಕ್ರೆಟೀಸ್ ಉತ್ತಮ ಶಿಕ್ಷಕರಿಗೆ ಉದಾಹರಣೆ. ಶಿಕ್ಷಕನಲ್ಲ, ತಾನೊಬ್ಬ ವಿದ್ಯಾರ್ಥಿ ಎಂದು ತಿಳಿದವ. ಒಳಿತು ಮತ್ತು ಜಾಣ್ಮೆಗಳನ್ನು ಗಳಿಸುವುದು ಪ್ರೇಮ ಮತ್ತು ಸ್ನೇಹದಿಂದ ಸಾಧ್ಯ ಎಂದು ಅರಿತವ. ತಾನೊಬ್ಬ ಬರಿ ಕ್ಯಟಲಿಸ್ಟ್, ಕಲಿತುದೆಲ್ಲ ವಿದ್ಯಾರ್ಥಿಯಲ್ಲಿರುವ ದೈವ ಶಕ್ತಿಯಿಂದ, ತನ್ನಿಂದ ಅಲ್ಲ, ಎಂದು ನಂಬಿದವ.

ಸಪ್ಟಂಬರ ೫ ಭಾರತದಲ್ಲಿ 'ಶಿಕ್ಷಕರ ದಿನ' ಎಂದು ಆಚರಿಸಲ್ಪಡುತ್ತದೆ. ಅದು ಒಬ್ಬ ಮಹಾನ್ ಶಿಕ್ಷಕ ಡಾ. ಸರ್ವಪಳ್ಳಿ ರಾಧಾಕೃಷ್ಣ ಅವರ ಹುಟ್ಟುದಿನ. ೧೯೬೨ರಲ್ಲಿ ಡಾ. ರಾಧಾಕೃಷ್ಣ ಭಾರತದ ಅಧ್ಯಕ್ಷರಾದರು. ಅವರ ಹುಟ್ಟುದಿನವನ್ನು ಆಚರಿಸಲು ಹಲವು ವಿದ್ಯಾರ್ಥಿಗಳು ಅನುಮತಿ ಕೋರಿದರು. ಆಗ ಅವರು ಏನು ಹೇಳಿದರು ಗೊತ್ತೆ? ನನ್ನ ಹುಟ್ಟುದಿನವನ್ನು ಪ್ರತ್ಯೇಕವಾಗಿ ಆಚರಿಸುವುದಕ್ಕಿಂತ, ಸಪ್ಟಂಬರ ೫ನ್ನು ಎಲ್ಲ ಶಿಕ್ಷಕರ ದಿನ ಎಂದು ಗಣಿಸಿದರೆ ಅದು ನನ್ನ ಹೆಮ್ಮೆಯ ಭಾಗ್ಯ ಎಂದು ತಿಳಿಯುತ್ತೇನೆ. ಡಾ. ರಾಧಾಕೃಷ್ಣ ಅವರ ಶಿಕ್ಷಕರ ಮೇಲಿನ ಅತೀವ ಪ್ರೀತಿಯನ್ನು ಈ ವಿನಂತಿ ಎತ್ತಿ ತೋರಿಸಿತು. ಅಂದಿನಿಂದ ಸಪ್ತಂಬರ ೫ ಶಿಕ್ಷಕರ ದಿನ ಎಂದು ಭಾರತದಲ್ಲಿ ಮಾನ್ಯತೆ ಪಡೆದಿದೆ.

ಅಧಾರ:
http://www.indianchild.com/teachers_day_india.htm ಭಾರತದ ಅಧ್ಯಕ್ಷ ಜೆ.ಪಿ. ಅಬ್ದುಲ್ ಕಲಾಂ ಅವರು ೨೦೦೩ರ ಶಿಕ್ಷಕರ ದಿನದಂದು ನೀಡಿದ ಸ್ಫೂರ್ತಿದಾಯಕ ಭಾಷಣವನ್ನೂ ಇಲ್ಲಿ ಓದಿ.


ತಾಗುಲಿ : kannada kali day, pictures, teachers