ಅಮೆರಿಕ ನೆಲದಲ್ಲಿ ಕನ್ನಡದ ಬೀಜಗಳ ಬಿತ್ತನೆ

ಕನ್ನಡ ಕಲಿ ಎಂದರೆ ಏನು ?

ಕನ್ನಡ ಕಲಿ : ಅಮೆರಿಕ ನೆಲದಲ್ಲಿ ಕನ್ನಡದ ಬೀಜಗಳ ಬಿತ್ತನೆ

*ವಿಶ್ವೇಶ್ವರ ದೀಕ್ಷಿತ, ಲಾಸ್‌ಏಂಜಲಿಸ್‌, ಯುಎಸ್‌ಎ

As published in ThatsKannada.com on 02 Dec 2002 https://kannada.oneindia.com/nri/article/2002/0212kannadakali.html
ಕನ್ನಡ ಕಲಿ ಎಂದರೆ ಏನು ?
  • ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಪರಿಸರ ನಿರ್ಮಿಸುವ ಜನ ಮೂಲ ಪ್ರಯತ್ನ
  • ಮಕ್ಕಳು ಅಲ್ಲದೆ, ಆಸಕ್ತಿ ಉಳ್ಳ ಎಲ್ಲರಿಗೂ ಕನ್ನಡ ಕಲಿಯಲು ಅವಕಾಶ ಇಲ್ಲಿದೆ.
ಪ್ರೇರಣೆ
  • ಬೆಳೆಯುತ್ತಿರುವ ಮಕ್ಕಳು, ಕನ್ನಡ ನಾಡಿನ ಹೊರಗೆ ಇದ್ದು, ಕನ್ನಡ ಸಂಸ್ಕೃತಿಯಿಂದ ದೂರವಾಗುತ್ತಿರುವ ಭಾವ.
  • ‘ಕನ್ನಡಿಗ’ ಆಗಲು ಕನ್ನಡ ಭಾಷೆ ಅವಶ್ಯ ಎಂಬ ನಮ್ಮ ನಂಬಿಕೆ.
  • ಅರಳು ಮಲ್ಲಿಗೆಯ ಕನ್ನಡ ಕಲಿಸುವ ಪ್ರಯೋಗದ ಉತ್ತೇಜನಕಾರಿ ಪರಿಣಾಮ- ತಿಂಗಳು ಒಂದರಲ್ಲಿ 20 ನಿಮಿಷ ಮಾತ್ರ.
ಪ್ರಾರಂಭ
  • ಸೆಪ್ಟೆಂಬರ್‌ 2000, ಇರ್ವೈನ್‌ನಲ್ಲಿ ಆರು ಮಕ್ಕಳೊಂದಿಗೆ ಮೊದಲ ಶಾಲೆ ಪ್ರಾರಂಭ.
  • ಇರ್ವೈನ್‌ ಕಮ್ಯೂನಿಟಿ ಕೇಂದ್ರದಲ್ಲಿ ಉಚಿತ ಜಾಗ ಲಭ್ಯ.
  • ಸಂಭಾಷಣೆಗೆ ಆದ್ಯತೆ
  • ಉತ್ಸಾಹಿ ಮಕ್ಕಳು ತಂದೆ ತಾಯಿಯವರು ಶಿಕ್ಷಕರಿಂದ ಪ್ರೋತ್ಸಾಹ
ಪ್ರಮಾಣ
  • ನವ್ಯ ವಿಚಾರಕ್ಕೆ ಪ್ರಮಾಣ ದೊರೆತದ್ದು ಹೀಗೆ-
  • ಹ್ಯೂಸ್ಟನ್‌ ಸಮ್ಮೇಳನದಲ್ಲಿ ನಡೆದ ಘಟನೆ
  • ಇಲಿನಾಯ್‌ ಮತ್ತು ಇತರ ಕನ್ನಡ ಕೂಟಗಳ ಸಂಘಟಕರು, ಶಿಕ್ಷಕರು ಉಪಯುಕ್ತ ಸಲಹೆ ನೀಡಿದರು.
ಈಗ- 
ಇರ್ವೈನ್‌, ಡೈಮಂಡ್‌ ಬಾರ್‌, ಸರಿಟೋ, ಆನಹೈಮ್‌ ಹಿಲ್ಸ್‌ ಮತ್ತು ಪಾಮ್‌ಡೇಲ್‌ 6 ಪ್ರದೇಶಗಳಲ್ಲಿ ಕನ್ನಡ ಕಲಿ ಶಾಲೆಗಳು ಭರದಿಂದ ನಡೆಯುತ್ತಿವೆ.

ಒಟ್ಟು ಮಕ್ಕಳು 40. ಶಿಕ್ಷಕರು 10.

ಕನ್ನಡ ಕಲಿ ಚಟುವಟಿಕೆಗಳು:

ಸಂಭಾಷಣೆ- ಪ್ರಶ್ನೋತ್ತರ, ದೃಶ್ಯ, ನಟನೆ, ಕಥೆ, ಜೋಕು
ಓದು- ಪದ್ಯ, ಕಥೆ, ಕವನ
ಬರವಣಿಗೆ- ವರ್ಣಮಾಲೆ, ಕಾಗುಣಿತ, ಸುಲಭ ಶಬ್ದಗಳು, ಒತ್ತಕ್ಷರರಗಳು, ಅಂಕಿಗಳು
ಕನ್ನಡ ಆಟ- ಅಂಕಿ / ಪದ್ಯಗಳೊಂದಿಗೆ ವ್ಯಾಯಾಮ, ಶಬ್ದಗಳ ಅಂತ್ಯಾಕ್ಷರಿ - ‘ಅದು ಏನು’

ಆಕರ- ಆಧಾರಗಳು
  • ಪಠ್ಯ ಪುಸ್ತಕಗಳು
  • ಇತರ ಪುಸ್ತಕಗಳು- ಕತೆ, ಕವನ ಸಂಕಲನಗಳು
  • ಕರ್ನಾಟಕದಿಂದ ಬಂದ ಅಜ್ಜಿ- ತಾತಂದಿರು
  • ಜಾಲತಾಣಗಳು

ಕನ್ನಡ ಸವಾಲುಗಳು

- ತಂದೆ ತಾಯಿಯರು ಹಾಕುವ ಹಿಂದೇಟು
- ಮಕ್ಕಳ ಇತರ ಓದಿನ ಮೇಲೆ ಪರಿಣಾಮ
- ಅಮೇರಿಕೆಯಲ್ಲಿ ಒಂದೆಡೆ ಸೇರುವುದು ಕಠಿಣವಾಗಬಹುದು
- ಕರೆದುಕೊಂಡು ಬರುವ ಅನಾನುಕೂಲ
- ಇತರ ಮುಖ್ಯ ಚಟುವಟಿಕೆಗಳು-ಮಕ್ಕಳ ಪುಸ್ತಕಗಳು, ವಯಸ್ಸಿನಲ್ಲಿ ಅಸಮಾನತೆ.

ಕೊನೆಯ ಮಾತು, ಮುಖ್ಯ ಮಾತು

ಇಲ್ಲಿ ಕಲಿಸುವುದು / ಕಲಿಯುವುದು ಕಠಿಣ ಅಲ್ಲ
ಕನ್ನಡ ಕಲಿಯಲು ಕನ್ನಡ ಪರಿಸರವನ್ನು ನಾವು ಸೃಷ್ಟಿಸಬೇಕು- ಮನೆಯ ಒಳಗೆ ಮತ್ತು ಹೊರಗೆ
ಚಿಕ್ಕದಾಗಿ ಕೆಲವೇ ಮಕ್ಕಳೊಂದಿಗೆ ‘ಕನ್ನಡ ಕಲಿ’ ಪ್ರಾರಂಭಿಸಿ
ವರ್ಗಗಳನ್ನು ನಿಯತವಾಗಿ ನಿಯಮಿತ ಜಾಗ /ಸಮಯಗಳಲ್ಲಿ ನಡೆಸಬೇಕು
 

ಪೂರಕ ಓದಿಗೆ-
 
Tags: about, archive, kannada, karnataka, south california, kannada language, kannada learning classes, vishweshwar dixit, kannada kali classes, kannadiga children,nri kannadigas
ತಾಗುಲಿ