ಚಿತ್ರಭಾನುವಿನ ಮೊದಲ ದಿನ ಆಂಟಿಲೋಪ್‌ನಲ್ಲಿ ಮೊಳಗಿದ ‘ಕನ್ನಡ‌ ಕಲಿ’

‘ಕನ್ನಡ ಕಲಿ’ ಅಭಿಯಾನ ಯಶಸ್ವಿಯಾಗಿ ಮುಂದುವರಿದಿದೆ! ‘ಕನ್ನಡ ಕಲಿ’ ಭಾಷಾ ದಾಸೋಹ ಕೂಡ ಅಮೆರಿಕದಂಗಳದಲ್ಲಿ ನಳನಳಿಸುತ್ತಿದೆ! ಕನ್ನಡ ಜಗತ್ತು ಅಗಲವಾಗುತ್ತಿದೆ.

ಚಿತ್ರಭಾನುವಿನ ಮೊದಲ ದಿನ ಆಂಟಿಲೋಪ್‌ನಲ್ಲಿ ಮೊಳಗಿದ ‘ಕನ್ನಡ‌ ಕಲಿ’


as published on thatskannada.com on April 04, 2002 http://thatskannada.oneindia.com/nri/article/2002/2204kan-kali.html


letter a
ಒಳ್ಳೆಯ ಕೆಲಸಗಳೇ ಹೀಗೆ ; ಶುರು ತಡವಾದರೂ, ನಂತರದಲ್ಲಿ ನಾಗಾಲೋಟ. ‘ಕನ್ನಡ ಕಲಿ’ ಭಾಷಾ ದಾಸೋಹ ಕೂಡ ಅಮೆರಿಕದಂಗಳದಲ್ಲಿ ನಳನಳಿಸುತ್ತಿದೆ! ಕನ್ನಡ ಜಗತ್ತು ಅಗಲವಾಗುತ್ತಿದೆ.

ಈಗ ಆಂಟಿಲೋಪ್‌(Antelope) ವ್ಯಾಲಿಯ ಗೆಳೆಯರ ಸರದಿ. ಈ ಮುನ್ನ ಹಲವಾರು ಸಲ ‘ಕನ್ನಡ ಕಲಿ’ ಕಾರ್ಯಕ್ರಮವನ್ನು ಆಂಟಿಲೋಪ್‌ ವ್ಯಾಲಿ ಪ್ರದೇಶದಲ್ಲಿ ಪ್ರಾರಂಭಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆ ಚಿಂತನೆಗಳೆಲ್ಲ ಹರಳುಗಟ್ಟಿದ್ದು ಏಪ್ರಿಲ್‌ 13 ರ ಯುಗಾದಿಯಂದು. ಹೊಸ ಸಂವತ್ಸರದಲ್ಲಿ ಕನ್ನಡ ಕಟ್ಟುವ ನಿರ್ಧಾರ.

ಎಲ್ಲ ಕನ್ನಡಿಗರು ನಾರ್ವಾಕ್‌ನ ಸನಾತನ ಧರ್ಮ ದೇಗುಲದಲ್ಲಿ ಸಭೆ ಸೇರಿ, ಪ್ರತಿವಾರವೂ ‘ಕನ್ನಡ ಕಲಿ’ ಕಾರ್ಯಕ್ರಮವನ್ನು ನಡೆಸುವ ತೀರ್ಮಾನ ಕೈಗೊಳ್ಳುವ ಮೂಲಕ ಚಿತ್ರಭಾನುವಿಗೆ ಅರ್ಥಪೂರ್ಣ ಸ್ವಾಗತ ಕೋರಿದರು. ಶುಭಸ್ಯ ಶೀಘ್ರಂ ಅನ್ನುವಂತೆ ಯುಗಾದಿಯಂದೇ ಮೊದಲ ತರಗತಿಯ ಆರಂಭ. ‘ಕನ್ನಡ ಕಲಿ’ ಕುರಿತಾದ ಹೆಚ್ಚಿನ ವಿವರಗಳಿಗೆ ಕೃಷ್‌ ವೆಂಕಟಪ್ಪ ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : (805)2863934 , ಇ-ಮೇಲ್‌: [email protected]

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲೀಗ ಕನ್ನಡ ವಲಯದಲ್ಲೆಲ್ಲಾ ‘ಕನ್ನಡ ಕಲಿ’ ಕಾರ್ಯಕ್ರಮದ್ದೇ ಮಾತುಕತೆ. ಕನ್ನಡವೇ ಎಲ್ಲೆಲ್ಲೂ ! ಅಶ್ವಮೇಧದ ಕುದುರೆಯಂತೆ ಪ್ರದೇಶದಿಂದ ಪ್ರದೇಶಕ್ಕೆ ಕನ್ನಡ ಕಲಿ ಅಜೇಯವಾಗಿ ಸಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳ ಕನ್ನಡ ಕಲಿಯುವ ಉತ್ಸಾಹವನ್ನು ನೋಡಬೇಕು- ‘ಕನ್ನಡ ಕಲಿ’ ಆಂದೋಲನದ ಸಾರ್ಥಕತೆ ಅಲ್ಲಿ ಎದ್ದು ಕಾಣುತ್ತದೆ.

ವಾರ್ತಾ ಸಂಚಯ
ಇರ್ವಿನ್‌ನಲ್ಲಿ ಕನ್ನಡ ಕಲಿಕಾ ತರಗತಿ
ಕನ್ನಡ ಕಲಿ ; ಮುಂದುವರಿದ ಕೆಸಿಎ ಕನ್ನಡ ಡಿಂಡಿಮ ಮೊಳಗು
ಅ ಆ ಇ ಈ ಕನ್ನಡ ಕಲಿ - ಕೆಸಿಎಗೆ ಶುಭ ಹೇಳಿ

ತಾಗುಲಿ : archive, about, yugadi, vishweshwar dixit, ugadi, thatskannada, southern california, sanatana dharma temple, nri kalarava, norwalk, kris venkatappa, karnataka, kannada koota, kannada kali, kannada balaga, kannada, antelope valley,

ತಾಗುಲಿ