ಕನ್ನಡ ಕಲಿಗೆ ನಮನ: ಫ್ಯಾಮಿಲೀಸ್ ಫಾರ್‌ವಾರ್ಡ ೨೦೦೯

ಇಟ್ಟಕೊಂಡ ಉದ್ದೇಶ ಈಡೇರಿದರೆ ಸಂತಸ. ಅಂದುಕೊಂಡಕ್ಕಿಂತ ಹೆಚ್ಚಿಗೆ ಸಾಧಿಸಿದರೆ ಎಲ್ಲರಿಗೂ ಹಿಗ್ಗು. ಈ ವರ್ಷ ಫ್ಯಾಮಿಲೀಸ್ ಫಾರ್‍ವಾರ್ಡ್‌ಗೆ ೫೦ ಬೆನ್ಚೀಲಗಳನ್ನು ಒದಗಿಸುವ ಗುರಿ ಇಟ್ಟುಕೊಂಡು ಬೇಸಿಗೆಯಲ್ಲಿ ಚಿರಾಗ ದಿಕ್ಷಿತ ಕಾರ್ಯಾಚರಣೆ ಪ್ರಾರಂಭಿಸಿದ . ಗುರಿ ಮೀರಿಸಿ ಬಂದ ಕನ್ನಡ ಕಲಿಗಳ ಸ್ಪಂದನೆ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿ ಸಂಶಯವಿಲ್ಲ. "ಕನ್ನಡ ಕಲಿಗಳು ಫ್ಯಾಮಿಲೀಸ್ ಫಾರ್‍ವಾರ್ಡ್‌ನ ಗೆಳೆಯರಾಗಿದ್ದುದು ನಮ್ಮ ಸೌಭಾಗ್ಯ" ಎನ್ನುತ್ತಾರೆ ಡೆಬಿ ರೆಗೇಲೆ.

ಕನ್ನಡ ಕಲಿಗೆ ನಮನ

ಡೆಬಿ ರೆಗೇಲೆ


ಆಗಸ್ಟ ೧೦, ೨೦೦೯

ಗೆ: ಚಿರಾಗ ದೀಕ್ಷಿತ
ಕನ್ನಡ ಕಲಿ

ಚಿರಾಗ ಮತ್ತು ಕನ್ನಡ ಕಲಿ ಸ್ನೇಹಿತರೆ,

ಫ್ಯಾಮಿಲೀಸ್ ಫಾರ್‌ವಾರ್ಡಿನ `ಮರಳಿ ಶಾಲೆಗೆ' ಕಾರ್ಯಾಚರಣೆಯ ಸಹಾಯಾರ್ಥವಾಗಿ ನೀವು ಮಾಡಿರುವ ಕೆಲಸ ಅದ್ಭುತವಾದದ್ದು. ಸತತವಾಗಿ ಮೂರನೆಯ ವರ್ಷ, ನಮ್ಮ ಸಮುದಾಯದ ದುರ್ಭರ ಸ್ಥಿತಿಯಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶಾಲೆಗೆ ಬೇಕಾದ ಸಾಮಾನು-ಸಲಕರಣೆಗಳನ್ನು ತುಂಬಿದ ಬೆನ್ಚೀಲಗಳನ್ನು ಒದಗಿಸಿದ್ದೀರಿ. ಫ್ಯಾಮಿಲೀಸ್ ಫಾರ್‌ವಾರ್ಡಿನ ಕಾರ್ಯಕಾರಿ ಸಮಿತಿ, ಕೆಲಸಗಾರರು, ಮತ್ತು ಆ ಬೆನ್ಚೀಲಗಳನ್ನು ಪಡೆಯುವ ವಿದ್ಯಾರ್ಥಿಗಳ ಪರವಾಗಿ, ನಿಮ್ಮ ಉದಾರ ಸಹಾಯ, ಮತ್ತು ಶಾಲಾ ಸಲಕರಣೆಗಳನ್ನು ಹೊಂದಿಸುವಲ್ಲಿ ನಿಮ್ಮ ಪರಿಶ್ರಮಕ್ಕಾಗಿ ತುಂಬು ಹೃದಯದ ಧನ್ಯವಾದಗಳು.

ಕಳೆದ ಶುಕ್ರವಾರ ದಿನ ಒಟ್ಟು ೬೦ ಬೆನ್ಚೀಲಗಳನ್ನು ತುಂಬಿ ಕೊಟ್ಟಿದ್ದು ಹೆಮ್ಮೆ ಪಡಬೇಕಾದ ಸಾಧನೆ. ಅದಕ್ಕಾಗಿ ಸಹಾಯ ಮಾಡಿದ ಎಲ್ಲರಿಗೂ ನಮ್ಮ ಧನ್ಯವಾದಗಳು. ಈ ಬಣ್ಣದ ಬೆನ್ಚೀಲಗಳನ್ನು ಕಂಡು ಮಕ್ಕಳ ಮುಖ ಹಿಗ್ಗಿನಿಂದ ಅರಳುವುದನ್ನು ನೋಡಬೇಕು. ನಿಮ್ಮ ಅನುಕಂಪವನ್ನು ಅನುಷ್ಠಾನಕ್ಕೆ ತಂದು ಇತರರ ಜೀವನದಲ್ಲಿ ವ್ಯತ್ಯಾಸವನ್ನು ಉಂಟು ಮಾಡಿದ ನಿಮಗೆ ಧನ್ಯವಾದಗಳು. ಕನ್ನಡ ಕಲಿಗಳು ಫ್ಯಾಮಿಲೀಸ್ ಫಾರ್‌ವಾರ್ಡಿನ ಗೆಳೆಯರಾಗಿದ್ದುದು ನಮ್ಮ ಸೌಭಾಗ್ಯ!

ಡೆಬಿ ರೆಗೇಲೆ,
ಕಾರ್ಯಕರ್ತೆ,
ಫ್ಯಾಮಿಲೀಸ್ ಫಾರ್‌ವಾರ್ಡ ಅರ್ವೈನ್, ಕ್ಯಲಿಫೋರ್ನಿಯ


ತಾಗುಲಿ : geyme, Familes Forward, Debbie Regele, Chirag Dixit