ಕೈ ಚಾಚು: ಫ್ಯಾಮಿಲೀಸ್ ಫಾರ್‌ವಾರ್ಡ ೨೦೦೮

ಫ್ಯಾಮಿಲೀಸ್ ಫಾರ್‌ವಾರ್ಡ್‌ಗೆ ಬೆನ್‌ಚೀಲಗಳು


ಅಗಸ್ಟ್ ೧೨, ೨೦೦೮ , ಅರ್ವೈನ್

Image removed.ದುರ್ದೈವದಿಂದ ಮನೆ ಕಳೆದುಕೊಂಡು ನಿರ್ಗತಿಕರಾದವರಿಗೆ ಫ್ಯಾಮಿಲೀಸ್ ಫಾರ್ವಾರ್ಡ್ ಎಂಬ ಸಂಸ್ಥೆ ಸಹಾಯ ಮಾಡುತ್ತ ಬಂದಿದೆ. ಈ ನಿರ್ಗತಿಕರ ಮಕ್ಕಳೂ ಶಾಲೆಗೆ ಹೋಗಬೇಕಾದುದು ಅವಶ್ಯ. ಮಕ್ಕಳಿಗೆ ಬೇಕಾಗುವ ಶಾಲಾ ಸಲಕರಣೆಗಳನ್ನು ತುಂಬಿದ ಬೆನ್‌ಚೀಲಗಳನ್ನು ವಿತರಿಸುವುದು ಈ ಸಂಸ್ಥೆಯ ಒಂದು ಯೋಜನೆ. ಕಳೆದ ವರ್ಷದಂತೆ, ಈ ವರ್ಷವೂ ಕನ್ನಡ ಕಲಿ ಇದಕ್ಕೆ ಕೈ ನೀಡಲು ಮುಂದೆ ಬಂದಿತು. ಚಿರಾಗ ದೀಕ್ಷಿತ, ತನ್ನ ಬೇಸಿಗೆಯ ರಜೆಯಲ್ಲಿ ಶ್ರಮ ವಹಿಸಿ, ೪೦ ತುಂಬಿದ ಬೆನ್ಚೀಲಗಳನ್ನು ಅಗಸ್ಟ್ ೧೨ರಂದು ಫ್ಯಾಮಿಲೀಸ್ ಫಾರ್ವಾರ್ಡ್‌ಗೆ ಒಪ್ಪಿಸಿದ. ಹಿಂದಿನ ವರ್ಷಕ್ಕಿಂತ ಹೆಚ್ಚು ಬೆನ್ಚೀಲಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದ ಚಿರಾಗ ಮತ್ತು ಸಹಾಯ ನೀಡಿದ ಉದಾರಿಗಳಿಗೆ ಕನ್ನಡ ಕಲಿಯ ಧನ್ಯವಾದಗಳು.


ತಾಗುಲಿ : geyme, Familes Forward, Chirag Dixit