ಬಾವುಟ

ಕನ್ನಡದಲ್ಲಿ ಬಾವುಟ ಅಂದರೆ ಧ್ವಜ, ಸಂಕೇತ, ಗುರುತು ಅನ್ನುವುದು ಸಾಮಾನ್ಯ ಅರ್ಥ. ಸರಿಯೋ  ತಪ್ಪೋ, ನನಗೆ ತಿಳಿದಂತೆ, ಅದು ಹೀಗೆ ಅಂತ ಅನಿಸುತ್ತದೆ:

ಕನ್ನಡದಲ್ಲಿ ಬಾ ಅಂದರೆ ಉಬ್ಬು, ಊದು (swell). ಅದರಿಂದ ಬಾವು - ಕೈಗೆ ಬಾವು ಬಂದಿದೆ, ಕಾಲು ಬಾತಿದೆ ಇತ್ಯಾದಿ.  ಈ ಬಾವು ದೈಹಿಕ ಮತ್ತು ಇಚ್ಚಿಸದ ಉಬ್ಬು ಮಾತ್ರ ಅಲ್ಲ. ಇದಕ್ಕೆ ಮಾನಸಿಕ ಮತ್ತು ಧನಾತ್ಮಕ ಅರ್ಥವೂ ಇದೆ. ಬಾ ಎಂದರೆ ಹೆಮ್ಮೆಯಿಂದ ಬೀಗು ಎಂದೂ ಅರ್ಥ ಇದೆ. ಇದಕ್ಕೆ ಸಮಾನಾರ್ಥಕವಾದ ಇಂಗ್ಲಿಷಿನ tumefy ಪದಕ್ಕೂ ಈ ಎರಡು ಅರ್ಥಗಳು ಇವೆ.

ಇನ್ನು ಉಟ ಎನ್ನುವುದು ಉಠ್ ಪದದ ತದ್ಭವ. ಕನ್ನಡದಲ್ಲಿ ಉಟಾಯಿಸು (ಎಬ್ಬಿಸು) ಎನ್ನುವ ಪದ ಬಳಕೆಯಲ್ಲಿದೆ.

https://acegif.com/wp-content/gifs/indian-flag-2.gifಆದ್ದರಿಂದ, ಯಾವುದು ನಮ್ಮನ್ನು ಹೆಮ್ಮೆಯಿಂದ ಬೀಗಿಸಿ ಗೌರವ ಅದರಗಳಿಂದ ಎದ್ದು ನಿಲ್ಲುವಂತೆ ಮಾಡುವುದೋ ಅದು ನಮ್ಮ ಬಾವುಟ!

ಈ ದಿನ ಹಾರುತ್ತಿರುವ ಬಾವುಟದ ಎದುರು ಆಕಾಶದತ್ತ ತಲೆ ಎತ್ತಿ ನಿಂತ ಬಿಲಿಯನ್ ಭಾರತೀಯರ ಕಣ್ಣಲ್ಲಿ ಆನಂದ, ಎದೆಯಲ್ಲಿ ಹೆಮ್ಮೆ ಉಕ್ಕಿ ಹರಿಯುವುದನ್ನು ಕಂಡಾಗ ಎದ್ದು ನಿಂತರೂ  ಸರಿ, ಸಾಷ್ಟಾಂಗ  ನಮಸ್ಕರಿಸಿದರೂ  ಸರಿ.

ಎಲ್ಲ ಭಾರತೀಯ ಬಂಧುಗಳಿಗೆ ಗಣರಾಜ್ಯ ದಿನದ ಶುಭಾಶಯಗಳು!
ಜನವರಿ ೨೬, ೨೧೨೧


ಕನ್ನಡ ಕಲಿ, ಕನ್ನಡದ ಗುಟ್ಟು: ಬಾವುಟ
ಸಂಗೀತ: ಆಕಾಶ ದೀಕ್ಷಿತ
Episode 6, Year 2021 No 1, Jan 2021


ತಾಗುಲಿ : India Republic Day, Tri-color Flag