ಕನ್ನಡ ಕಲಿ: ಮುಂದುವರಿದ ಕೆಸಿಎ ಕನ್ನಡ ಡಿಂಡಿಮ ಮೊಳಗು

ಕನ್ನಡ ಕಲಿಕೆಯ ತರಗತಿಗಳು ಎಗ್ಗಿಲ್ಲದೆ ದಿಗ್ವಿಜಯ ಬಾರಿಸುತ್ತಿವೆ. ಇಂಗ್ಲೀಷು ವಾತಾವರಣದಲ್ಲಿ ನಮ್ಮ ಮಕ್ಕಳಿಗೆ ಕನ್ನಡದ ಅಕ್ಕರವನ್ನು ಪರಿಚಯಿಸುವ ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿಯನ್ನು ಗಡಿಯಾಚೆಗೆ ಬಿತ್ತುವ ಬೆಳೆಸುವ ಯೋಜನೆಯೊಂದರ ಮೆಟ್ಟಿಲು.
 

ಕನ್ನಡ ಕಲಿ : ಮುಂದುವರಿದ ಕೆಸಿಎ ಕನ್ನಡ ಡಿಂಡಿಮ ಮೊಳಗು

ವ್ಯಾಲಿ ಏರಿಯಾ ಮತ್ತು ಅನಹೈಮನ್ ಹಿಲ್ಸ್ ಏರಿಯಾದಲ್ಲಿ ಕನ್ನಡ ಕಲಿ


ಮುಖಪುಟ | -->ಸಾಹಿತ್ಯ ಸೊಗಡು | -->ಎನ್ಆರ್ಐ ಕನ್ನಡ ಕಲರವ | -->ಸಮಾಚಾರ
As published in Thatskannada.com March 2001 http://thatskannada.oneindia.in/sahitya/nri/kca2.html

ಕ್ಯಾಲಿಫೋರ್ನಿಯಾ : ಕೆಸಿಎ ವತಿಯಿಂದ ಕನ್ನಡ ಕಲಿಕೆಯ ತರಗತಿಗಳು ಎಗ್ಗಿಲ್ಲದೆ ದಿಗ್ವಿಜಯ ಬಾರಿಸುತ್ತಿವೆ. ಇಂಗ್ಲೀಷು ವಾತಾವರಣದಲ್ಲಿ ನಮ್ಮ ಮಕ್ಕಳಿಗೆ ಕನ್ನಡದ ಅಕ್ಕರವನ್ನು ಪರಿಚಯಿಸುವ ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿಯನ್ನು ಗಡಿಯಾಚೆಗೆ ಬಿತ್ತುವ ಬೆಳೆಸುವ ಯೋಜನೆಯೊಂದರ ಮೆಟ್ಟಿಲು.

ಈ ನಿಟ್ಟಿನಲ್ಲಿ ಕೆಸಿಎ ಕಳೆದ ವರ್ಷ ಆರಂಭಿಸಿದ ಕನ್ನಡ ಕಲಿಕೆಯ ತರಗತಿಗಳು ನಿರಂತರವಾಗಿ ಮುಂದುವರೆಯುತ್ತಿವೆ. ಈ ಬಾರಿ ಸಾಲು ತರಗತಿಗಳಿಗೆ ಇನ್ನೆರಡು ಪಾಠ ಶಾಲೆಯ ಸೇರ್ಪಡೆ. ಅಲ್ಲಿನ ಕನ್ನಡ ಕೂಸುಗಳಿಗೆ ಅಕ್ಕರ ಮಾಲೆಯ ಸುಲಭ ಪರಿಚಯ.

ಕರ್ನಾಟಕ ಸಾಂಸ್ಕೃತಿಕ ಸಂಘದ ಕನ್ನಡ ಕಲಿಕೆಯ ಯೋಜನೆ ಮನೆ ಆಚೆಯ ಮನೋನಂದನದಲ್ಲಿರುವ ಎಲ್ಲ ಕನ್ನಡ ಗುಂಪುಗಳಿಗೂ ಆದರ್ಶ ಅನ್ನುವುದರಲ್ಲಿ ಬೇರೆ ವಾದವಿಲ್ಲ . ಊರಿನಲ್ಲಿರುವ ಅಜ್ಜ ಅಜ್ಜಿಗೆ ಕನ್ನಡದ ಅಕ್ಷರಗಳಲ್ಲಿ ಮೋಟು ಮೋಟಾಗಿ ಮೊಮ್ಮಗಳು ಬರೆದ ಪತ್ರವನ್ನು ಓದುವಾಗ ಏನು ಖುಷಿ ತುಳುಕುವುದಿಲ್ಲ ಹೇಳಿ. ಕೆಸಿಎ ಬಿಡಿಸಿ ಕೊಟ್ಟ ದಾರಿ ಹೆದ್ದಾರಿಯಾಗಲಿ.

ಅಂದ ಹಾಗೆ ಕೆಸಿಎ ಈ ಬಾರಿ ವ್ಯಾಲಿ ಏರಿಯಾ ಮತ್ತು ಅನಹೈಮನ್ ಹಿಲ್ಸ್ ಏರಿಯಾದಲ್ಲಿ ಕನ್ನಡ ತರಗತಿಗಳನ್ನು ನಡೆಸಲಿದೆ. ವ್ಯಾಲಿ ಏರಿಯಾದಲ್ಲಿ ನಡೆವ ಕನ್ನಡ ತರಗತಿಗೆ ನಿಮ್ಮ ಮಗುವನ್ನು ಸೇರಿಸಬೇಕಿದ್ದರೆ ಈ ನಂಬರ್‌ಗೆ ಫೋನಾಯಿಸಿ.


ಗೌರಿ ಹಾವನೂರು : (೮೧೮) ೩೪೧- ೪೩೭೭. ಈ ಮೇಯ್ಲ್ [email protected]

 

ಶ್ರೀರಾಮ್ ಸುಲೂರು : (೮೧೮)- ೭೭೩- ೭೪೦೭ [email protected]

ಅನಹೈಮನ್ ಹಿಲ್ಸ್ ಪ್ರದಶದವರಾದರೆ ಫೋನಾಯಿಸಬೇಕಾದ ನಂಬರ್‌ಗಳು ಇಲ್ಲಿವೆ.

ಸರ್ವ ಪಾಟೀಲ್: (೭೧೪) ೨೮೦ -೦೨೩೫ [email protected]

ರಾಜೇಶ್ವರಿ ಶರ್ಮಾ : (೭೧೪)೨೮೧-೨೨೦೯ [email protected]

ಈಗಾಗಲೇ ಇರ್ವಿನ್ ಮತ್ತು ಡೈಮಂಡ್ ಬಾರ್‌ನಲ್ಲಿ ಕನ್ನಡ ತರಗತಿಗಳು ನಡೆಯುತ್ತಿವೆ. ಇರ್ವಿನ್ ಪ್ರದೇಶದಲ್ಲಿ ಕನ್ನಡ ಕಲಿಕಾ ತರಗತಿಗಳ ಬಗೆಗೆ ನಿಮ್ಮ ಪ್ರಶ್ನೆಗೆ ಉತ್ತರಿಸುವವರು ವಿಜಯ್ ಕೊಪ್ಪರಾಮ್ : (೯೪೯)೫೫೨-೪೦೫೫ [email protected]

ಡೈಮಂಡ್ ಬಾರ್ ಪ್ರದೇಶದಲ್ಲಿ ಸಂಪನ್ಮೂಲ ವ್ಯಕ್ತಿ ವಿಜಯ್ ಕೊಟ್ರಪ್ಪ : (೯೦೯) ೩೯೨-೧೪೫೪ [email protected]
( ಇನೋ ವಾರ್ತೆ)


ತಾಗುಲಿ :thatskannada, san fernando valley, kannada kali, anaheim hills, diamond bar

ತಾಗುಲಿ