ಸ್ಯಾನ್‌ ಫರ್ನಾಂಡೊ ವ್ಯಾಲಿಯಲ್ಲಿ ‘ಕನ್ನಡ ಸಂಕ್ರಮಣ’

ವಿಶ್ವೇಶ್ವರ ದೀಕ್ಷಿತರ ನೇತೃತ್ವದಲ್ಲಿ ಅಮೆರಿಕೆಯ ನೆಲದಲ್ಲಿ ಕನ್ನಡದ ಬೀಜಗಳನ್ನು ಊರುವ ‘ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ’ದ ಮಹತ್ವಾಕಾಂಕ್ಷಿ ಪ್ರಯತ್ನ ‘ಕನ್ನಡ ಕಲಿ’- ಈಗ ಸ್ಯಾನ್‌ ಫರ್ನಾಂಡೊ ವ್ಯಾಲಿ ಪ್ರದೇಶದಲ್ಲಿ ಚಿಗುರೊಡೆಯುತ್ತಿದೆ.
 

ಸ್ಯಾನ್‌ ಫರ್ನಾಂಡೊ ವ್ಯಾಲಿಯಲ್ಲಿ ‘ಕನ್ನಡ ಸಂಕ್ರಮಣ’

As published on thatskannada.com  on 11 Jan 2003 http://thatskannada.oneindia.in/nri/article/2003/110103kannada.html


ವಿಶ್ವೇಶ್ವರ ದೀಕ್ಷಿತರ ನೇತೃತ್ವದಲ್ಲಿ ಅಮೆರಿಕೆಯ ನೆಲದಲ್ಲಿ ಕನ್ನಡದ ಬೀಜಗಳನ್ನು ಊರುವ ‘ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ’ದ ಮಹತ್ವಾಕಾಂಕ್ಷಿ ಪ್ರಯತ್ನ ‘ಕನ್ನಡ ಕಲಿ’- ಈಗ ಸ್ಯಾನ್‌ ಫರ್ನಾಂಡೊ ವ್ಯಾಲಿ ಪ್ರದೇಶದಲ್ಲಿ ಚಿಗುರೊಡೆಯುತ್ತಿದೆ.

ಜನವರಿ 14 ರಿಂದ ಸ್ಯಾನ್‌ ಫರ್ನಾಂಡೊ ವ್ಯಾಲಿ ಪ್ರದೇಶದಲ್ಲಿ ಕನ್ನಡದ ಬೆಳಸು ಪ್ರಾರಂಭ. ಮಕರ ಸಂಕ್ರಮಣ ದಿನ ಶುರುವಾಗುತ್ತಿರುವ ‘ಕನ್ನಡ ಕಲಿ’ ಕಾರ್ಯಕ್ರಮ ಪ್ರಗತಿಯ ಪಥದಲ್ಲಿ ಕನ್ನಡ ಸಂಕ್ರಮಣವೂ ಆಗಲಿ !
ಕನ್ನಡ ಕಲಿ ತರಗತಿಗಳು ವ್ಯಾಲಿ ಹಿಂದು ಟೆಂಪಲ್‌ (Devonshire Mandir)ನಲ್ಲಿ ನಡೆಯಲಿವೆ. ಗಿರಿಜಾ ಸುಲುರ್‌, ಮೈಥಿಲಿ ಹಾಗೂ ರಾಜೇಶ್ವರಿ ಕಡೂರು (ಶಾಲಾ ಸಂಯೋಜಕಿ) ಅವರುಗಳು ಕನ್ನಡ ಕಲಿ ಕಾರ್ಯಕ್ರಮವನ್ನು ಸ್ಯಾನ್‌ ಫರ್ನಾಂಡೊ ವ್ಯಾಲಿ ಪ್ರದೇಶದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸ್ವಯಂ ಸೇವಕರಾಗಿ ಮುಂದಾಗಿದ್ದಾರೆ. ಅಂದಹಾಗೆ, ವಾರಾಂತ್ಯದ ದಿನಗಳಲ್ಲಿ (alternate weekends) ಮಧ್ಯಾಹ್ನ 1.30 ಕ್ಕೆ ತರಗತಿಗಳು ನಡೆಯಲಿವೆ.

ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಅನೇಕ ಮಕ್ಕಳು ಕನ್ನಡ ಕಲಿಯಲು ಆಸಕ್ತಿ ತೋರಿಸಿದ್ದಾರೆ. ನಿಮ್ಮ ಮಕ್ಕಳನ್ನು ಕನ್ನಡ ಕಲಿ ತರಗತಿಗೆ ಸೇರಿಸಿದ್ದೀರಾ ? ಇನ್ನೂ ಸೇರಿಸಿಲ್ಲವಾದರೆ, ಸೇರಿಸಲು ಬಯಸುವಿರಾದರೆ- ರಾಜೇಶ್ವರಿ ಕಡೂರು ಅವರನ್ನು (818)7182434 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಿ. ಇ-ಮೇಲ್‌ ವಿಳಾಸ : [email protected].

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕಲಿ

  • ANAHEIM, Homes, 2nd & 4th Saturdays,3:00 PM
   Sarva Patil,(714) 2800235, [email protected] hotmail.com
  • CERRITOS, Room 4, Sanatana Dharma Temple, Norwalk
   Alternate Saturdays,3:00 PM
   Arathi Maganti, (562) 2291974, [email protected] hotmail.com
  • DIAMOND BAR, Homes, Alternate Sundays, 10:00AM
   Vijay Kotrappa (909)6233185 [email protected] guidance.com
  • IRVINE Deerfield Community Center
   2nd & 4th Saturdays, 1:00 PM
   Vijay Kopparam (949) 5524055 [email protected]
  • PALMDALE, Home/ Temple, Alternate Saturdays 10AM
   Kris Venkatappa (661)5381651 [email protected] msn.com

 ಕನ್ನಡ ಸಂಚಯ
ಕನ್ನಡ ಕಲಿ : ಅಮೆರಿಕ ನೆಲದಲ್ಲಿ ಕನ್ನಡದ ಬೀಜಗಳ ಬಿತ್ತನೆ
ಅ ಆ ಇ ಈ ಕನ್ನಡ ಕಲಿ - ಕೆಸಿಎಗೆ ಶುಭ ಹೇಳಿ
ಮುಂದುವರಿದ ಕೆಸಿಎ ಕನ್ನಡ ಡಿಂಡಿಮ ಮೊಳಗು
ಚಿತ್ರಭಾನುವಿನ ಮೊದಲ ದಿನ ಆಂಟಿಲೋಪ್‌ನಲ್ಲಿ ‘ಕನ್ನಡ ಕಲಿ’
ಇರ್ವಿನ್‌ನಲ್ಲಿ ಕನ್ನಡ ಕಲಿಕಾ ತರಗತಿ
 


    ತಾಗುಲಿ :  about, archive, vishweshwar dixit, valley hindu temple, sankranti, san fernando valley, rajeswari kadur, nri kalarava, mythili, karnataka, kannada learning classes, kannada koota, kannada kali classes, kannada balaga, kannada, girija sulur, america

ತಾಗುಲಿ