ಬೆನಕ ನಮನ

ಗಣೇಶ, ಡೊಂಕು ಕೊಂಬಿನ, ಡೊಳ್ಳು ಹೊಟ್ಟೆಯ, ದೊಡ್ಡ ಮೈಯ, ಒಂದೆ ಕೋರೆಯ, ಇಲಿ ವಾಹನದ, ಬೆನಕ, ಎಲ್ಲರಿಗೂ ಆಯಸ್ಸು ಆರೋಗ್ಯಗಳನ್ನು ನೀಡು; ಸದ್ಬುದ್ಧಿಯನ್ನು  ಕೊಡು; ಅವರ ಪ್ರಯತ್ನಗಳಿಗೆ ಬರುವ ಎಡರುಗಳನ್ನು ಅಳಿಸು;
ಯಶಸ್ಸು ಅವರದಾಗಲಿ. ಎಲ್ಲ ಜನ ಜೀವಿ, ಜೀವ ಜಂತು, ಜೀವಾತ್ಮರುಗಳಿಗೆ ಶಾಂತಿ ಸುಖ ದೊರಕಲಿ. ಎಲ್ಲರಿಗೂ  ಒಳ್ಳೆಯದಾಗಲಿ;
ಮಾನವ್ಯ ಬೆಳೆಯಲಿ; ಮಾನವೀಯತೆ ಬೆಳಗಲಿ!

ಈಗ ಶ್ರೀ ಶಂಕರ ಭಗವತ್ಪಾದರ ಮಾತಿನಲ್ಲಿ[*] ಬೆನಕನಿಗೆ ನಮಿಸೋಣ

ಅವಿರತ ಅಪೂರ್ವ ಸಂಗತಿ

ಕನ್ನಡ ಕಲಿ  ಒಂದು ಅವಿರತ ಅಪೂರ್ವ ಸಂಗತಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೈಬೆರಳಿನಲ್ಲಿ ಎಣಿಸುವಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯ್ತು. ಕೂಡಲೆ , ೮೦ಕ್ಕೂ ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಕನ್ನಡ ಕಲಿಯ ಐದು ಅಧ್ಯಾಯಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿಕೊಂಡವು.  ಈಗ ನಾವು ೨೨೦+ ಸದೃಢರಾಗಿದ್ದೇವೆ ಮತ್ತು ಇನ್ನು ಬೆಳೆಯುತ್ತಿದ್ದೇವೆ. ಕಳೆದ ವರ್ಷವೆ ಹೊಸ ಕನ್ನಡ ಕಲಿ ಶಾಲೆಯೊಂದು ಟಾರೆನ್ಸ್ ನಲ್ಲಿ ಪ್ರಾರಂಭವಾಯ್ತು.