Learning

ಕನ್ನಡ ಕಲಿ ಪಠ್ಯಕ್ರಮದ ಸ್ಥೂಲ ರೂಪ ಮತ್ತು ಸಾಧನೆಯ ಹಂತಗಳು

ಕನ್ನಡ ಕಲಿಯಲು ನಾಲ್ಕು ದಳಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಕಲಿ ಅರಳಿ ಹೂವಾಗಬೇಕಾದರೆ ಎಲ್ಲ ದಳಗಳನ್ನು ಸಾಧಿಸುವುದು ಅಗತ್ಯ.

 

ಕನ್ನಡ ಕಲಿ ಶಾಲೆಗಳು

ದಕ್ಷಿಣ ಕ್ಯಲಿಫೋರ್ನಿಯದ ಅವೈನ್ ನಗರದಲ್ಲಿ ಮೊದಲ ಕನ್ನಡ ಶಾಲೆ ರವಿವಾರ ಸಪ್ಟಂಬರ್ ೨೪, ೨೦೦೦ ರಂದು ಪ್ರಾರಂಭವಾಯ್ತು. ಕೂಡಲೆ, ಸ್ಯಾನ್ ಫ಼ರ್ನಾಂಡೊ ವ್ಯಾಲಿ, ಸರಿತೊಸ್, ಡೈಮಂಡ್ ಬಾರ್, ಆರ್ಕೇಡಿಯಗಳಲ್ಲಿ ಕನ್ನಡ ಶಾಲೆಗಳು ಸ್ಥಳೀಯ ಮಕ್ಕಳಿಗೆ ಕನ್ನಡ ಕಲಿಸಲಾರಂಭಿಸಿದವು. ಕಳೆದ ೧೫ ವರ್ಷಗಳಲ್ಲಿ ಕನ್ನಡ ಕಲಿತು ಕಾಲೇಜುಗಳಿಗೆ ತೆರಳಿದ್ದಾರೆ. ಈಗ, ಮೂರು ಶಾಲೆಗಳು ಅನೇಕ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಡೆಸುತ್ತ ಕನ್ನಡ ಕಲಿ ಕ್ರಿಯಾಕೇಂದ್ರಗಳಾಗಿ ಕನ್ನಡ ಕಂಪನ್ನು ಪಸರಿಸುತ್ತಿವೆ.


ಕನ್ನಡ ಕಲಿ ಕ್ರಿಯಾಕೇಂದ್ರಗಳು: