ಕನ್ನಡ ಕಲಿ ದಿನ ೨೦೧೯

ಕನ್ನಡ ಕಲಿ  ದಿನ ೨೦೧೯
ಮಾರ್ಚ್ ೧೩, ೨೦೧೯
ಜೈನ ಕೇಂದ್ರ, ದಕ್ಷಿಣ ಕ್ಯಲಿಫೋರ್ನಿಯ


ಕನ್ನಡ ಕಲಿ ದಿನ, ಶಾಲೆಗಳಿಂದ ದೂರವಾಗಿ, ನಾವು ಒಂದುಗೂಡಿ ಸಂಭ್ರಮಿಸುವ ದಿನ. ಇಲ್ಲಿ ನಮ್ಮೂರ ಜಾತ್ರೆಯಂತೆ ಸಂತಸ ಅಮಿತವಾದದ್ದು. ನಾವು ಕಲಿತದ್ದನ್ನು ತೋರಿಸಿಕೊಳ್ಳಲು, ವಿಚಾರಗಳನ್ನು ಹಂಚಿಕೊಳ್ಳಲು, ಹೊಸ ಗೆಳೆಯರನ್ನು ಮಾಡಿಕೊಳ್ಳಲು, ಮತ್ತು ನಮ್ಮ ಕನ್ನಡ ಒಲವನ್ನು ಇಮ್ಮಡಿಸಿಕೊಳ್ಳಲು ಇದೊಂದು ಪ್ರಶಸ್ತ ದಿನ. ಒಂದು ದಿನ ಕನ್ನಡದಲ್ಲಿ ಮುಳುಗಿರುವ ನಮ್ಮ ಮಕ್ಕಳ ನಲಿವೆ ನಮಗೆ ಸ್ಫೂರ್ತಿಯ ಸೆಲೆ.
ಹಿಂದಿನ ಬಾರಿ ಅತಿಥೇಯರಾಗಿದ್ದಾಗಲೆ, ನಾಟಕ ಮತ್ತು ವೇದಿಕೆಯ ಆಧಾರದ ಶೈಲಿಯಿಂದ ಹೊರಳಿ ಆಟಮತ್ತು ಮಳಿಗೆ ಆಧಾರಿತ ಶೈಲಿಯನ್ನು ಕನ್ನಡ ಕಲಿ ದಿನಕ್ಕೆ ಪರಿಚಯಿಸಿದ ಸರಿಟೊಸ್ ತಂಡಕ್ಕೆ ಅಭಿನಂದನಗಳು. ಇದೊಂದು ಕಲ್ಪನಾಯುಕ್ತ ಆಕರ್ಷಕ ಆಚರಣೆಯ ವಿಧಾನವಾಗಿದೆ. ಇದಕ್ಕೆ ಪೂರ್ವಸಿದ್ಧತೆ, ಸಂಘಟನೆ, ಮತ್ತು ಹಿನ್ನೆಲೆಯ ಶ್ರಮ ಬೇಕೇ ಬೇಕು. ಅತಿಥೇಯ ಸರಿಟೊಸ್ ಕನ್ನಡ ಶಾಲೆ, ಅವೈನ್, ಟಾರನ್ಸ್, ಮತ್ತು ವ್ಯಾಲಿ ಶಾಲೆಗಳ ಸ್ವಯಂಸೇವಕರಿಗೆ ಹೃತ್ಪೂರ್ವಕ ನಮನಗಳು. ಈ ಕನ್ನಡ ಕಲಿ ದಿನವನ್ನು ಮರೆಯದಂತೆ ಮನದಲ್ಲಿ ಅಚ್ಚು ಮೂಡಿಸಲು ಒಂದುಗೂಡಿರುವ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ತಂದೆತಾಯಿಯರಿಗೆ ಅಭಿನಂದನೆಗಳು.

ಪೂರಕ ಓದು: ಅವಿರತ ಅಪೂರ್ವ ಸಂಗತಿ