ಜಾಗತಿಕ ಹಳ್ಳಿ ಹಬ್ಬ ೨೦೦೯ - ರೇಷ್ಮೆ ಸಂಪ್ರದಾಯ

ಜಾಗತಿಕ ಹಳ್ಳಿ ಹಬ್ಬ ೨೦೦೯

ರೇಷ್ಮೆ - ಸಂಪ್ರದಾಯದಿಂದ ನವ್ಯತೆಗೆ


ಅರ್ವೈನ್  ಜಾಗತಿಕ ಹಳ್ಳಿ ಹಬ್ಬ ೨೦೦೯ ರಲ್ಲಿ   http://www.cityofirvine.org/globalvillage) ಕನ್ನಡ ಕಲಿ ಮತ್ತೆ ಮಿಂಚಲಿದೆ. ಅಕ್ಟೊಬರ್ ೩, ೨೦೦೯ ರಂದು ಜರುಗಲಿರುವ ಈ ಸಾಂಸ್ಕೃತಿಕ ಜಾತ್ರೆಯಲ್ಲಿ, "ರೇಷ್ಮೆ - ಸಂಪ್ರದಾಯದಿಂದ ನವ್ಯತೆಗೆ" ಎನ್ನುವ ಕಾರ್ಯಕ್ರಮದಲ್ಲಿ ಕನ್ನಡ ಹುಡುಗ ಹುಡುಗಿಯರು ಬೆಕ್ಕಿನ ನಡೆಯಲ್ಲಿ ಬೆಡಗಿನ ಪ್ರದರ್ಶನ ನೀಡಲಿದ್ದಾರೆ. ಕರ್ನಾಟಕದ ರೇಷ್ಮೆ ವೈಶಿಷ್ಟ್ಯ, ವೈವಿಧ್ಯ, ಕೌಶಲ್ಯ, ಮತ್ತು ಕೆಲಸಗಾರರಿಗೆ ಕನ್ನಡಿ ಹಿಡಿಯಲಿದ್ದಾರೆ.

ಸುಮಾರು ಮುವ್ವತ್ತು ಜನ ರಂಗ ಮಂಚದ ಮೇಲೆ ಸಂಗೀತದ ಹಿನ್ನಲೆಯಲ್ಲಿ ಲಘು ನೃತ್ಯ, ಚೆಲು ನಡಿಗೆಯಲ್ಲಿ, ಸಿಲ್ಕಿನ ಸುಳಿಗಾಳಿ ಬಿಸುತ್ತ ಮೋಡಿ ಹಾಕಲಿದ್ದಾರೆ. ಕನ್ನಡ ಕಲಿಯ ಮಕ್ಕಳು ವ್ಯಾಖ್ಯಾನ  ನೀಡುವ ಈ ಕಾರ್ಯಕ್ರಮವನ್ನು ರೂಪಿಸಿದವರು ಧಾರಿಣಿ ದೀಕ್ಷಿತ.