ಜಾಗತಿಕ ಹಳ್ಳಿ ಹಬ್ಬ ೨೦೦೮ - ಭಾರತ ವೈಭವ

ಅರ್ವೈನ್ ಜಾಗತಿಕ ಹಳ್ಳಿ ಹಬ್ಬದಲ್ಲಿ ಭಾರತ ವೈಭವ


ಶನಿವಾರ ಅಕ್ಟೊಬರ ೪, ೨೦೦೮

ಬಿಲ್ ಬಾರ್ಬರ್ ಉದ್ಯಾನ, ಅರ್ವೈನ್, ಕ್ಯಲಿಫೊರ್ನಿಯ 

೧೧:೩೦ಕ್ಕೆ ಅರ್ವೈನ್ ನಗರಸಭೆಯ ಮುಂದಿರುವ ಪಾರ್ಕಿನಲ್ಲಿ ಅರ್ವನಿನ ಜಾಗತಿಕ ಹಳ್ಳಿ ಹಬ್ಬ, ವಿವಿಧ ಸಂಸ್ಕೃತಿಗಳ ಸಂಗಮ http://www.cityofirvine.org/globalvillage.

ಕರ್ನಾಟಕದ ಸಂಸ್ಕೃತಿಯನ್ನು ಕನ್ನಡ ಕಲಿ ಮತ್ತೆ ಪರಿಚಯಿಸಿ ಕೊಡುತ್ತ, ಇತರ ಭಾರತೀಯ ಸಮುದಾಯಗಳೊಂದಿಗೆ `ಭಾರತ ವೈಭವ' ಎಂಬ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿತು. ಕೋಲಾಟ, ನೃತ್ಯ, ಕೊನೆಯಲ್ಲಿ  ೬೦ ಮಕ್ಕಳು ಒಮ್ಮೆಲೆ ರಂಗದ ಮೇಲೆ ವಂದೇ ಮಾತರಂ ಹಾಡಿ ಎಲ್ಲರ ಎದೆ ಉಕ್ಕಿ ಬರುವಂತೆ ಮಾಡಿದರು.

ಇದರೊಂದಿಗೆ ಕನ್ನಡ ಕಲಿ ತಿಂಡಿಗಳ ಪುಟ್ಟ ಮಳಿಗೆ ಹಾಕಿತ್ತು. ಇದರಿಂದ ಬಂದ ಲಾಭವನ್ನು ಫ್ಯಾಮಿಲೀಸ್ ಫಾರ್ವಾರ್ಡ್‌ನ ಬೆನ್‌ಚೀಲ ಯೋಜನೆಗೆ ತೆಗೆದಿಡಲಾಯಿತು.

ಈ ಕಾರ್ಯಕ್ರಮದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: http://www.nirand.net/igvf/2008/kki/video.html