ಇಟ್ಟಕೊಂಡ ಉದ್ದೇಶ ಈಡೇರಿದರೆ ಸಂತಸ. ಅಂದುಕೊಂಡಕ್ಕಿಂತ ಹೆಚ್ಚಿಗೆ ಸಾಧಿಸಿದರೆ ಎಲ್ಲರಿಗೂ ಹಿಗ್ಗು. ಈ ವರ್ಷ ಫ್ಯಾಮಿಲೀಸ್ ಫಾರ್‍ವಾರ್ಡ್‌ಗೆ ೫೦ ಬೆನ್ಚೀಲಗಳನ್ನು ಒದಗಿಸುವ ಗುರಿ ಇಟ್ಟುಕೊಂಡು ಬೇಸಿಗೆಯಲ್ಲಿ ಚಿರಾಗ ದಿಕ್ಷಿತ ಕಾರ್ಯಾಚರಣೆ ಪ್ರಾರಂಭಿಸಿದ . ಗುರಿ ಮೀರಿಸಿ ಬಂದ ಕನ್ನಡ ಕಲಿಗಳ ಸ್ಪಂದನೆ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿ ಸಂಶಯವಿಲ್ಲ. "ಕನ್ನಡ ಕಲಿಗಳು ಫ್ಯಾಮಿಲೀಸ್ ಫಾರ್‍ವಾರ್ಡ್‌ನ ಗೆಳೆಯರಾಗಿದ್ದುದು ನಮ್ಮ ಸೌಭಾಗ್ಯ" ಎನ್ನುತ್ತಾರೆ ಡೆಬಿ ರೆಗೇಲೆ.