ಕನ್ನಡ ಕಲಿಯ ಮೊದಲ ಅಧ್ಯಾಯ ( ಕನ್ನಡ ಕಲಿ ಶಾಲೆ ) ಸಪ್ಟಂಬರ‌ 24, 2000ರಂದು ಕ್ಯಲಿಫೋರ್ನಿಯದ ಅರ್ವೈನ್ ನಗರದಲ್ಲಿ ಪ್ರಾರಂಭವಾಯಿತು. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಲ್ಲಿ ಹುದುಗಿದ ಆಸೆಗೆ ಅದು ಜೀವ ತುಂಬಿತು. ಕೆಲವೇ ತಿಂಗಳಲ್ಲಿ ಇನ್ನೂ ನಾಲ್ಕು ಅಧ್ಯಾಯಗಳು ಈ ತೆಂಕಣ ಪ್ರದೇಶದ ವಿಸ್ತಾರದಲ್ಲಿ ಹುಟ್ಟಿಕೊಂಡವು. ವಾರಾಂತ್ಯದಲ್ಲಿ ನಿಯತವಾಗಿ ಸೇರುತ್ತ ಸಾಮಾನ್ಯ ಪಠ್ಯಕ್ರಮವನ್ನು ರೂಪಿಸಿಕೊಂಡವು. ಮಕ್ಕಳು ಕನ್ನಡ ಕಲಿಯುವುದರ ಜೊತೆ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿಇಲ್ಲಿನ ಜನರಿಗೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಕೂಡ ಸಮರ್ಥರಾಗಿದ್ದಾರೆ.

ನಿಮ್ಮ ಮಕ್ಕಳು ಕನ್ನಡ ಮಾತನಾಡಬೇಕೆ? ನೀವು ಕನ್ನಡ ಕಲಿಸಬಯಸುತ್ತಿರಾ? ಹೊರದೇಶದಲ್ಲಿ ಕನ್ನಡ ಕಲಿಸಲು ನಿಮ್ಮಲ್ಲಿ ಉತ್ತಮ ಯೋಜನೆಗಳು ಇವೆಯೆ?

ನಿಮ್ಮ ಊರಿನಲ್ಲೂ ಒಂದು ಕನ್ನಡ ಕಲಿ ಶಾಲೆಯನ್ನು ಏಕೆ ಪ್ರಾರಂಭಿಸಬಾರದು!

ಕೂಡಲೆ ಒಂದು ಈ-ಮೇಲ್ ರವಾನಿಸಿ: kannadakali at yahoo.com

ಕನ್ನಡ ಕ‌ಲಿಯ ಉಗಮ, ಉದ್ದೇಶ, ಬೆಳವಣಿಗೆ, ನಡೆದು ಬಂದ ಹಾದಿಯ ಬಗ್ಗೆ ತಿಳಿದುಕೊಳ್ಳಲು ಇತರೆಡೆ ಪ್ರಕಟಿತವಾದ ಲೇಖನಗಳನ್ನು ಇಲ್ಲಿ ಕಡತದಲ್ಲಿ ಹಿಡಿದಿಡಲಾಗಿದೆ.

 •  ಇರ್‍ವಿನ್‌ನಲ್ಲಿ ಕನ್ನಡ ಕಲಿಕಾ ತರಗತಿ ನೀವು ಸೇರಿದ್ದಾಯಿತಾ ? ನಿಮ್ಮ ಮಕ್ಕಳಿಗೆ, ಸ್ನೇಹಿತರಿಗೆ ಕನ್ನಡ ಕಲಿಯಬೇಕು, ಕಲಿಸಬೇಕು ಎಂದುಕೊಂಡಿದ್ದೀರಾ. ಎಂಥ ಒಳ್ಳೆ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದೆ ನೋಡಿ.
   
 • ಬೆಂಗಳೂರಿನಂಥ ಪ್ರದೇಶಗಳಲ್ಲಿ ಕನ್ನಡ ಕಲಿಕೆ ತರಗತಿಗಳನ್ನು ನಡೆಸುವುದು ಅಕಾಡೆಮಿಗಳಿಗೇ ಕಷ್ಟವಾಗಿರುವ ಸಂದರ್ಭದಲ್ಲಿ ಸೀಮೆಯಾಚೆ ಕನ್ನಡ ಕಲಿಸಲು ಮುಂದಾಗಿರುವ ಕೆಸಿಎಗೆ, ಅಭಿನಂದನೆ - ಶುಭಾಶಯ
   
 • ಕನ್ನಡ ಕಲಿ ಎಂದರೆ ಏನು ?
   
 • ‘ಕನ್ನಡ ಕಲಿ’ ಅಭಿಯಾನ ಯಶಸ್ವಿಯಾಗಿ ಮುಂದುವರಿದಿದೆ!  ‘ಕನ್ನಡ ಕಲಿ’ ಭಾಷಾ ದಾಸೋಹ ಕೂಡ ಅಮೆರಿಕದಂಗಳದಲ್ಲಿ ನಳನಳಿಸುತ್ತಿದೆ! ಕನ್ನಡ ಜಗತ್ತು ಅಗಲವಾಗುತ್ತಿದೆ. 
   
 • ವಿಶ್ವೇಶ್ವರ ದೀಕ್ಷಿತರ ನೇತೃತ್ವದಲ್ಲಿ ಅಮೆರಿಕೆಯ ನೆಲದಲ್ಲಿ ಕನ್ನಡದ ಬೀಜಗಳನ್ನು ಊರುವ ‘ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ’ದ ಮಹತ್ವಾಕಾಂಕ್ಷಿ ಪ್ರಯತ್ನ ‘ಕನ್ನಡ ಕಲಿ’- ಈಗ ಸ್ಯಾನ್‌ ಫರ್ನಾಂಡೊ ವ್ಯಾಲಿ ಪ್ರದೇಶದಲ್ಲಿ ಚಿಗುರೊಡೆಯುತ್ತಿದೆ.
   
 • ಕನ್ನಡ ಕಲಿಕೆಯ ತರಗತಿಗಳು ಎಗ್ಗಿಲ್ಲದೆ ದಿಗ್ವಿಜಯ ಬಾರಿಸುತ್ತಿವೆ. ಇಂಗ್ಲೀಷು ವಾತಾವರಣದಲ್ಲಿ ನಮ್ಮ ಮಕ್ಕಳಿಗೆ ಕನ್ನಡದ ಅಕ್ಕರವನ್ನು ಪರಿಚಯಿಸುವ ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿಯನ್ನು ಗಡಿಯಾಚೆಗೆ ಬಿತ್ತುವ ಬೆಳೆಸುವ ಯೋಜನೆಯೊಂದರ ಮೆಟ್ಟಿಲು.
   
 • ಅನಂತಮೂರ್ತಿ, ಕಂಬಾರ ಸೇರಿದಂತೆ ಅನೇಕರ ಬಲು ಬಯಕೆಯೆಂದರೆ `ಅಮೆರಿಕಾದ ಕಂದಮ್ಮಗಳಿಗೆ ಕನ್ನಡ ಕಲಿಸಿ' ಎಂಬುದು. ಇಂಥಾ ಜರೂರತ್ತಿಗೆ ಸಣ್ಣದೊಂದು ಘಟನೆ ಕುಮ್ಮಕ್ಕು ಕೊಟ್ಟು , ಇವತ್ತು ೬ ಕನ್ನಡ ಕಲಿ ಶಾಲೆಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತಲೆಯೆತ್ತಿವೆ. ಇದು ಹಕೀಕತ್ತಾದ, ಸುಲಭವಲ್ಲದ ಹಾದಿಯ ಅನುಭವ ಲೇಖನವಿದು.